ಲೋಕದರ್ಶನ ವರದಿ
ಕೊಪ್ಪಳ 11: ತಾಲೂಕಿನ ಬೂದಗುಂಪಾ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ ಬೂದಗುಂಪಾ(ಕೆ) ಶಾಖೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಥರ್ಿಕ ಸಕ್ಷರತಾ ಕೇಂದ್ರ ಕೊಪ್ಪಳ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಹಣಕಾಸು ಸಾಕ್ಷರತಾ ಸಪ್ತಾಹ, ತೋಟಗಾರಿಕೆ ಬಗ್ಗೆ ಹಾಗೂ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ತರಬೇತಿ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬ್ಯಾಂಕ ವ್ಯವಸ್ಥಾಪಕ ಸಿ.ಬಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಮುಖ್ಯಅತಿಥಿಗಳಾಗಿ ಜಿಲ್ಲಾ ತೋಟಗಾರಿಕೆ ಇಲಾಖೆಯ ವಿಷಯ ತಜ್ಷರು ವಾಮನ್ ಮೂತರ್ಿಯವರು ಕಾರ್ಯವನ್ನು ಉದ್ದೇಶಿಸಿ ಮಾತನಾಡಿ, ರೈತರಿಗೆ ತೋಟಗಾರಿಕೆ ಹಾಗೂ ನೀರು ನಿರ್ವಹಣೆ, ಇಸ್ರೇಲ್ ಮಾದರಿ ಬೇಸಾಯ ಬಗ್ಗೆ ಸಂಪೂರ್ಣ ಮಾಹಿತಿ ಜೊತಗೆ ಸಮಗ್ರ ಕೃಷಿಯಿಂದ ರೈತರ ಬಾಳು ಹಸನವಾಗುತ್ತದೆ ಮತ್ತು ಕನರ್ಾಟಕ ಬ್ಯಾಂಕಿನವರು ಏರ್ಪಡಿಸಿದ ಇಂತಹ ಕಾರ್ಯಕ್ರಮಗಳಿಂದ ರೈತರ ಸಮಸ್ಯೆಗಳನ್ನು ತಿಳಿದು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದು ಶ್ಲಾಘಿಸಿದರು.
ನಂತರ ಎಸ್ಬಿಐ ಹಣಕಾಸು ಸಲಹೆಗಾರರು ಬಿ.ಎಂ. ಪ್ರಭುದೇವರವರು ಮಾತನಾಡಿ, 43 ವರ್ಷಗಳಿಂದ ಈ ಮೊದಲು ತುಂಗಭದ್ರಾ, ಪ್ರಗತಿ, ಪ್ರಗತಿ ಕೃಷ್ಣ ಮತ್ತು ಈಗ ಕನರ್ಾಟಕ ಗ್ರಾಮೀಣ ಬ್ಯಾಂಕ ಆಗಿ ಪರಿವರ್ತನೆಯೊಂದಿಗೆ ಈ ಬ್ಯಾಂಕ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಗಳಿಸಿದ ಸ್ವಲ್ಪ ಹಣದಲ್ಲಿಯೇ ಹೇಗೆ ಉಳಿತಾಯ ಮಾಡಬೇಕು ಮತ್ತು ಉಳಿತಾಯ ಮಾಡುವುದು ನಿಮ್ಮ ಉದ್ದಾರಕ್ಕೆ ಉಪಯೋಗವರೆತು ಬ್ಯಾಂಕಿಗೆ ಅಲ್ಲ ಉಳಿತಾಯವೇ ಆಪಧನ ಎಂಬುದನ್ನು ಹಾಗೂ ಅಟಲ್ ಪೇನಷನ್ ಯೋಜನೆ, ಜೀವನ ಸುರಕ್ಷಾ ಬಿಮಾ ಯೋಜನೆ, ಜೀವನ ಜ್ಯೋತಿ ಬೀಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸಾಲ ಪಡೆದು ದುಡಿದು ಸಾಲ ತೀರಿಸಬೇಕು ವಿನಃ ಸಾಲ ಮನ್ನಾ ಆಗುವುದೆಂದು ಕಾಯಬಾರದು ಎಂದು ತಿಳಿಸಿದರು.
ಇನ್ನೊರ್ವ ಅತಿಥಿಯಾದ ಕೊಪ್ಪಳದ ಎಸ್ಬಿಐ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ಲಕ್ಷ್ಮೀಕಾಂತ ರವರು ಮಾತನಾಡಿ, ತಮ್ಮ ತರಬೇತಿ ಕೇಂದ್ರದ ಕಾರ್ಯಕ್ರಮಗಳ ಬಗ್ಗೆ ಯುವಕ ಯುವತಿಯರಿಗೆ ಅನುಕೂಲವಾಗುವ ಉದ್ಯೋಗ ತರಬೇತಿಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ರೈತ ಮುಖಂಡರಾದ ಬಸವರಾಜ ಬಾವಿಕಟ್ಟಿ, ಕೋಟೇಶ್ವರರಾವ್, ದಾಸಪ್ಪ, ರೈತ ಸಂಘದ ಮುಖಂಡ ಹನುಮಂತಪ್ಪ, ಬ್ಯಾಂಕಿನ ಅಧಿಕಾರಿಗಳಾಸ ಪದ್ಮ ಸಾಹಿಬಾಬಾ, ಸಿಬ್ಬಂದಿ ದೀಪಕ್, ಮೇಹೆಬೂಬ, ವ್ಯವಹಾರ ಪ್ರತಿನಿಧಿಗಳಾದ ಮಂಜುನಾಥ, ಶರಣೇಗೌಡ, ಇತರರು ಭಾಗವಹಿಸಿದ್ದರು.
ಆರಂಭದಲ್ಲಿ ಶಾಲಾ ವಿದ್ಯಾಥರ್ಿನಿಯರಾದ ಕಾವ್ಯ ಹಾಗೂ ಶಿಲ್ಪಾರವರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಬ್ಯಾಂಕ ಸಿಬ್ಬಂದಿ ಶರಣಯ್ಯ ಸ್ವಾಗತಿಸಿದರು, ಕೊನೆಯಲ್ಲಿ ವ್ಯವಸ್ಥಾಪಕ ಸಿ.ಬಿ.ಪಾಟೀಲ ವಂದಿಸಿದರು.