ಲೋಕದರ್ಶನ ವರದಿ
ಬ್ಯಾಡಗಿ03: ಕನರ್ಾಟಕ ದರ್ಶನ ಕಾರ್ಯಕ್ರಮದಿಂದ, ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುತ್ತದೆಯಲ್ಲದೇ ರಾಜ್ಯದ ಇತಿಹಾಸವನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ಕನರ್ಾಟಕ ದರ್ಶನ ಕಾರ್ಯಕ್ರಮಕ್ಕೆ ಪಟ್ಟಣದ ತಾಲ್ಲೂಕ ಪಂಚಾಯತ್ ಆವರಣದಲ್ಲಿ ಚಾಲನೆ ನೀಡಿದರು.
ಬಡ ಮಕ್ಕಳಿಗೆ ಹಬ್ಬವಿದ್ದಂತೆ: ಆಥರ್ಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಬಡ ಕುಟುಂಬದ ಹಿನ್ನೆಲೆಯಿಂದ ಬಂದಂತಹ ಮಕ್ಕಳಿಗೆ ರಾಜ್ಯದ ಯಾವುದೇ ಕ್ಷೇತ್ರಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಇದರಿಂದ ಬೇರೆ ಮಕ್ಕಳು ತಾವು ಹೋಗಿ ಬಂದಂತಹ ಕ್ಷೇತ್ರಗಳ ವಿಯಷವನ್ನು ಹಂಚಿಕೊಂಡಾಗ ಕೇವಲ ಸದರಿ ಸ್ಥಳ ಹೇಗಿರಬಹದೆಂಬುದರ ಕುರಿತು ಕೇವಲ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಆದರೆ ಸಕರ್ಾರದ ಕಾರ್ಯಕ್ರಮವೊಂದು ಅದೇ ಸ್ಥಳಕ್ಕೆ ಮಕ್ಕಳನು ಕರೆದೊಯ್ದಾಗ ಅವರಿಗೆ ಎಲ್ಲಿಲ್ಲದ ಖುಷಿಯಾಗಲಿದೆ ಎಂದರು.
ಒತ್ತಡದಲ್ಲಿದ್ದಾರೆ ಶಿಕ್ಷಕರು: ಪಠ್ಯಕ್ರಮಣಿಕೆಗಳನ್ನು ಪೂರ್ಣಗೊಳಿಸುವ ಒತ್ತಡದಲ್ಲಿ ಶಿಕ್ಷಕರು ಮಕ್ಕಳಿಗೆ ಬೇರೆ ಸ್ಥಳಗಳ ಜ್ಞಾನವನ್ನು ನೀಡಲು ಸಾಧ್ಯವಾಗುತ್ತಿಲ್ಲ, ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಲು ಅವಕಾಶವಿದೆಯಾದರೂ, ಬಡ ಕುಟುಂಬಬದ ಮಕ್ಕಳಿಗೆ ಹಣ ಕೊಡಲು ಸಾಧ್ಯವಾಗದೇ ಹೋಗಬಹುದು, ಅಲ್ಲದೇ ಇತ್ತೀಚಿನ ದಿನಗಳಲ್ಲು ಪಾಲಕರು ಮಕ್ಕಳಿಗೆ ಅಂಕಗಳನ್ನು ಪಡೆಯುವ ನಿಟ್ಟಿನಲ್ಲಿ ಮಾತ್ರ ಒತ್ತಡ ಹೇರುತ್ತಿದ್ದು ಈ ಎಲ್ಲ ಕಾರಣಗಳಿಂದ ವಿದ್ಯಾಥರ್ಿಗಳಿಗೆ ಕನರ್ಾಟಕ ದರ್ಶನ ಉಚಿತ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ, ಉಪ ಪ್ರಾಚಾರ್ಯರಾದ ಎಂ.ಎನ್.ಪಾಟೀಲ, ಮಾಲತೇಶ ಚಳಗೇರಿ ಶಿಕ್ಷಕರಾದ ಎಸ್.ಬಿ.ಇಮ್ಮಡಿ, ಬಿ.ಎನ್.ಹೊಸಗೌಡ್ರ, ಈಶ್ವರ ಲಮಾಣಿ, ಬಿಆರ್ಪಿಗಳಾದ ಸೌದಾಗರ, ಮಲ್ಲಾಡದ, ರಾಜಶೇಖರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.