ಕಾವ್ಯ ಪಟ್ಟಣಶೆಟ್ಟಿ ಜನ್ಮದಿನದ ಪ್ರಯುಕ್ತ ಬಡ ವಿದ್ಯಾರ್ಥಿನಿಗೆ ಸೈಕಲ್ ವಿತರಣೆ: ತಂಬ್ರಳ್ಳಿ ಮೆಚ್ಚುಗೆ
ಕೊಪ್ಪಳ 01: ಕೊಪ್ಪಳ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷರಾದ ಪ್ರತಿಮಾ ಪಟ್ಟಣಶೆಟ್ಟಿ ಯವರ ಮಗಳು ಕುಮಾರಿ ಕಾವ್ಯ ಪಟ್ಟಣಶೆಟ್ಟಿ ಯವರ ಜನ್ಮದಿನದ ಪ್ರಯುಕ್ತ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಅವಶ್ಯಕ ಉಳ್ಳ ಬಡ ವಿದ್ಯಾರ್ಥಿನಿ ಒಬ್ಬಳಿಗೆ ಸೈಕಲ್ ವಿತರಣೆ ಮಾಡುವುದರ ಮೂಲಕ ಪ್ರತಿಮಾ ಪಟ್ಟಣಶೆಟ್ಟಿಯವರು ತಮ್ಮ ಮಗಳ ಜನ್ಮ ದಿನಾಚರಣೆಯನ್ನು ಆಚರಿಸಿದ್ದಾರೆ ಅವರ ಈ ಜನ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಹಾಲಿ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಬಣ್ಣಿಸಿದ್ದಾರೆ,ಅವಶ್ಯಕತೆ ಉಳ್ಳ ಅರ್ಹ ಬಡ ಗ್ರಾಮೀಣ ವಿದ್ಯಾರ್ಥಿನಿಗೆ ಶಾಲೆಗೆ ಹೋಗಲು ಅನುಕೂಲವಾಗಲು ಸೈಕಲ್ ದೇಣಿಗೆ ನೀಡುವುದರ ಮೂಲಕ ಮಾನವೀಯತೆ ಮೌಲ್ಯ ಎತ್ತಿ ಹಿಡಿದಿದ್ದಾರೆ, ಇದು ಒಳ್ಳೆಯ ಕಾರ್ಯ ಇದರಿಂದ ಬಡ ಪ್ರತಿಭಾವತ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶೈಕ್ಷಣಿಕ ಬೆಳವಣಿಗೆಗೆ ಅತ್ಯಂತ ಅನುಕೂಲ ಮತ್ತು ಸಹಕಾರಿಯಾಗಿದೆ ಇಂಥ ಮಹತ್ವದ ಕಾರ್ಯ ಕೈಗೊಂಡಿರುವ ಪ್ರತಿಮಾ ಪಟ್ಟಣ ಶೆಟ್ಟಿ ಮತ್ತು ಬಡ ವಿದ್ಯಾರ್ಥಿನಿಗೆ ಸೈಕಲ್ ದೇಣಿಗೆ ನೀಡಿ ತನ್ನ ಜನ್ಮದಿನಾಚರಣೆಯನ್ನು ಆಚರಿಸಿಕೊಂಡ ಕುಮಾರಿ ಕಾವ್ಯ ಪಟ್ಟಣಶೆಟ್ಟಿ ಅವರಿಗೆ ಉಮಾ ಮಹೇಶ್ ತಂಬ್ರಳ್ಳಿ ರವರು ಅಭಿನಂದಿಸಿ ಶುಭ ಕೋರಿದ್ದಾರೆ, ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಜೊತೆಗೆ ಮಾಜಿ ಅಧ್ಯಕ್ಷರಾದ ಮತ್ತು ಈ ಉತ್ತಮ ಕಾರ್ಯಕ್ಕೆ ಕಾರನಿಕರ್ತರಾದ ಪ್ರತಿಮಾ ಪಟ್ಟಣಶೆಟ್ಟಿ, ಸುಜಾತ ಪಟ್ಟಣಶೆಟ್ಟಿ ಕವಿತಾ ಶೆಟ್ಟರ್ ಯಲಬುರ್ಗಾ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಶಕುಂತಲಾ ಕಾರ್ಯಕಾರಣಿ ಸಮಿತಿ ಸದಸ್ಯರಾದ ನೀತಾ ತಂಬ್ರಳ್ಳಿ, ಕ್ಲಬ್ಬಿನ ಜಿಲ್ಲಾ ಐಎಸ್‌ಒ ಶರಣಮ್ಮ ಪಾಟೀಲ್ ,ಮಂಗಳ ತಂಬ್ರಳ್ಳಿ ಮಧು ನಿಲೋಗಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.