ಲೋಕದರ್ಶನ ವರದಿ
ತಾಳಿಕೋಟೆ 01: ಇಂದಿನ ಆಧುನಿಕ ಯುಗದಲ್ಲಿ ಕೆಲವು ಗ್ರಾಮಗಳಲ್ಲಿ ಜಾತಿ ಪದ್ದತಿ ಹಾಗೂ ಅಸ್ಪೃಶ್ಯತೆ ಎಂಬುದು ಇನ್ನೂ ಜೀವಂತವಾಗಿ ಉಳಿದುಕೊಂಡಿರುವದು ಸಮಾಜದ ಬೆಳವಣಿಗೆಗೆ ಕಂಠವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕರಾದ ಎನ್.ಆರ್.ಉಂಡಿಗೇರಿ ಅವರು ನುಡಿದರು.
ತಾಲೂಕಿನ ನಾಗೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಹಾಗೂ ಸಮರ್ಥ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಅಸ್ಪೃಶ್ಯತೆ ನಿಮರ್ೂಲನೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಾತಿ ಪದ್ದಂತಿಯಿಂದ ಮೌಢ್ಯತೆಗಳು ಇನ್ನೂ ಜೀವಂತಾಗಿ ಉಳಿದುಕೊಂಡಿವೆ ಎಲ್ಲರನ್ನು ಸಮಾನ ಮನಸ್ಕರದಿಂದ ಕಾಣುವಂತಹ ಭಾವನೆ ಎಲ್ಲರಲ್ಲಿ ಬರಬೇಕಾಗಿದೆ ವೃತ್ತಪರದಿಂದ ಜಾತಿ ಪದ್ದತಿಗಳು ಈ ದೇಶದಲ್ಲಿ ಉದ್ಭವಗೊಂಡಿವೆ ಇದರಿಂದ ಬೇದ ಭಾವಗಳು ಕಾಣಲು ಕಾರಣವಾಗಿದೆ ಕಾರಣ ಎಲ್ಲರೂ ಭಾರತಾಂಭೆಯ ಮಕ್ಕಳಾಗಿರುವದರಿಂದ ಅಸ್ಪೃಶ್ಯತೆ ಎಂಬುದನ್ನು ತೊಲಗಿಸುವಂತಹ ಕಾರ್ಯವಾಗಬೇಕಾಗಿದೆ ಎಂದರು.
ನಂತರ ನಾಗೂರ ಗ್ರಾಮದ ಜನಬೀಡ ಪ್ರದೇಶದ ಮುಖ್ಯಸ್ಥಳದಲ್ಲಿ ಬೀದಿ ನಾಟಕದ ಮೂಲಕ ಅಸ್ಪೃಶ್ಯತೆ ನಿವಾರಣೆಯ ಅರಿವು ಮೂಡಿಸಲಾಯಿತು. ಈ ಸಮಯದಲ್ಲಿ ಮುಖಂಡರಾದ ಶೇಷಗೀರಿರಾವ ದೇಶಪಾಂಡೆ, ಸಂಗಪ್ಪ ಹೂಗಾರ, ಸಂಗನಗೌಡ ಬಿರಾದಾರ, ಕೆ.ಎನ್.ಹಲಗಿ, ಇಲಾಖೆಯ ಸಿಬ್ಬಂದಿಗಳಾದ ಎಸ್.ಜಿ.ವಾಲಿಕಾರ, ಎನ್.ವ್ಹಿ.ಕೋರಿ, ಎಸ್.ಎನ್.ಕಲ್ಬುಗರ್ಿ, ಒಳಗೊಂಡು ನಾಗೂರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.