ರಮೇಶ ಸುರ್ವೆಗೆ ಕರುನಾಡ ಕಲಾಭೂಷಣ ಪ್ರಶಸ್ತಿ

Karunada Kalabhushan Award to Ramesh Surve

 ರಮೇಶ ಸುರ್ವೆಗೆ ಕರುನಾಡ ಕಲಾಭೂಷಣ ಪ್ರಶಸ್ತಿ 

ಅಥಣಿ 12: ಈ ದೇಶದ ಸಮಾಜಕ್ಕೆ ಬೇಕಿರುವುದು ಸಾಮರಸ್ಯದ ಸಂಸ್ಕೃತಿ. ಈ ನಿಟ್ಟಿನಲ್ಲಿ 11, 12, 13 ಜನವರಿ 2025ರಂದು ಮೂರು ದಿನಗಳ ಕಾಲ ಅಥಣಿಯ ಶ್ರೀಮೋಟಗಿ ಮಠದ ಆಶ್ರಯದಲ್ಲಿ ಪ್ರಭು ಚನ್ನಬಸವ ಸ್ವಾಮಿಗಳು ನೇತೃತ್ವದಲ್ಲಿ ಈ “ಸಾಮರಸ್ಯದ ಸಮಾಜೋತ್ಸವ” ಮಹಾನ ಧಾರ್ಮಿಕ ಉತ್ಸವ ಜರುಗಲಿದೆ. 

ಈ ಸಂಕಲ್ಪ ಉತ್ಸವದಲ್ಲಿ ನಾಡಿನ ಪ್ರಮುಖ ಮಠಾಧೀಶರು, ಸಚಿವರು, ಗಣ್ಯರು ಮೂರು ದಿನವು ಭಾಗವಹಿಲಿದ್ದಾರೆ. ಸಕಲ ಧಾರ್ಮಿಕ ವಿಧಿ, ವಿಧಾನಗಳ ಸಮಾರಂಭಗಳ ಮದ್ಯೆ ನಾಡಿನ ಸಾಧಕರನ್ನು ಗೌರವಿಸುವ ಮೂಲಕ, ಈ ಸಮಾವೇಶದಲ್ಲಿ ಗೌರವಿಸಲ್ಪಡುತ್ತಿರುವ ಸಾಧಕರಲ್ಲಿ ಬೆಂಗಳೂರು ನಗರ ನಿವಾಸಿ, ಕೊಪ್ಪಳ ಜಿಲ್ಲೆಯ ಕುಕನೂರಿನ ಇತಿಹಾಸ ಪ್ರಸಿದ್ಧ ಇಟಗಿ ಮೂಲದ, ಸಾಂಸ್ಕೃತಿಕ ಲೋಕದ ದಿಗ್ಗಜ, ಹಿರಿಯ ಪತ್ರಕರ್ತ, ರಂಗತಜ್ಞ, ಲೇಖಕ ರಮೇಶ ಸುರ್ವೆಯವರಿಗೆ ದಿನಾಂಕ 13-1-2025 ರಂದು “ಕರುನಾಡ ಕಲಾಭೂಷಣ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. 

ಸಮಾರಂಭದಲ್ಲಿ  ಜಗದ್ಗುರು ಸಿದ್ಧ ಸಂಸ್ಥಾನಮಠದ ಶಿವಲಿಂಗೇಶ್ವರ ಸ್ವಾಮಿಗಳು, ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮಿಗಳು, ಸದ್ಗುರು ಯಲ್ಲಾಲಿಂಗೇಶ್ವರಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದು, ಅಭಿನಂದನಾ ನುಡಿಯನ್ನು ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮಿಗಳು ಮಾತನಾಡಲಿದ್ದಾರೆ. ದಿವ್ಯ ನೇತೃತ್ವವನ್ನು ಬಸವಗೋಪಾಲ ನೀಲಮಾಣಿಕಮಠದ  ದಾನೇಶ್ವರ ಸ್ವಾಮಿಗಳು ವಹಿಸಿದ್ದಾರೆ. ಅಧ್ಯಕ್ಷೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ  ಲಕ್ಷ್ಮೀ ಹೆಬ್ಬಾಳ್ಕರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಶ್ರೀಮಂತ ಪಾಟೀಲ್, ಆನಂದ ನ್ಯಾಮಗೌಡ,  ಧುರ್ಯೋಧನ ಐಹೊಳೆ, ಕರವೇ ಅಧ್ಯಕ್ಷ ಪ್ರವೀಣ ಶೆಟ್ಟಿ, ಧುರೀಣರಾದ ಗಜಾನನ ಮಂಗಸೂಳಿ ಉಪಸ್ಥಿತರಿರುತ್ತಾರೆಂದು ಶ್ರೀಮೋಟಗಿ ಮಠದ ವಕ್ತಾರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.