ಸಮಾಜವನ್ನು ಸುಧಾರಣೆಯತ್ತ ಒಯ್ಯಲು ಕಾನೂನಿನ ಅರಿವು ಅಗತ್ಯ: ನ್ಯಾ. ಶ್ರೀನಿವಾಸ್

ಲೋಕದರ್ಶನ ವರದಿ

ಕೊಪ್ಪಳ 09: ಪ್ರತಿಯೊಬ್ಬ ವ್ಯಕ್ತಿಯು ಸಮಾಜಕ್ಕೆ ಸೇವೆಯನ್ನು ಸಲ್ಲಿಸಲು ತನ್ನನ್ನು ತಾನು ತೊಡಗಿಸಿಕೊಂಡಾಗ ಒಂದು ಸಮಾಜವು ಸುಧಾರಣೆಯತ್ತ ಕೊಂಡಯ್ಯಲು ಸಾಧ್ಯವೆಂದು ಸದಸ್ಯ ಕಾರ್ಯದಶರ್ಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಟಿ.ಶ್ರೀನಿವಾಸ್ ಅವರು ಹೇಳಿದರು. 

ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಪ್ಪಳ, ಜಿಲ್ಲಾ ವಕೀಲರ ಸಂಘ, ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಭಾರತವು ಹಿಂದೆ ಬಡತನದಿಂದ ಕೂಡಿದ ರಾಷ್ಟ್ರವಾಗಿ ಬಿಂಬಿತವಾಗಿತ್ತು. ಕಾರಣ ಜನರು ಮೂಢನಂಬಿಕೆೆ, ಅನಕ್ಷರತೆಯಿಂದ ಕಾನೂನು ಬಗ್ಗೆ ತಿಳುವಳಿಕೆ ಇರಲಿಲ್ಲ. ಅದಕ್ಕಾಗಿ 1987 ರಲ್ಲಿ ಒಂದು ಮುಖ್ಯ ಉದ್ದೇಶವನ್ನೊಳಗೊಂಡ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಅಧಿನಿಯಮವನ್ನು ಜಾರಿಗೆ ತರುವುದರ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ಉಚಿತ ಕಾನೂನು ಅರಿವು-ನೆರವು ನೀಡುವುದರ ಮೂಲಕ ಭಾರತವನ್ನು ಕಾನೂನು ಸಾಕ್ಷರತಾ ರಾಷ್ಟ್ರವನ್ನಾಗಿ ಮಾಡಲು ಹೆಜ್ಜೆಯಿಟ್ಟಿತು. ಇದರಿಂದ ಜನರಿಗೆ ಸರಳವಾಗಿ ನ್ಯಾಯ ಸಿಗುವಂತೆ ತನ್ನ ಉದ್ದೇಶವನ್ನು ಈಡೇರಿಸುತ್ತಾ ಬಂದಿರುತ್ತದೆ. ಕಾನೂನು ವಿದ್ಯಾಥರ್ಿಗಳಾದ ನೀವು ಸಮಾಜದಲ್ಲಿ ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನರ ಸಮಸ್ಯಗಳನ್ನ ಆಲಿಸಿ ಅವರಿಗೆ ಸೂಕ್ತವಾದ ಸಲಹೆಯನ್ನು ನೀಡುವಂತೆ ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ದಿವಾಕರ್ ಜಿ. ಬಾಗಲಕೋಟ, ವಕೀಲರು, ಕೊಪ್ಪಳ, ಮಾತನಾಡುತ್ತ ಈ ಕಾನೂನಡಿಯಲ್ಲಿ ಜನರ ಮನೆ ಬಾಗಿಲಿಗೆ ಹೋಗಿ ಕಾನೂನು ಅರಿವು ಮೂಡಿಸುವುದು ಕಾನೂನು ವಿದ್ಯಾಥರ್ಿಗಳ ಮುಖ್ಯ ಜವಬ್ದಾರಿಯಾಗಿದೆ ಎಂದರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ.ಎಸ್. ಹನಸಿ, ಮಾತನಾಡಿ ಜನತಾ ನ್ಯಾಯಲಯವು ಪ್ರತಿಯೊಬ್ಬರಿಗೂ ಸಮಾನವಾದ ನ್ಯಾಯವನ್ನು ಮತ್ತು ಜನರ ಮನೆ ಬಾಗಿಲಿಗೆ ನ್ಯಾಯವನ್ನು ನೀಡುವುದರ ಮೂಲಕ ಪಕ್ಷಗಾರರಿಗೆ ಅನ್ಯಾಯವಾಗದಂತೆ ಅವರ ಹಣ ಮತ್ತು ಸಮಯ ಎರಡನ್ನು ಉಳಿಸುತ್ತದೆ. ಕಾನೂನು ಪದವಿ ಮುಗಿದ ಮೇಲೆ ವಿದ್ಯಾಥರ್ಿಗಳು ಮೊದಲು ಸೇವಾ ಮನೋಭಾವನೆಯ ಮೂಲಕ ವೃತ್ತಿಯನ್ನು ಪ್ರಾರಂಭಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಕೀಲರಾದ ರವಿ ಬೆಟಗೇರಿ, ಇಬ್ರಾಹಿಂಸಾಬ್ ಆರ್. ಬಿಸರಳ್ಳಿ,  ಬಸವರಾಜ್ ಜಂಗ್ಲಿ. ಪಿ.ಸಿ. ಕೊಪ್ಪಳ, ಆಗಮಿಸಿದ್ದರು. ಉಪನ್ಯಾಸಕರಾದ ಉಷಾದೇವಿ ಹಿರೇಮಠ, ಬಸವರಾಜ. ಎಸ್.ಎಮ್., ಕುಮಾರಿ ಸ್ಮಿತಾ ಅಂಗಡಿ, ಶೇಷಾದ್ರಿ ಕೆ, ವಿದ್ಯಾಥರ್ಿ ಪ್ರತಿನಿಧಿಗಳು ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಕು.ವಿನಯ್ ಕುಮಾರ್, ಸ್ವಾಗತವನ್ನು ಕು. ಕನಕನಗೌಡ, ಮತ್ತು ಪ್ರಾರ್ಥನಾ ಗೀತೆಯನ್ನು ಕುಮಾರಿ. ಲಕ್ಷ್ಮಿ ಹಾಗೂ ಸಂಗಡಿಗರು ಹಾಗೂ ವಂದನಾರ್ಪಣೆಯನ್ನು ಕು.ಬಾಬಾ ವಾಲೀಕರ್ ನೆರವೇರಿಸಿಕೊಟ್ಟರು.