ನವದೆಹಲಿ, ಮೇ 6 - ಭಾರತದ ಆಲ್ ರೌಂಡರ್ ಕೇದಾರ್ ಜಾದವ್ ಭುಜದ ಸಮಸ್ಯೆಯಿಂದ ಬಳಲುತ್ತಿದ್ದು ಐಪಿಎಲ್ ನಿಂದ ಹೊರ ನಡೆದಿದ್ದಾರೆ.
ಭಾನುವಾರ ಕಿಂಗ್ಸ್ ಇಲೆವೆನ್ ವಿರುದ್ಧದ ಕಾದಾಟದಲ್ಲಿ, ಕೇದಾರ ಗಾಯಕ್ಕೆ ತುತ್ತಾಗಿದ್ದಾರೆ. ರವೀಂದ್ರ ಜಡೇಜಾ ಅವರು ಎಸೆದ ಚೆಂಡನ್ನು ತಡೆಯಲು ಹೋದ ಜಾದವ್ ಅವರಿಗೆ ಪೆಟ್ಟಾಗಿದೆ. ಇದರಿಂದ ಅವರು ವಿಶ್ವಕಪ್ ನಲ್ಲಿ ಆಡುವುದು ಅನುಮಾನವಾಗಿದೆ. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಕೋಚ್ ಸ್ಟೀಫನ್ ಫ್ಲೆಮಿಂಗ್, ಭಾರತದ ಆಲ್ ರೌಂಡರ್ ಜಾದವ್ ಅವರ ಎಡ ಭುಜಕ್ಕೆ ಗಾಯವಾಗಿರುವ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಜಾದವ್ ಅವರು ಎಕ್ಸ್ ರೆ ಹಾಗೂ ಎಂಆರ್ ಐ ಸ್ಕ್ಯಾನ್ ಮಾಡಿಸಲಾಗಿದೆ. ವರದಿ ಬಂದ ಬಳಿಕ ಟೂನರ್ಿಯಲ್ಲಿ ಆಡುವ ಬಗ್ಗೆ ತೀಮರ್ಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಿಂಗ್ಸ್ ವಿರುದ್ಧದ ಪಂದ್ಯದ 14ನೇ ಓವರ್ ವೇಳೆ ಜಾದವ್ ಅವರಿಗೆ ಗಾಯವಾಗಿದ್ದರಿಂದ, ಮೈದಾನದಿಂದ ಹೊರ ನಡೆದರು. ಇವರ ಬದಲಿಗೆ ಮುರಳಿ ವಿಜಯ್ ಕ್ಷೇತ್ರ ರಕ್ಷಣೆ ಮಾಡಿದ್ದಾರೆ.
ಗಾಯದ ಸಮಸ್ಯೆ ಜಾದವ್ ಅವರನ್ನು ಬಹುವಾಗಿ ಕಾಡುತ್ತಿದೆ. ದುಬೈ ನಲ್ಲಿ ನಡೆದಿದ್ದ ಏಷ್ಯಾ ಕಪ್ ವೇಳೆ ಹಾಗೂ ಬಳಿಕವೂ ಅವರು ಗಾಯಕ್ಕೆ ತುತ್ತಾಗಿದ್ದರು.
ಭಾರತ ಕ್ರಿಕೆಟ್ ತಂಡ ಮೇ 22 ರಂದು ವಿಶ್ವಕಪ್ ಗೆ ಪ್ರಯಾಣ ಬೆಳೆಸಲಿದೆ. ಐಸಿಸಿ ನಿಯಮದಂತೆ ಮೇ 23ರ ಒಳಗೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಭಾರತ ವಿಶ್ವಕಪ್ ನಲ್ಲಿ ಜೂ.5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ.