ಸಿರಿಗನ್ನಡ ವೇದಿಕೆಯಲ್ಲಿ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಕಾರ್ಯಕ್ರಮ
ಕೊಪ್ಪಳ 06: ನಗರದ ಪ್ರವಾಸಿಮಂದಿರದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ, ವಿಶಾಲ ಪ್ರಕಾಶನ ಹಾಗೂ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಕೊಪ್ಪಳ ಇವರಿಂದ ಇಂದು ಚಲನಚಿತ್ರ ಸಾಹಿತಿ ಮಹೇಶ್ ಮನ್ನಾಪುರ. ಹಿರಿಯ ಮಹಿಳಾ ಲೇಖಕಿ, ಅನುಸೂಯ ಜಾಗಿರ್ದಾರ, ಕರಾಟೆ ಶಿಕ್ಷಕ ರಾಘವೇಂದ್ರ ಅರಕೇರಿ. ಇವರಿಗೆ ಕಾಯಕ ರತ್ನ ಪ್ರಶಸ್ತಿ ಪ್ರಧಾನಮಾಡಲಾಯಿತು.
ಈ ಸಂದರ್ಭದಲ್ಲಿ ಮಹೇಶ ಮನ್ನಾಪೂರ ಅವರು ಮಾತನಾಡಿ, ನಾವು ಕಾರ್ಯಕ್ರಮಕ್ಕೆ ಅನಿವಾರ್ಯ ಕೆಲಸಗಳಿಂದ ಬರಲು ಆಗಲಿಲ್ಲ ಆದರೆ ಮತ್ತೊಮ್ಮೆ ಈ ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ನಮ್ಮನ್ನು ಕರೆಸಿ ವಿಶೇಷ ಸಮಯ ನೀಡಿ ಸನ್ಮಾನ ಮಾಡುತ್ತಿರುವದು ವಿಶೇಷ ಆದರೆ ನಾವು ಮಾಡಿರುವ ಸಣ್ಣ ಕೆಲಸ ನೋಡಿ ಗುರುತಿಸಿ ನಮ್ಮನ್ನು ಸನ್ಮಾನ ಮಾಡಿದ್ದೂ ಹೆಚ್ಚಿನ ಜವಾಬ್ದಾರಿ ಹೆಚ್ಚಿಸಿದೆ ಎಂದರು. ಅನುಸೂಯ ಜಾಗಿರ್ದಾರ ಮಾತನಾಡುತ್ತಾ ಈ ಸಮಾರಂಭ ಶ್ಲಾಘನೀಯವಾಗಿದ್ದು ಕಾರ್ಯಕ್ರಮ ಸಂದರ್ಭದಲ್ಲಿ ಶಾಲೆಯ ಪೂರ್ವ ಸಿದ್ದತಾ ಪರೀಕ್ಷೆ ಕಾಯಕದಲ್ಲಿ ತೊಡಗಿಕೊಂಡಿದ್ದರಿಂದ ಹಾಗೂ ಅದುಕೂಡಾ ಒಂದು ಕಾಯಕ ಆದ್ದರಿಂದ ಕಾಯಕ ರತ್ನ ಪ್ರಶಸ್ತಿ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಎಂದರು. ಸಾಹಿತ್ಯ ವೇದಿಕೆಯ ಜವಾಬ್ದಾರಿಯುತ ಕಾರ್ಯ ನೆನಪಿಸುವಂತದ್ದು, ಮೂವತ್ತು ವರ್ಷದಿಂದ ನಾವು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಅಳಿಲು ಸೇವೆಗೆ ಈ ರೀತಿಯ ವಿಷೇಶ ಕಾರ್ಯಕ್ರಮ ಆಯೋಜನೆ ಮಾಡಿ ಸನ್ಮಾನಿಸಿದ್ದು ಜವಾಬ್ದಾರಿ ಹೆಚಿಸುತ್ತವೆ.
ಕರಾಟೆ ಶಿಕ್ಷಕ ರಾಘವೇಂದ್ರ ಅರಕೆರಿ ಮಾತನಾಡಿ, ಸಾಹಿತಿಗಳು ಮತ್ತು ಪತ್ರಕರ್ತರಾದ ಜಿ.ಎಸ್.ಗೋನಾಳ್ ಅವರನ್ನು ನಾನು ಚಿಕ್ಕ ವಯಸ್ಸಿನಿಂದ ನೋಡುತ್ತಾ ಬಂದಿದ್ದೇನೆ ಹಾಗೂ ಅವರ ಸಂಪಾದಕತ್ವದಲ್ಲಿ ಮೂಡಿ ಬರುವ ಪತ್ರಿಕೆ ಓದುಗರಲ್ಲಿ ನಾನು ಕೂಡಾ ಒಬ್ಬ ಗೋನಾಳ್ ಅವರ ಬರವಣಿಗೆ ನನ್ನ ಪತ್ರಿಕಾ ರಂಗದಲ್ಲಿ ಸ್ಫೂರ್ತಿ, ಹಾಗೂ ಅವರು ಬರೀ ಫೋನ್ ಮೂಲಕನೇ ಹತ್ತಾರು ಜನರನ್ನು ಸೇರಿಸುವ ಸಂಘಟನಾ ಚತುರರು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಮಂಜುನಾಥ ಚಿತ್ರಗಾರ ಅವರು ಕಾಯಕ ಮಾಡೋದರಿಂದ ಕಾಯಕ ರತ್ನ ಆಗಲು ಸಾಧ್ಯ, ಹಾಗೂ ಬದುಕಿನಲ್ಲಿ ಕಲೆ, ಸಾಹಿತ್ಯ, ಬರವಣಿಗೆ ಸೇರಿದಂತೆ ಅನೇಕ ಹವ್ಯಾಸಗಳು ಬೆಳಕಿನಡೆಗೆ ಕೊಂಡೊಯ್ಯುವ ಕಾರ್ಯಗಳು ನಿರಂತರ ನಡೆಸಿಕೊಂಡು ಹೋಗುವುದು ಮುಖ್ಯ, ಹಾಗೂ ಕನ್ನಡ ನಾಡು ನುಡಿಗಾಗಿ ನಾನು ತನು, ಮನ, ಧನದಿಂದ ನನ್ನ ಜೀವನ ಇರುವ ವರೆಗೂ ಕೆಲಸ ಮಾಡಲು ಸಿದ್ದನಿದ್ದೇನೆ ಎಂದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಶರಣಬಸಪ್ಪ ಬಿಳೆಯಲಿ, ಶಿಕ್ಷಕರಾದ ಉಮೇಶ ಸುರ್ವೆ, ಶ್ರೀನಿವಾಸ ಚಿತ್ರಗಾರ, ಪತ್ರಕರ್ತರಾದ ಸಿದ್ದು ಹಿರೇಮಠ, ಎಂ.ಎನ್.ಕುಂದಗೋಳು, ಉಮೇಶ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕುಮಾರ ಅಗಸ್ತ್ಯ ಅರಕೇರಿ ಪ್ರಾರ್ಥನೆಗೈದರು. ಸ್ವಾಗತವನ್ನು ರೇಣುಕಾರಾಜ್ ಕೋರಿದರೆ, ಪ್ರಾಸ್ತಾವಿಕವಾಗಿ ಜಿ.ಎಸ್.ಗೋನಾಳ ಮಾತನಾಡಿದರು. ವಂದನಾರೆ್ಣಯನ್ನು ರಂಗನಾಥ ಅಕ್ಕಸಾಲಿಗರ ಕೋರಿದರು.