ಕೊಪ್ಪಳ : ಕ್ಷಯ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸಿ: ಪ್ರಭಾರ ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪೂಜಾರ

ಕೊಪ್ಪಳ 25: ಕೊಪ್ಪಳ ಜಿಲ್ಲೆಯನ್ನು ಕ್ಷಯ ಮುಕ್ತ ಮಾಡಲು ಸಹಕರಿಸಿ ಎಂದು ಪ್ರಭಾರ ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರರವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಲಯ, ಸರಕಾರಿ ಆರೋಗ್ಯ ಕೇಂದ್ರ ಹಿರೇಸಿಂದೋಗಿ ಇವರ ಸಹಯೋಗದಲ್ಲಿ ಹೊಸಪೇಟಿ ರಸ್ತೆಯ ಆರ್.ಟಿ.ಓ ಕಛೇರಿಯ ಹತ್ತಿರವಿರುವ ಅಭಯ ಸಾಲವೇಂಟ್ ರೈಸ್ಮಿಲ್ ಕಾಮರ್ಿಕರಿಗೆ ``ಕ್ಷಯ ರೋಗ ಪತ್ಯೆ ಮತ್ತು ಚಿಕಿತ್ಸಾ ಆಂದೋಲನ'' ಹಾಗೂ ಇನ್ನೀತರ ರೋಗಗಳ ಕುರಿತು ಬುಧವಾರಂದು (ಜುಲೈ.24) ಹಮ್ಮಿಕೊಳ್ಳಲಾದ ಅರಿವು ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಕ್ಷಯರೋಗ ಕುರಿತು 02 ವಾರಗಳಿಂದ ಸತತ ಕೆಮ್ಮು, ಸಾಯಂಕಾಲ ವೇಳೆ ಜ್ವರ ಬರುವುದು, ಸಂಜೆ ರಾತ್ರಿ ಮೈ ಬೇವರುವುದು. ತೂಕ ಕಡಿಮೆಯಾಗುವುದು, ಹಸಿವುಯಾಗದೇ ಇರುವುದು, ಮೈ ನಡುಕುವುದು, ಕೆಮ್ಮಿದಾಗ ರಕ್ತ ಬರುವುದು, ಎದೇ ನೋವು ಉಂಟಾಗುವುದು, ಕಿವಿ ಕೆಳಗೆ & ಕಂಕುಳದಲ್ಲಿ ಗಡ್ಡೆಗಳು ಕಾಣಿಸಿದರೆ ಇಂತಹ ಲಕ್ಷಣಗಳು ಯಾರಿಗಾದರೂ ಕಂಡು ಬಂದರೆ ತಮ್ಮ ಸಮೀಪದ ಸರ್ಕಾರಿ  ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಜು. 15ರಿಂದ 27ರ ವರೆಗೆ ನಗರ ಪ್ರದೇಶದ ಕೊಳಚೆ ಪ್ರದೇಶ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಲೋನಿ, ಕಾರ್ಖಾನೆ ಏರಿಯಾ ಪ್ರದೇಶಗಳಲ್ಲಿ ಕಿರಿಯ ಆರೋಗ್ಯ ಸಹಾಯಕರು ಮತ್ತು  ಆಶಾ ಕಾರ್ಯಕತರ್ೆಯರು ಮನೆ ಮನೆ ಬೇಟಿ ನೀಡಿ ಕ್ಷಯರೋಗ ಸಮೀಕ್ಷೆ ಮಾಡುತ್ತಾರೆ. ತಮ್ಮ ಹತ್ತಿರ ಬಂದಾಗ ಮಾಹಿತಿ ನೀಡಿ, ಹಾಗೂ ನಮ್ಮ ಜಿಲ್ಲೆಯನ್ನು ಕ್ಷಯ ಮುಕ್ತ ಸಮಾಜ ನಿರ್ಮಾಣ  ಮಾಡಲು ಸಹಕರಿಸಬೇಕು ಎಂದು ಪ್ರಭಾರ ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರರವರು ಹೇಳಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಇವರು ಮಾತನಾಡಿ ಭಾರತದಲ್ಲಿ  ಶೇ. 40;ರಷ್ಟು ಜುನರು ಮೈಕೋ ಬ್ಯಾಕ್ಟೀರೀಯಾ ಟ್ಯೂಬರ್ಕೀಲೋಸಿಸ್ ರೋಗದಿಂದ ಬಳಲುತ್ತಿದ್ದಾರೆ. ಪ್ರತಿ ದಿನ 6000 ಜನರಿಗೆ ಕ್ಷಯ ರೋಗ ಹರಡುತ್ತದೆ. ಅದೇ ರೀತಿ ಭಾರತದಲ್ಲಿ ಪ್ರತಿ ದಿನ 600 ಜನರು ಈ ಕ್ಷಯ ರೋಗದಿಂದ ಸಾವನ್ನುಪ್ಪುತ್ತಿದ್ದಾರೆ. ಈ ರೋಗದಲ್ಲಿ ಎರಡು ಪ್ರಕಾರಗಳಿವೆ.  ಶ್ವಾಸಕೋಶ ಕ್ಷಯ, ಶ್ವಾಸಕೋಶತರ ಕ್ಷಯ ಎರಡು ವಿಧಗಳಿಗೆ ಮುಂಜಾಗೃತೆಯಾಗಿ ಕ್ಷಯರೋಗ ಎಂದು ದೃಡಪಟ್ಟ ಕೂಡಲೇ 06 ರಿಂದ 08 ತಿಂಗಳವರೆಗೆ ಎಲ್ಲಾ ಸರ್ಕಾರಿ  ಆಸ್ಪತ್ರೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮತ್ತು ಕ್ಷಯರೋಗಿಯು ಕೆಮ್ಮವಾಗ & ಸೀನುವಾಗ ಬಾಯಿ ಮತ್ತು  ಮೂಗಿನ ಮೇಲೆ ಕರವಸ್ತ್ರ ಇಟ್ಟುಕೊಂಡು ಕೆಮ್ಮಬೇಕು. ಎಲ್ಲೆಂದರಲ್ಲಿ ಉಗಳಬಾರದು. ಮುಖಕ್ಕೆ ಮಾಸ್ಕ ದರಿಸಬೇಕು. ಕ್ಷಯರೋಗಿಯು ಪೌಷ್ಠಿಕತೆ ಆಹಾರ ಸೇವಿಸಬೇಕು. ಈ ಪೌಷ್ಠಿಕ ಆಹಾರ ಸಲುವಾಗಿ ಸಕರ್ಾರದಿಂದ 500 ರೂಗಳನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಹುಟ್ಟಿದ ಪ್ರತಿಯೊಂದು ಮಗುವಿಗೆ ಬಿ.ಸಿ.ಜಿ ಲಸಿಕೆಯನ್ನು ಹಾಕಿಸಬೇಕು 2025ನೆ ಇಸ್ವಿಗೆ. ಮುಂದುವರೆದು ಜನಸಂಖ್ಯೆ ನಿಯಂತ್ರಣ ಮತ್ತು ಅದರ ಸಮಸ್ಯೆಗಳು, ಮಲೇರಿಯಾ, ಡೆಂಗ್ಯೂ ಚಿಕನಗೂನ್ಯ ಮುಂತಾದ ರೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ಮಲ್ಲಣ್ಣ, ಶರಣಪ್ಪ, ಮಲ್ಲಿಕಾಜರ್ುನ, ಮಾಂತಮ್ಮ ಹಾಗೂ ಆಶಾ ಕಾರ್ಯಕರ್ತೆ ಯರು ಕೊಪ್ಪಳ, ಬಾಗಲಕೋಟೆ, ಬಿಜಾಪುರ ಜಿಲ್ಲೆಯ ಹಾಗೂ ಬಿಹಾರ ರಾಜ್ಯದ ಕಾರ್ಮಿಕರು ಭಾಗವಹಿಸಿ ಕಾರ್ಯಕ್ರಮದ ಮಾಹಿತಿ ಪಡೆದರು.