ಲೋಕದರ್ಶನ ವರದಿ
ಕೊಪ್ಪಳ 05: ಕೇಂದ್ರದಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು. ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿರುವ ನರೇಂದ್ರ ಮೋದಿ ಸಕರ್ಾರ ರೈತರ, ಕಾಮರ್ಿಕರ, ಯುವಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ರೈತರ ಸಾಲ ಮನ್ನಾಮಾಡಲು ನಿಯೋಗ ತೆರಳಿದಾಗ ಅದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲಿ ನಿಯೋಗದಲ್ಲಿದ್ದ ಬಿಜೆಪಿ ಮುಖಂಡರು ಈ ಬಗ್ಗೆ ಪ್ರದಾನಿ ಹತ್ತಿರ ಮಾಮಾತನಾಡಲಿಲ್ಲ ಇಂಥವರ ಕೈಗೆ ಹೇಗೆ ಅಧಿಕಾರ ಕೊಡುವುದು. ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸಕರ್ಾರ 5 ವರ್ಷ ಸುಭದ್ರ ಆಡಳಿತ ನಡೆಸಿದ್ದು, ರಜ್ಯದ ಜನರ ಸಮಸ್ಯೆಗೆ ಸ್ಪಂದಿಸಿದೆ.
ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಒಬ್ಬರೇ ಒಬ್ಬ ಹಿಂದುಳಿದವರಿಗೆ ಟಿಕೆಟ್ ನೀಡಿದ್ದಾರಾ ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಕೆ.ಎಸ್. ಈಶ್ವರಪ್ಪ ಸಾಮಾಜಿಕ ನ್ಯಾಯದ ವಿರೋಧಿ ಎಂದು ಜರಿದರು. ಕೆ.ಎಸ್. ಈಶ್ವರಪ್ಪ ಹಿಂದುಳಿದ ನಾಯಕರಲ್ವಾ ಒಬ್ಬರೆ ಒಬ್ಬರಿಗೆ ಟಿಕೆಟ್ ಕೊಟ್ಟಿದ್ದಾರಾ ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸಿದರು. ಈಶ್ವರಪ್ಪಗೆ ಸ್ವಾಭಿಮಾನವಿದ್ದರೆ ಬಿಜೆಪಿಗೆ ಗುಡ್ ಬೈ ಹೇಳಿ ಹೊರಬರಲಿ.
ಪ್ರತಿಯೊಂದು ಕುಟುಂಬಕ್ಕೆ ವರ್ಷಕ್ಕೆ 72 ಸಾವಿರ ರೂಪಾಯಿ ಹಾಕುವ ವಿಚಾರವನ್ನು ಅತ್ಯಂತ ಯೋಜನಾ ಬದ್ದವಾಗಿ ಮಾಡುತ್ತೇವೆ. ಭಾರತದ ಬಜೆಟ್ 25 ಲಕ್ಷಕ್ಕೂ ಹೆಚ್ಚು ಕೋಟಿ ರೂಪಾಯಿ. ಆದರೆ ಕೇಂದ್ರ ಸಕರ್ಾರ ಈ ಯೋಜನೆಗೆ ವರ್ಷಕ್ಕೆ 3 ಲಕ್ಷ ಕೋಟಿ ಕೊಡೋಕೆ ಆಗಲ್ವಾ ಇದು ಅಂತಹ ಸಮಸ್ಯೆಯಾಗೋದಿಲ್ಲ. ಬಿ. ಶ್ರೀರಾಮುಲುಗೆ ಪ್ರಣಾಳಿಕೆ ಅರ್ಥವಾಗೋದಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಇನ್ನು ಮಂಡ್ಯದಲ್ಲಿ ಸುಮಲತಾರನ್ನು ಬೆಂಬಲಿಸಿರುವ ಬಿಜೆಪಿ. ಕಾಂಗ್ರೆಸ್ ಧ್ವಜವನ್ನು ಹಿಡಿದು ಹೋಗ್ತಾರೆ ಎಂದು ಆರೋಪಿಸಿದರು. ನಾವು ಯಾವುದೇ ದೇಶದ್ರೋಹ ಕಾನೂನನ್ನು ಸಡಿಲ ಮಾಡೋದಿಲ್ಲ. ಈಗಾಗಲೇ ಬಿಡುಗಡೆಯಾಗಿರುವ ಪ್ರಣಾಳಿಕೆಯಲ್ಲಿ ಕೆಲವೊಂದಿಷ್ಟು ತಿದ್ದುಪಡಿ ಮಾಡುತ್ತೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಮಾತನಾಡಿ, ನಮಗೆ ಅಧಿಕಾರ ಕೊಟ್ಟರೆ ವಿದೇಶದಲ್ಲಿರು ಕಪ್ಪುಹಣವನ್ನು ವಾಪಸ್ ತರುತ್ತೇವೆ ಎಂದು ಹೇಳಿದ ಪ್ರಧಾನಿ ಮೋದಿ ಈಗ ಆಬಗ್ಗೆ ಮಾತನಾಡುತ್ತಿಲ್ಲ. ಹಿಂದೆ ಛಾಯ್ವಾಲಾ ಎಂದು ಅಧಿಕಾರಕ್ಕೆ ಬಂದಿದ್ದು, ಈಗ ಚೌಕೀದಾರ ಹೆಸರಿನಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಕನರ್ಾಟಕದ ಜನ ಬುದ್ದಿವಂತರು ಅವರ ಮಾತಿಗೆ ಮರುಳಾಗುವುದಿಲ್ಲ. ಕೇಂದ್ರ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಗ್ಯಾಸ್,ಡಿಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು ಇದು ಜನಸಾಮನ್ಯರಿಗೆ ಮಾಡಿದ ಅನ್ಯಾಯವಾಗಿದೆ. ಇದನ್ನು ಅರಿತಿರುವ ಜನ ಈ ಬಾರಿ ಕಾಂಗ್ರಸ್ಗೆ ಮತ ಹಾಕಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ವೆಂಕಟರಾವ್ ನಾಡಗೌಡ, ಈ ತುಕಾರಾಮ, ಮುಖಂಡರಾದ ಸಿಎಂ ಇಬ್ರಾಹಿಂ, ಎಚ್.ಕೆ. ಪಾಟೀಲ್, ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ, ಕೆ. ವಿರೂಪಾಕ್ಷಪ್ಪ, ಇಕ್ಬಾಲ್ ಅನ್ಸಾರಿ, ಶಿವರಾಮಗೌಡ, ಪ್ರತಾಪಗೌಡ ಪಾಟಿಲ್, ಶ್ರೀನಾಥ ಇತರರಿದ್ದರು.