ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೆ ರಾ​‍್ಯಂಕ ಪಡೆದ ಕಾವೇರಿ ಮಲ್ಲಾಪೂರೆಗೆ

Kaveri Mallapure, who secured fifth rank in the state in the PU exam

ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೆ ರಾ​‍್ಯಂಕ ಪಡೆದ ಕಾವೇರಿ ಮಲ್ಲಾಪೂರೆಗೆ 

ಚಿಕ್ಕೋಡಿ, 08 : ಹುಟ್ಟಿದ ವರ್ಷದಲ್ಲಿಯೇ ತಂದೆ ರಸ್ತೆ ಅಪಘಾತದಲ್ಲಿ ತೀರಿ ಹೋಗುತ್ತಾರೆ. ತಾಯಿ ಕೂಲಿ ಕೆಲಸ ಮಾಡಿ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಪರಿಣಾಮ ಮಗಳು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಐದನೆ ಸ್ಥಾನೆ ಪಡೆದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ. 

ಮೂಲತ: ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ವಿದ್ಯಾರ್ಥಿನಿ ಕಾವೇರಿ ಮಲ್ಲಾಪೂರೆ ಶಿಕ್ಷಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಚಿಕ್ಕೋಡಿ ತಾಲೂಕಿನ ಮಜಲಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಗೆ ದಾಖಲಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ 600 ಕ್ಕೆ 594 ಅಂಕಗಳಿಸಿ ರಾಜ್ಯಕ್ಕೆ ಐದನೆ ರಾ​‍್ಯಂಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. 

ಕು. ಕಾವೇರಿ ಮಲ್ಲಾಪೂರೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕನ್ನಡ-99, ಇಂಗ್ಲೀಷ-97, ಅರ್ಥಶಾಸ್ತ್ರ-100, ಇತಿಹಾಸ-99, ರಾಜ್ಯಶಾಸ್ತ್ರ-99,ಸಮಾಜಶಾಸ್ತ್ರ-100 ಅಂಕಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಎರಡು ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದು, ಮೂರು ವಿಷಯದಲ್ಲಿ 99 ಅಂಕಗಳಿಸಿ ಇಂಗ್ಲೀಷದಲ್ಲಿ 97 ಅಂಕಗಳಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ. 

ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ವಿದ್ಯಾರ್ಥಿನಿ ಕಾವೇರಿ ಮಲ್ಲಾಪೂರೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಣ ಪಡೆದು ಪ್ರಥಮ ಪಿಯುಸಿಗೆ ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿಗೆ ಪ್ರವೇಶ ಪಡೆದು ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸಿದ್ದರು ಪ್ರಯೋಜನವಾಗಲಿಲ್ಲ, ಪ್ರಥಮ ಪಿಯುಸಿಯಲ್ಲಿ ಶೇ 99 ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದರಿಂದ ದ್ವಿತೀಯ ಪಿಯುಸಿಯಲ್ಲಿ ಸರ್ಕಾರಿ ವಸತಿ ನಿಲಯಕ್ಕೆ ಆಯ್ಕೆಯಾಗುತ್ತಾಳೆ. ನಿರಂತರ ಓದು ಮತ್ತು ಉಪನ್ಯಾಸಕರ ಗುಣಮಟ್ಟದ ಬೋಧನೆ ನನ್ನ ಯಶಸ್ವಿಗೆ ಕಾರಣವಾಗಿದೆ. ಕಾಲೇಜಿನ ಪ್ರಾಚಾರ್ಯ ಆನಂದ ಕೋಳಿ ಗುರುಗಳ ನಿರಂತರ ಮಾರ್ಗದರ್ಶನ ನನಗೆ ಸ್ಪೂರ್ತಿಯಾಗಿದೆ ಎನ್ನುತ್ತಾರೆ ಕಾವೇರಿ. 

ನಾನು ಚಿಕ್ಕ ವಯಸ್ಸಿನಲ್ಲಿಯೇ ಇರುವಾಗ ನನ್ನ ತಂದೆ ರಸ್ತೆ ಅಪಘಾತದಲ್ಲಿ ತೀರಿ ಹೋಗುತ್ತಾರೆ. ನನ್ನ ತಾಯಿ ಕೂಲಿನಾಲಿ ಮಾಡಿ ನನ್ನ ಮತ್ತು ಇಬ್ಬರ ಅಣ್ಣಂದಿರನ್ನು ಸಾಕಿ ಶಿಕ್ಷಣ ಕೊಡಿಸಿದ್ದಾಳೆ. ನನ್ನ ಇಬ್ಬರು ಅಣ್ಣಂದಿರು ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿದ್ದಾರೆ. ನಾಣು ಸರ್ಕಾರಿ ಉದ್ಯೋಗ ಮಾಡಿ ನನ್ನ ಕುಟುಂಬವನ್ನು ಮುನ್ನಡೆಸಬೇಕೆಂಬ ಛಲ ಇಟ್ಟುಕೊಂಡಿದ್ದೇನೆ. ಈಗ ಪಿಯುಸಿ ಫಲಿತಾಂಶ ಉತ್ತಮ್ಮವಾಗಿ ಬಂದಿದೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಕೆಎಎಸ್ ಮತ್ತು ಐಎಎಸ್ ಮಾಡುವ ಕನಸು ಇದೆ ಎನ್ನುತ್ತಾಳೆ ಕಾವೇರಿ. 

ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ತೀವ್ರ ಪೈಪೋಟಿ ಒಡ್ಡುತ್ತಿರುವ ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ರಾಜ್ಯಕ್ಕೆ ಐದನೆ ಸ್ಥಾನ ಬಂದಿರುವುದಕ್ಕೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಶಿಕ್ಷಣ ಪ್ರೇಮಿ ರುದ್ರ​‍್ಪ ಸಂಗಪ್ಪಗೋಳ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಕಾಲೇಜಿನ ಪ್ರಾಚಾರ್ಯ ಪ್ರೊ.ಆನಂದ ಕೋಳಿ ಮತ್ತು ವಿದ್ಯಾರ್ಥಿನಿಯ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.