ಮೈಸೂರು: ಕಾವೇರಿ ನದಿಯ ಪ್ರವಾಹದಿಂದಾಗಿ ಸುಮಾರು ಸುಮಾರು 200 ವರ್ಷದಷ್ಟು ಹಿಂದಿನ ವೆಲ್ಲೆಸ್ಲಿ ಸೇತುವೆ ಕೊಚ್ಚಿ ಹೋಗಿದೆ, ಕೊಳ್ಳೆಗಾಲ ತಾಲೂಕಿನ ಸತ್ಯಗಾಲ ಸಮೀಪವಿದ್ದ ವೆಲ್ಲೆಸ್ಲಿ ಸೇತುವೆ ಕಬಿನಿ ಮತ್ತು ಕೆಆರ್ ಎಸ್ ಜಲಾಯಶಯಗಳಿಂದ ನೀರು ಹರಿಸಿದ ಪರಿಣಾಮ ಸೇತುವೆ ಕೊಚ್ಚಿ ಹೋಗಿದೆ.
1799ರಲ್ಲಿ ಕರ್ನಲ್ ಆರ್ಥೂರ್ ವೆಲ್ಲೆಸ್ಲಿ ಸತ್ಯಗಾಲ ಸಮೀಪ ಈ ಸೇತುವೆ ನಿರ್ಮಿಸಿದ್ದ, ಆದರೆ ತುಂಬಾ ಹಳೇಯದಾದ ಕಾರಣ ಸೇತುವೆ ಇದಾಗಿದ್ದು ಶಿಥಿಲಗೊಂಡಿತ್ತು. ಮಾಜಿ ಸಚಿವ ಎಚ್.ಎಸ್ ಮಹಾದೇವ್ ಪ್ರಸಾದ್ ಜಲಪಾತೋತ್ಸವ ಆರಂಭಿಸಿದ್ದರು, ಈ ವೇಳೆ ಐತಿಹಾಸಿಕ ಸೇತುವೆಯನ್ನು ಪುನರ್ ಸ್ಥಾಪಿಸಬೇಕು ಎಂದು ಈ ಹಿಂದೆ ವಿದ್ಯಾವಂತ ನಾಗರಿಕರು ಆಗ್ರಹಿಸಿದ್ದರು.ಆದರೆ ಅದು ನೇರವೇರಲಿಲ್ಲ.
ಸೋಮವಾರ ನೀರಾವರಿ ಇಲಾಖೆ ಕೆಆರ್ ಎಸ್ ನಿಂದ 76 ಸಾವಿರ ಕ್ಯೂಸೆಕ್ಸ್ ಹಾಗೂ ಕಬಿನಿಯಿಂದ 40 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದಾರೆ. ಕೊಡಗು ಮತ್ತು ವೈನಾಡು ಪ್ರದೇಶಗಶಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ, ನೀರಿನ ಹೊರ ಹರಿವು ಹೆಚ್ಚಿದೆ. ಹೀಗಾಗಿ ಬೃಂದಾವನ ಗಾರ್ಡನ್ ಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ.