ಕೆಜಿಎಪ್ ಚಿತ್ರಕ್ಕೆ ಹಾಡು ಬರೆದ ಕಿನ್ನಾಳ ರಾಜ್ಗೆ ಸನ್ಮಾನ

ಲೋಕದರ್ಶನ ವರದಿ

ಕುಕನೂರು 27: ತಾಲೂಕಿನ ಗುದ್ನೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಾಂಸ್ಕೃತೀಕ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಕೆಜಿಎಪ್ ಚಿತ್ರಕ್ಕೆ ಹಾಡು ಬರೆದ ಕಿನ್ನಾಳ ರಾಜ್ ಅವರನ್ನು ಸನ್ಮಾನಿಸಲಾಯಿತು. ಕುಕನೂರಿನ ಯಮನೂರುಸ್ವಾಮೀ ಯುವಕ ಸಂಘ, ಕುಕನೂರು ಮೆಲೋಡಿಸ್  ತಂಡದಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗೋವಿಂದ ಭಜಂತ್ರಿ, ಅಶೋಕ ಭಂಗಿ, ಪ್ರಕಾಶ ಬಂಡಿ, ಬಸಯ್ಯ ಸರಗಣಾಚಾರ್, ರಹೀಮ್ ಮಟಮಾರಿ, ಅನೀಲ್, ಮಂಜು ಮುಂಡರಗಿ, ಮಂಜು ಯಶ್, ಮಂಜುನಾಥ ಭಜಂತ್ರಿ, ಪ್ರಶಾಂತ ಕರುಗಲ್, ಕಾಳಪ್ಪ ವಡ್ಡರ್, ಸೇರಿದಂತೆ ಅನೇಕರು ಹಾಜರಿದ್ದರು.