ಗದಗ 30: ನಾಡಿನ ಸ್ವಾತಂತ್ರ್ಯಕ್ಕಾಗಿ 1824 ರಲ್ಲಿ ಬ್ರಿಟೀಷರ ವಿರುದ್ಧ ಸಮರ ಸಾರಿದ ಕಿತ್ತೂರು ರಾಣಿ ಚೆನ್ನಮ್ಮ ಜನತೆಯ ಸ್ವಾಭಿಮಾನದ ಸಂಕೇತ ಎಂದು ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ ನುಡಿದರು.
ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಂದು ಬ್ರಿಟಿಷರ್ ವಿರುದ್ಧ ವಿಜಯ ಸಾಧಿಸಿದ ನೆನಪಿಗಾಗಿ ಜರುಗಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೀರರಾಣಿ ಕಿತ್ತೂರು ಚೆನ್ನಮ್ಮ ಕಪ್ಪ ಕೊಟ್ಟು ಶರಣಾಗಲು ಆಗ್ರಹಿಸಿದ ಬ್ರಿಟೀಷರ್ ವಿರುದ್ಧವೇ ಸಮರ ಸಾರಿದಳು. ಅವಳ ಧೈರ್ಯ, ಸಾಹಸ, ಸ್ವಾಭಿಮಾನವಾದ ಇತಿಹಾಸವನ್ನು ಯುವಜನರಿಗೆ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು . ನಾಡಿನ ಜನರ ಸಂಘಟನೆಗೆ ಸ್ವಾತಂತ್ರ್ಯವು ಒಂದು ಬಲವಾದ ಶಕ್ತಿ ಎನ್ನುವುದಕ್ಕೆ ಕಿತ್ತೂರು ರಾಣಿ ಚೆನ್ನಮ್ಮಳು ಸಾಕ್ಷಿ ಎಂದು ಬಳಿಗಾರ ನುಡಿದರು.
ಕಿತ್ತೂರು ರಾಣಿ ಚೆನ್ನಮ್ಮಳ ಭಾವಚಿತ್ರಕ್ಕೆ ಪುಷ್ಪ ಸಮಪರ್ಿಸಿ ಮಾತನಾಡಿದ ಶಾಸಕ ಸಿ.ಸಿ.ಪಾಟೀಲ ಕಿತ್ತೂರು ಚೆನ್ನಮ್ಮ ಸ್ವಾಭಿಮಾನ, ದೇಶಾಭಿಮಾನದ ಪ್ರತೀಕವಾಗಿದ್ದಾಳೆ. ಕಿತ್ತೂರು ನಾಡನ್ನು ಉಳಿಸಿಕೊಳ್ಳಲು ಬ್ರಿಟೀಷರ್ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ. ಕಿತ್ತೂರು ಚೆನ್ನಮ್ಮ ಕನ್ನಡ ನಾಡಿನ ಹಾಗೂ ದೇಶದ ಆಸ್ತಿ. ರಾಣಿ ಚೆನ್ನಮ್ಮ ನಲ್ಲಿ ದಿಟ್ಟತನ ಧೈರ್ಯ ನಾವು ಮೆಚ್ಚಿಕೊಳ್ಳಬೇಕು. ಅದನ್ನು ಅನುಸರಿಸಬೇಕು ಎಂದರು.
ಪ್ರೊ. ಆರ್.ಎಲ್. ಪೊಲೀಸ್ಪಾಟೀಲ ಉಪನ್ಯಾಸ ನೀಡಿ ಶ್ರೀಮಂತಿಕೆಯ ನಮ್ಮ ದೇಶವನ್ನು ಅನೇಕ ವಿದೇಶಿಯರು ದಾಳಿ ಮಾಡಿ ಸಂಪತ್ತನ್ನೆಲ್ಲ ಲೂಟಿ ಮಾಡಿಕೊಂಡು ಹೋದರು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ 500 ಕ್ಕಿಂತ ಹೆಚ್ಚು ಸಂಸ್ಥಾನಗಳ ರೂಪದಲ್ಲಿ ಹಂಚಿಹೋಗಿತ್ತು. ಕಿತ್ತೂರು ಚಿಕ್ಕದಿದ್ದರೂ ಕೀತರ್ಿ ರಾಷ್ಟ್ರ ಮಟ್ಟದಲ್ಲಿ ವಿಸ್ತರಿಸಲು ಕಾರಣವಾದದದ್ದು ಚೆನ್ನಮ್ಮಳ ಶೌರ್ಯದಿಂದಲೇ. ಧೂಳಪ್ಪಗೌಡ ಮತ್ತು ಪದ್ಮಾವತಿಯ ಮಗಳಾದ ಚೆನ್ನಮ್ಮ ಕ್ರಿ.ಶ. 1778 ನವೆಂಬರ್ 14 ರಂದು ಜನಿಸಿದಳು. ಎಳೆ ವಯಸ್ಸಿನಲ್ಲಿಯೇ ಕುದುರೆ ಸವಾರಿ, ಕತ್ತೆ ವರಸೆ ಹಾಗೂ ಬಿಲ್ಲು ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಸ್ವಾತಂತ್ರ ಸ್ವಾಭಿಮಾನದ ಸಾಕಾರಮೂತರ್ಿ ಕಿತ್ತೂರಿನ ರಾಣಿ, ಕಿತ್ತೂರಿನ ದೇಸಾಯಿ ಮಲ್ಲಸರ್ಜನ ಕಿರಿಯ ಹೆಂಡತಿ. ರುದ್ರಮ್ಮ ಹಿರಿಯ ರಾಣಿ ಆಗಿದ್ದಳು. ಮಲ್ಲಸರ್ಜ ದೇಸಾಯಿ 34 ವರ್ಷಗಳ ಕಾಲ ರಾಜ್ಯ ವಾಳಿದರು. ಮಕ್ಕಳಿಲ್ಲದೇ ಮಲ್ಲಸರ್ಜ ದೇಸಾಯಿ ವಿಧಿವಶವಾದ ನಂತರ ಕಿತ್ತೂರು ಸಂಸ್ಥಾನ ಬಿಟ್ಟು ಕೊಡುವ ವಿರುದ್ಧ ಹಾಗೂ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ವೀರೋಧಿಸಿ ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಸಮರ ಸಾರಿದಳು. ಬ್ರಿಟೀಷರ ಬಂಧನದಲ್ಲಿದ್ದ ಚೆನ್ನಮ್ಮಳು ಸ್ವಾತಂತ್ರ್ಯದ ಕುರಿತು ಚಿಂತನೆಯಲ್ಲಿಯೇ 1829 ರಂದು ಫೆ 2 ರಂದು ಚೆನ್ನಮ್ಮ ನಿಧನಳಾದಳು ಎಂದು ವಿವರಿಸಿದರು.
ಗದಗ ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಪ್ರಕಾಶ ಕಟ್ಟಿಮನಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಗೌರವಾಧ್ಯಕ್ಷ ಎಂ.ಬಿ. ದೇಸಾಯಿ, ಉಪಾಧ್ಯಕ್ಷರಾದ ಅಶೋಕ ಎಸ್. ಸಂಕಣ್ಣವರ, ಪ್ರಧಾನ ಕಾರ್ಯದಶರ್ಿ ಅಜ್ಜನಗೌಡ ಹಿರೇಮನಿಪಾಟೀಲ, ಕಾರ್ಯದಶರ್ಿ ಎಂ.ಎಸ್. ಮಲ್ಲಾಪುರ, ಖಜಾಂಚಿ ಸಿದ್ಧು ಪಲ್ಲೇದ, ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಎಲ್ಲ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರುಗಳು, ಸಮಾಜದ ಬಾಂಧವರು, ನಾಗರಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಂಗಮೇಶ ಪಾಟೀಲ ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಶರಣು ಗೋಗೇರಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.