ಎ.ಸಿ.ಕೆರೂರಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ
ಮುದ್ದೇಬಿಹಾಳ 12: ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಗಾರವನ್ನು ಸರ್ಕಾರಿ ಆದರ್ಶ ವಿದ್ಯಾಲಯ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ತಾಲೂಕಿನ ಕಾರ್ಯನಿರತ ದೈಹಿಕ ಶಿಕ್ಷಣ ಶಿಕ್ಷಕರ ಸೇವೆ, ಶೈಕ್ಷಣಿಕ ಮತ್ತು ಕ್ರೀಡಾಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ನಿರ್ವಹಿಸುವುದಕ್ಕಾಗಿ 2024-25 ನೇ ಸಾಲಿನ ತಾಲೂಕ ಮಟ್ಟದ ಕಾಯಕ-ರತ್ನ ಪ್ರಶಸ್ತಿಯನ್ನು ಸರಕಾರಿ ಆದರ್ಶ ವಿದ್ಯಾಲಯ ಬಿದರಕುಂದಿಯ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ.ಕೆರೂರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ದೈಹಿಕ ಶಿಕ್ಷಣ ಶಿಕ್ಷಕರಿಗೆ ಗಣಕಯಂತ್ರದ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡುವುದರ ಮೂಲಕ ಸರಳಿಕರಣ ಮಾಡಿಕೊಟ್ಟಿರುತ್ತಾರೆ , ಕರೋನ ಸಂದರ್ಭದಲ್ಲಿ ಇಲಾಖೆ ವತಿಯಿಂದ ಚಂದನ ಟಿವಿಯಲ್ಲಿ ದೈಹಿಕ ಶಿಕ್ಷಣದ ಪಾಠಗಳನ್ನು ನೀಡುತ್ತಾರೆ. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟದವರೆಗೆ ಭಾಗವಹಿಸುವಂತೆ ಮಾಡಿರುತ್ತಾರೆ. ಹಾಗಾಗಿ 2023-24 ರಲ್ಲಿ ಜ್ಯೋತಿಬಾಪುಲೆ ಪ್ರಶಸ್ತಿ, ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ (ರಿ) ಬೆಂಗಳೂರು ಹಾಗೂ ಎಂ ಎಂ ಭಾರತ್ ನ್ಯೂಸ್ ಟಿವಿ ಚಲನ್ ಬೆಂಗಳೂರು ಯವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ 2024-25 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹೆಮ್ಮೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯರಾದ ಅನಿಲ್ ಕುಮಾರ್ ರಾಥೋಡ್ ವಹಿಸಿದ್ದರು, ಉದ್ಘಾಟಕರಾಗಿ ಬಿ ವೈ ಕವಡಿ ತಾಲೂಕ ದೈಹಿಕ ಶಿಕ್ಷಣ ಪರೀಕ್ಷಕರು , ವೇದಿಕೆ ಮೇಲಿದ್ದ ಎಸ್ ಎಸ್ ಲಮಾಣಿ ಅಧ್ಯಕ್ಷರು ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮುದ್ದೇಬಿಹಾಳ ಅವರು ಪ್ರತಿ ವರ್ಷ ದೈಹಿಕ ಶಿಕ್ಷಣ ಶಿಕ್ಷಕರು ತಮ್ಮ ಸೇವಾ ವೃತ್ತಿಯಲ್ಲಿ ಮಾಡಿದಂತಹ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು. ಬಸಯ್ಯ.ಎಸ್.ಹಿರೇಮಠ್ ಅಧ್ಯಕ್ಷರು ಪ್ರೌಢಶಾಲಾ ಶಿಕ್ಷಕರ ಸಂಘ ಮುದ್ದೇಬಿಹಾಳ, ಗುಂಡಪ್ಪ ಕೊಟ್ಟಗಿ ಅಧ್ಯಕ್ಷರು ಎಸ್ .ಡಿ .ಎಂ .ಸಿ , ಆರ್.ಎಂ.ಎಸ್.ಎ .ಬಿದರಕುಂದಿ, ಪ್ರಾಣೇಶ್ ಯಾದವ್ ಅಂತರಾಷ್ಟ್ರೀಯ ಚೆಸ್ ಸ್ಕೂಲ್ ಶಿವಮೊಗ್ಗ, ಸುರೇಶ್ ಆಲೂರ್ ನಿರ್ದೇಶಕರು ಯೋಜನ ಸೇವಾ ಮತ್ತು ಕ್ರೀಡಾ ಇಲಾಖೆ ಮುದ್ದೇಬಿಹಾಳ ಅವರು ವೇದಿಕೆ ಮೇಲೆ ಇದ್ದರು. ಕಾರ್ಯಕ್ರಮ ನಿರೂಪಣೆಯನ್ನು ಸಂಗಮೇಶ್ ಸಜ್ಜನ್, ಸ್ವಾಗತವನ್ನು ಎನ್.ಎಸ್ ಬಿರಾದಾರ, ಪ್ರಶಸ್ತಿ ಪ್ರಧಾನ ನಿರೂಪಣೆಯನ್ನು ಗುರು ಸಾಲಿಮಠ, ವಂದನಾರೆ್ಣಯನ್ನು ಚಂದ್ರು ಮನಗೂಳಿ ಮಾಡಿದರು.