ಕೊಪ್ಪಳ 18: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ನಿಮಿತ್ತ ಮೇ. 23 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ರವರ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷ ಅಭ್ಯರ್ಥಿಗಳೊಂದಿಗೆ ಸಭೆ ನಡೆಯಿತು.
ಮತ ಎಣಿಕಾ ಸಿದ್ಧತೆಯ ಬಗ್ಗೆ ಸ್ಪಧರ್ಿಸುತ್ತಿರುವ ಅಭ್ಯರ್ಥಿಗೆ ಗಳೊಂದಿಗೆ ವಿಷಯ ಸೂಚಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಸಭೆ ಜರುಗಿತು.
ಮತ ಎಣಿಕಾ ಸಿದ್ಧತೆ ಕುರಿತು ವಿವರಣೆ: ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೊಪ್ಪಳ ನಗರದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ. ಕಾಲೇಜಿನ ನೆಲ ಮಹಡಿಯಲ್ಲಿ 58-ಸಿಂಧನೂರು, 59-ಮಸ್ಕಿ, 61-ಕನಕಗಿರಿ, 92-ಸಿರಗುಪ್ಪ ಹಾಗೂ ಮೊದಲ ಮಹಡಿಯಲ್ಲಿ 60-ಕುಷ್ಟಗಿ, 62 ಗಂಗಾವತಿ, 63-ಯಲಬುಗರ್ಾ, 64-ಕೊಪ್ಪಳ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಚುನಾವಣಾಧಿಕಾರಿಗಳ ಕೊಠಡಿ 01, ಅಂಚೆ ಮತಪತ್ರ ಎಣಿಕಾ ಟೇಬಲ್ 04 (ಪ್ರತ ಟೇಬಲ್ಗೆ ಒಬ್ಬರಂತೆ) ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕಾ ಏಜೆಂಟರ ನೇಮಕಾತಿ: ಪ್ರತಿ ಅಭ್ಯರ್ಥಿಗೆ ಮತ ಎಣಿಕಾ ಕೊಠಡಿಗೆ 14 ಜನ (14/8 ವಿಧಾನಸಭಾ ಕ್ಷೇತ್ರ=112) ಮತ ಎಣಿಕಾ ಎಜೆಂಟರುಗಳನ್ನು ನೇಮಕ ಮಾಡಲಾಗಿದೆ. ನೇಮಿಸಬಹುದಾದ ಗರಿಷ್ಠ ಏಜೆಂಟರ ಸಂಖ್ಯೆ 117.
ಅಭ್ಯಥರ್ಿ ಅಥವಾ ಚುನಾವಣಾ ಏಜೆಂಟರುಗಳು ನಿಗದಿಪಡಿಸಿದ ನಮೂನೆ-18ರಲ್ಲೇ ಎಣಿಕಾ ಏಜೆಂಟರ ನೇಮಕಾತಿಗಾಗಿ ಪ್ರಸ್ತಾವನೆಯನ್ನು ಮೇ. 19 ಒಳಗಾಗಿ ಸಲ್ಲಿಸಬೇಕು. ಹಾಗೂ ಜಿಲ್ಲಾಧಿಕಾರಿ ಕಾಯರ್ಾಲಯದಿಂದ ಎಣಿಕಾ ಏಜೆಂಟರ ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬೇಕು. ಅಭ್ಯಥರ್ಿ ಹಾಗೂ ಎಣಿಕಾ ಏಜೆಂಟರು ಅಥವಾ ಯಾವುದೇ ವ್ಯಕ್ತಿಗಳಿಗೆ ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಮತ ಎಣಿಕಾ ಕಾರ್ಯವು ಮೇ. 23 ರಂದು ಬೆಳಿಗ್ಗೆ 08 ಗಂಟೆಗೆ ಪ್ರಾರಂಭವಾಗಲಿದ್ದು, ಮತ ಎಣಿಕಾ ಏಜೆಂಟರುಗಳು ನಿಗದಿತ ಸಮಯಕ್ಕೆ ಉಪಸ್ಥಿತರಿರಬೇಕು. ಎಣಿಕಾ ಏಜೆಂಟರು ನೇಮಿಸಲಾದ ಟೇಬಲ್ನಲ್ಲಿ ಮಾತ್ರ ಉಪಸ್ಥಿತರಿರುವುದು. ಬೇರೆ ಟೇಬಲ್ ಅಥವಾ ಕೊಠಡಿಗಳಲ್ಲಿ ಅವರಿಗೆ ಪ್ರವೇಶವಿರುವುದಿಲ್ಲ. ಮತ ಎಣಿಕಾ ಕಾರ್ಯವು ಮುಕ್ತಾಯವಾಗುವವರೆಗೆ ನಿಗದಿಪಡಿಸಿದ ಟೇಬಲ್ನಲ್ಲಿ ಮಾತ್ರ ಕೂರಬೇಕು.
ಇವಿಎಂಗಳ ಮತ ಎಣಿಕಾ ಕಾರ್ಯ ಮುಕ್ತಾಯವಾದ ನಂತರ ಪ್ರತಿ ವಿಧಾನಸಭಾ ಕ್ಷೇತ್ರಗಳ 5 ಮತಗಟ್ಟೆಗಳ ವಿವಿಪ್ಯಾಟ್ಗಳನ್ನು ಆಯ್ಕೆಮಾಡಿ ವಿವಿಪ್ಯಾಟ್ಗಳಲ್ಲಿರುವ ಸ್ಲಿಪ್ಗಳ ಎಣಿಕೆ ಮಾಡಲಾಗುವುದು. ಈ ಅವಧಿಯಲ್ಲಿ ನಿಗದಿಪಡಿಸಲಾದ ವಿಸಿಬಿ (ವಿವಿಪ್ಯಾಟ್ ಕೌಂಟಿಂಗ್ ಬೂತ್)ಗಳಿಗೆ ಒಬ್ಬ ಏಜೆಂಟರು ಉಪಸ್ಥಿತರಿರುವಂತೆ ನೋಡಿಕೊಳ್ಳುವುದು. ಹಾಗೂ ಈ ಕುರಿತು ನೇಮಕಾತಿ ಏಜೆಂಟರುಗಳಿಗೆ ತಿಳಿಯಪಡಿಸಬೇಕು. ಮತ ಎಣಿಕಾ ಏಜೆಂಟರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ. ಚಹಾ ಹಾಗೂ ಲಘು ಉಪಹಾರವನ್ನು ಮೊತ್ತ ಪಾವತಿ ಆಧಾರದ ಮೇಲೆ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಆವರಣದಲ್ಲಿರುವ ಕ್ಯಾಂಟೀನ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಣಿಕಾ ಕಾರ್ಯ ಮುಕ್ತಾಯವಾಗಿ ಚುನಾವಣಾಧಿಕಾರಿಗಳಿಂದ ಅಧಿಕೃತ ಫಲಿತಾಂಶವನ್ನು ಘೋಷಿಸಿದ ನಂತರ ಎಲ್ಲಾ ವಿದ್ಯುನ್ಮಾನ ಮತಯಂತ್ರ ಹಾಗೂ ಚುನಾವಣಾ ಶಾಸನಬದ್ಧ, ಶಾಸನಬದ್ಧವಲ್ಲದ ದಾಖಲೆಗಳನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಇವಿಎಮ್ ಸ್ಟ್ರಾಂಗ್ರೂಮ್ನಲ್ಲಿ ಸಂಗ್ರಹಿಸಿಡಲಾಗುವುದು. ಈ ಸ್ಟ್ರಾಂಗ್ರೂಮ್ಗೆ 24/7 ಮಾದರಿಯಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿರುತ್ತದೆ. ಮತ ಎಣಿಕಾ ಕಾರ್ಯವು ಮುಕ್ತ, ಶಾಂತರೀತಿಯಿಂದ ಹಾಗೂ ನ್ಯಾಯಸಮ್ಮತವಾಗಿ ಕೈಗೊಳ್ಳಲು ಎಲ್ಲಾ ಅಭ್ಯಥರ್ಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ರವರ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಉಪವಿಭಾಧೀಕಾರಿ ಸಿ.ಡಿ. ಗೀತಾ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ರಾಜಕೀಯ ಪಕ್ಷದವರು ಹಾಗೂ ಅಭ್ಯಥರ್ಿಗಳು ಉಪಸ್ಥಿತರಿದ್ದರು.