ಕೊಪ್ಪಳ : ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡಿ

ಕೊಪ್ಪಳ 12: ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಮತದಾನ ಮಾಡಿ ಎಂದು ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಹೇಳಿದರು.

ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಲಯ ಹಾಗೂ ಪ್ರಾ.ಆ.ಕೇಂದ್ರ ಇರಕಲ್ಲಗಡ ಇವರ ಸಂಯುಕ್ತ ಆಶ್ರಯದಲ್ಲಿ ಏ. 11 ರಂದು ಇರಕಲ್ಲಗಡ ವ್ಯಾಪ್ತಿಯ ತಾಳಕನಾಕಪುರ ಹಾಗೂ ಹನುಮನಟ್ಟಿ ಗ್ರಾಮದಲ್ಲಿ ಜರುಗಿದ ''ಮತದಾರರ ಜಾಗೃತಿ ಕಾರ್ಯಕ್ರಮ'' ದಲ್ಲಿ ಭಾಗವಹಿಸಿ ಮಾತನಾಡಿದರು.  

ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಅಭಿವೃಧ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ''ಪ್ರಜೆಗಳಿಂದ ಪ್ರಜೆಗಳಿಗೊಸ್ಕರ ಪ್ರಜೆಗಳೇ ನಡೆಸುವ ಸಕರ್ಾರ ಪ್ರಜಾಪ್ರಭುತ್ವವಾಗಿದೆ". 18 ವರ್ಷ ತುಂಬಿದ ಪ್ರತಿಯೊಬ್ಬರು ಹಾಗೂ ವಿಕಲಚೇತನರು, ವೃದ್ದರು, ಗಭರ್ಿಣಿ ಸ್ತ್ರೀಯರು, ಎಲ್ಲರೂ ಸೇರಿ ಬಲಿಷ್ಠ ಭಾರತ ನಿಮರ್ಾಣ ಮಾಡಲು  ಎಪ್ರೀಲ್, 23 ರಂದು ನಡೆಯುವ ಲೋಕಸಭಾ ಚುನಾವಣಿ ದಿನದಂದು ಎಲ್ಲರೂ ತಮ್ಮ ಅತ್ಯ ಅಮೂಲ್ಯವಾದ ಮತದಾನದ ಹಕ್ಕುನ್ನು ಚಲಾಯಿಸಿ ದೇಶದ ಅಭಿವೃಧ್ಧಿಗೊಳಿಸುವಲ್ಲಿ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ನಿಮ್ಮ ಒಂದು ಮತ ದೇಶದ ಪ್ರಗತಿಗೆ ಹಿತವಾಗಿದೆ. ಯಾವುದೇ ಆಸೆ ಆಮೇಶಗಳಿಗೆ ಒಳಗಾಗದೇ ತಮ್ಮ ಮತವನ್ನು ಮಾರಿಕೊಳ್ಳದೇ ನಿಷಪಕ್ಷ ಪಾತವಾಗಿ ಮತದಾನ ಮಾಡುವಂತೆ ಮತ್ತು ಜನರ ತೀಪರ್ು ಅಂತಿಮ ತೀಪರ್ುವಾಗಿದ್ದು, ಯಾವುದೇ ಕಾರಣದಿಂದ ಕುಂಟು ನೆಪ ಹೇಳದೆ  ''ಕಡ್ಡಾಯವಾಗಿ 100% ರಷ್ಟು ಮತದಾನ'' ಮಾಡುವಂತೆ ತಿಳಿಸಿದರು. ನಂತರ ಮತದಾರರ ಪ್ರತಿಜ್ಞಾವಿಧಿ ಬೋದಿಸಿದರು.  

ಕಾರ್ಯಕ್ರಮದಲ್ಲಿ ಎಸ್.ಟಿ.ಎಲ್.ಎಸ್ ಕೃಷ್ಣ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಇವರು ಕ್ಷಯ ರೋಗದ ಮುಂಜಾಗೃತೆ ಹಾಗೂ ಚಿಕಿತ್ಸೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಿ.ಆ.ಸ, ಶರಣಬಸಪ್ಪ, ಆಶಾ ಕಾರ್ಯಕರ್ತೆ ಯರು ಹಾಗೂ ಅಂಗನವಾಡಿ ಕಾರ್ಯಕರ್ತೆ ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.