ಮೋದಿ ವಿರುದ್ಧಸ್ಪರ್ಧಿಸುತ್ತಿರುವ ವಜಾಗೊಂಡ ಬಿಎಸ್ಎಫ್ ಯೋಧನಿಗೆ ಕೇಜ್ರಿವಾಲ್ ಪ್ರಶಂಸೆ


   ನವದೆಹಲಿ ಏ 30 - ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ  ಅಭ್ಯಥರ್ಿಯಾಗಿ ಸೇವೆಯಿಂದ ವಜಾಗೊಂಡಿರುವ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಕಣಕ್ಕಿಳಿಸಿರುವ   ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರ ನಿರ್ಧಾರ ರವನ್ನು ಸೋಮವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶಂಸಿಸಿದ್ದಾರೆ.  

 ಒಂದು ಕಡೆ ಅಭ್ಯಥರ್ಿಯೊಬ್ಬರು ದೇಶಕ್ಕಾಗಿ ಜೀವವನ್ನು ಮುಡುಪಾಗಿಟ್ಟು,ಯೋಧರ ಹಕ್ಕುಗಳನ್ನು ಎತ್ತಿಹಿಡಿದು ಕೆಲಸವನ್ನು ಕಳೆದುಕೊಂಡಿದ್ದಾರೆ. ಮತ್ತೊಬ್ಬಅಭ್ಯರ್ಥಿ  ಸೈನಿಕರ ಹಕ್ಕುಗಳನ್ನು ಎತ್ತಿಹಿಡಿದ ಯೋಧನನ್ನು ಕೆಲಸದಿಂದ ತೆಗೆದಿದ್ದು, ಸೈನಿಕರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.. 

  ಹಯರ್ಾಣ ಮಣ್ಣಿನಲ್ಲಿ ವಿಶೇಷತೆ ಇದೆ. ಕಳೆದ ಬಾರಿಯೂ ಹರ್ಯಾಣದವರೊಬ್ಬರು(ತಾವು) ವಾರಾಣಸಿಯಲ್ಲಿ ಮೋದಿ ಎದುರಾಳಿಯಾಗಿದ್ದರು. ಈ ಬಾರಿಯೂ ಹಯರ್ಾಣದ ಯೋಧ ಮೋದಿ ಅವರಿಗೆ ತೊಡೆ ತಟ್ಟುತ್ತಿದ್ದಾರೆ. ಇಡೀ ದೇಶದ ಪರವಾಗಿ ಎಸ್ಪಿ-ಬಿಎಸ್ಪಿ ಮೈತ್ರಿಗೆ ಶುಭಾಶಯ ಎಂದು  ಕೇಜ್ರಿವಾಲ್ ಹೇಳಿದ್ದಾರೆ.     ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಶಾಲಿನಿ ಯಾದವ್ ಅವರ ಬದಲಾಗಿ ವಜಾಗೊಂಡ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅಭ್ಯರ್ಥಿ ಯನ್ನು ಕಣಕ್ಕಿಳಿಸುವ ಮೂಲಕ ಸಮಾಜವಾದಿ ಪಕ್ಷ ತಂತ್ರಗಾರಿಕೆ ಅನುಸರಿಸಿದೆ.   2017 ರಲ್ಲಿ  ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಸುತ್ತಿರುವ ವೀಡಿಯೊಗಳನ್ನು ಬಿಡುಗಡೆ ಮಾಡಿದ ಕಾರಣಕ್ಕಾಗಿ  ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿತ್ತು.   ಬಹದ್ದೂರ್ ಅವರು ವಾರಾಣಸಿಯಿಂದ ಎಸ್ಪಿ-ಬಿಎಸ್ಪಿ ಮೈತ್ರಿ ಅಭ್ಯರ್ಥಿ ಯಾಗಿ ಸ್ಪಧರ್ಿಸುತ್ತಿದ್ದಾರೆ. ವಾರಾಣಸಿಯಿಂದ ಕೊನೆಯ ಕ್ಷಣದಲ್ಲಿ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಪ್ರಧಾನಿ ಮೋದಿ ಏಪ್ರಿಲ್ 26 ರಂದೇ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.