ಕೊಪ್ಪಳ : ಈ.ಕ.ರ.ಸಾ. ಸಂಸ್ಥೆಯಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ಚೆಕ್ ವಿತರಣೆ

ಕೊಪ್ಪಳ 04: ಈ.ಕ.ರ.ಸಾ. ಸಂಸ್ಥೆ ಕೊಪ್ಪಳ ವಿಭಾಗದ ಗಂಗಾವತಿ ಘಟಕದ ನಿರ್ವಹಕ (1314)  ಕೆ. ಹಾಲಪ್ಪ   (54) ಅವರು  ಮೃತಪಟ್ಟಿದ್ದು, ಅವರ  ಕುಟುಂಬಕ್ಕೆ ಈ.ಕ.ರ.ಸಾ. ಸಂಸ್ಥೆಯಿಂದ ಇತ್ತಿಚೆಗೆ ಪರಿಹಾರ ನಿಧಿ ಚೆಕ್ ವಿತರಿಸಲಾಯಿತು.  

ಈ.ಕ.ರ.ಸಾ. ಸಂಸ್ಥೆ ಕೊಪ್ಪಳ ವಿಭಾಗದ ಗಂಗಾವತಿ ಘಟಕದ ನಿವರ್ಾಹಕ (1314)  ಕೆ. ಹಾಲಪ್ಪ  (54) ಅವರು ಅನಾರೋಗ್ಯದಿಂದ  ಮೃತಪಟ್ಟಿದರಿಂದ ಸಂಸ್ಥೆಯ ನಿಯಮಾವಳಿ ಪ್ರಕಾರ ಮೃತರ ಅವಲಂಬಿತ ಕುಟುಂಬಕ್ಕೆ ಆಂತರಿಕ ಗುಂಪು ವಿಮಾ ಯೋಜನೆಡಿಯಲ್ಲಿ  ಎರಡು ಲಕ್ಷ ತೋಂಬತ್ತೇಳು ಸಾವಿರದ ಎಂಟುನೂರು ರೂಪಾಯಿಗಳ ಚಕ್ನ್ನು ಸಂಸ್ಥೆಯ ವಿಭಾಗಿಯ ನಿಯಂತ್ರಣಾಧಿಕಾರಿ ಜೆ.ಮೊಹಮ್ಮದ್ ಫೈಜ್ ಹಾಗೂ ದೇವಾನಂದ ಬಿರದಾರ್, ವಿಭಾಗೀಯ ಸಂಚಾರ ಅಧಿಕಾರಿ ಮತ್ತು ಸಹಾಯಕ ಲೆಕ್ಕಾಧಿಕಾರಿ ಜಯಶ್ರೀ, ಹಾಗೂ ( ಪ್ರಭಾರ) ಕಾಮರ್ಿಕ ಕಲ್ಯಾಣಾಧಿಕಾರಿ ಕನಕಪ್ಪ ಬಂಗಾರಿ ಅವರು ಮೃತನ ಕುಟುಂಬಕ್ಕೆ ವಿತರಿಸಿದರು.