ಕಟ್ಟೀಮನಿ ಸ್ವತಂತ್ರವಾಗಿ ಯೋಚಿಸಿ ಬರೆದರು-ಬದುಕಿದರು ಡಾ. ಬಸವರಾಜ ಸಾದರ

ಗೋಕಾಕ,27: ಲೇಖಕನಿಗೆ ಸ್ವತಂತ್ರವಾಗಿ ಯೋಚಿಸಿ ಬರೆಯುವ ಹಕ್ಕಿದೆ ಆ ಸ್ವತಂತ್ರ್ಯವನ್ನು ಪೂರ್ಣ ಬಳಿಸಿದವರು ಬಸವರಾಜ ಕಟ್ಟೀಮನಿಯವರು. ಬದುಕನ್ನು ಆರಾಧಿಸದ ಕಲೆ ಮತ್ತು ಸಾಹಿತ್ಯದಿಂದ ಯಾವ ಪ್ರಯೋಜನವಿಲ್ಲ ಎಂದು ಬಸವರಾಜ ಕಟ್ಟೀಮನಿ ಅವರು ಬಲವಾಗಿ ಪ್ರತಿಪಾದಿಸಿದಂತೆ ಬರೆದು ಬದುಕಿದರು' ಎಂದು ಪ್ರತಿಷ್ಠಾನದ ಸದಸ್ಯರು ಹಾಗೂ ಸಾಹಿತಿ, ಚಿಂತಕ ಡಾ. ಬಸವರಾಜ ಸಾದರ ಹೇಳಿದರು.  ಕಟ್ಟೀಮನಿಯವರ ತಾಯಿ ಹೇಳಿದಂತೆ ನಾವಾಗೆ ಜಗಳ ತೆಗೆಯಬಾರದು ಯಾರಾದರೂ ಕಾಲಕೆರೆದು ಜಗಳಕ್ಕೆ ಬಂದರೆ ಹಾಗೇ ಬಿಡಬಾರದು. 

ಇದೇ ತತ್ವ ಅವರ ಕಾದಂಬರಿ, ಕಥೆ, ಪತ್ರಿಕಾ ಬರಹಗಳಲ್ಲಿ ಕಾಣಬಹುದು. ಜರತಾರಿ ಜಗದ್ಗುರು ಹಾಗೂ ಮೋಹದ ಬಲೆಯಲ್ಲಿ ಕಾದಂಬರಿಯಲ್ಲಿ ಆಷಾಡಬೂತಿ ಸ್ವಾಮಿಗಳನ್ನು ಪ್ರಸ್ತುತ ಸಮಾಜದಲ್ಲಿ ಕಾಣುತ್ತಿದ್ದೇವೆ. ಗೋಕಾಕ ನಗರದ ಜೆ.ಎಸ್.ಎಸ್ ಪದವಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಆತಿಥ್ಯದಲ್ಲಿ ಬೆಳಗಾವಿಯ ಬಸವರಾಜ  ಕಟ್ಟೀಮನಿ ಪ್ರತಿಷ್ಠಾನದ ಸಹಯೋದಲ್ಲಿ ಶುಕ್ರವಾರ ಆಯೋಜಿಸಿದ ಬಸವರಾಜ ಕಟ್ಟೀಮನಿ ಜನ್ಮಶತಮಾನೋತ್ಸವ ನಿಮಿತ್ತವಾಗಿ ಕಟ್ಟೀಮನಿ ಸಾಹಿತ್ಯ :ಮರು ಚಿಂತನೆಯ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಕನ್ನಡದ ಮೊದಲ ಬಂಡಾಯದ ಸಾಹಿತಿಯಾಗಿ ಅವರನ್ನು ನಾವು ಗುರುತಿಸಬಹುದು.

ಗೋಕಾಕ ನಗರದ ಜೆ.ಎಸ್.ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದಲ್ಲಿ ಶುಕ್ರವಾರ 27 ರಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಆಯೋಜಿಸಿದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಸಂಸ್ಥೆಯ ನಿದರ್ೇಶಕ ವಿಶ್ವನಾಥ ಕಡಕೋಳ, ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾಜರ್ುನ ಹಿರೇಮಠ ಉದ್ಘಾಟಿಸಿದರು.  

ಅಧ್ಯಕ್ಷತೆ ವಹಿಸಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮಲ್ಲಿಕಾಜರ್ುನ ಹಿರೇಮಠ ಮಾತನಾಡಿ ಕಟ್ಟೀಮನಿ ಅವರ ಸಾಹಿತ್ಯದ ಮರು ಚಿಂತನೆಯ ಮೂಲಕ ವಿದ್ಯಾಥರ್ಿ ಸಮುದಾಯ ಹಾಗೂ ಯುವ ಪೀಳಿಗೆಗೆ ಕಟ್ಟೀಮನಿ ಅವರ ಸಾಹಿತ್ಯವನ್ನು ಪರಿಚಯಿಸುವ ಉದ್ಧೇಶದಿಂದ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವೆವು. ಕಟ್ಟೀಮನಿಯವರ ಜನ್ಮಸ್ಥಳವಾದ ಗೋಕಾಕ ನಗರದಲ್ಲಿ ಈ ಕಾರ್ಯಕ್ರಮ ಔಚಿತ್ಯಪೂರ್ಣವಾಗಿದೆ. 

ಪ್ರತಿಷ್ಠಾನದ ಸದಸ್ಯ ಸಂಚಾಲಕ ಪ್ರೊ. ಚಂದ್ರಶೇಖರ ಅಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ನಿದರ್ೇಶಕ ವಿಶ್ವನಾಥ ಕಡಕೋಳ, ಹಿರಿಯರಾದ ಬಾಳಗೌಡ ಪಾಟೀಲ, ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಸಂಚಾಲಕರಾದ ಶಿವಕುಮಾರ ಕಟ್ಟೀಮನಿ, ರಾಮಕೃಷ್ಣ ಮರಾಠೆ, ಪ್ರಾಚಾರ್ಯರು ಎಸ್. ಎಸ್. ತೇರದಾಳ ಡಾ. ಎಸ್. ಬಿ. ಹೊಸಮನಿ, ಬಸವಣೆಪ್ಪ ಕಂಬಾರ, ಉಪಸ್ಥಿತರಿದ್ದರು. 

ನಂತರ ನಡೆದ ಸಂವಾದ ಸಮಾರೋಪ ಗೋಷ್ಠಿಯಲ್ಲಿ ಪ್ರೊ. ಜಿ. ವಿ. ಮಳಗಿ, ಪ್ರೊ. ಶಿವಲಿಲಾ ಪಾಟೀಲ ಅವರು ಕಟ್ಟಿಮನಿಯವರ ಕಥೆಗಳನ್ನು ವಾಚಿಸಿದರು. ಪ್ರೊ. ಮಹಾನಂದ ಪಾಟೀಲ, ಪ್ರೊ. ಸುರೇಶ ಮುದ್ದಾರ ಇವರು ಕಟ್ಟೀಮನಿಯವರ ಆತ್ಮ ಕಥೆಯಿಚಿದ ಆಯ್ದ ಭಾಗಗಳನ್ನು ವಾಚಿಸಿದರು. ಆಶಯ ನುಡಿಗಳನ್ನು ಡಾ. ಬಾಳಾಸಾಹೇಬ ಲೋಕಾಪೂರ ಅವರು ಹೇಳಿದರು. ಡಾ. ಕೆ. ಆರ್. ದುಗರ್ಾದಾಸ ಅವರು ಸಮಾರೋಪದ ನುಡಿಗಳನ್ನು ಹೇಳಿದರು. ಅವರು ಕಟ್ಟೀಮನಿ ಸಾಹಿತ್ಯ ಹಿಂದಿಗಿಂತಲು ಇಂದು ಹೆಚ್ಚು ಪ್ರಸ್ತುತ ಎಂದು ಹೇಳಿದರು.

ಕಲಾವಿದ ಗೋಕಾಕದ ಈಶ್ವರಚಂದ್ರ ಬೆಟಗೇರಿ ಕಟ್ಟೀಮನಿ ಕುರಿತು ಲಾವಣಿಯು ಎಲ್ಲರ ಗಮನಸೆಳೆಯಿತು. 

ಡಾ. ಎಸ್. ಬಿ. ಹೊಸಮನಿ ಸ್ವಾಗತಿಸಿದರು, ಆರ್. ಎಲ್. ಮಿಜರ್ಿ ಹಾಗೂ ಎಸ್. ಕೆ. ಮಠದ ನಿರೂಪಿಸಿದರು, ಡಾ. ವಿಜಯಲಕ್ಷ್ಮೀ ಪಲೋಟಿ ವಂದಿಸಿದರು.