ಕರ್ನಾಟಕ ವಿದ್ಯಾವರ್ಧಕ ಸಂಘವು ಲಲಿತಾ ಮತ್ತು ಪ್ರೊ. ಸಿ. ವ್ಹಿ. ಕೆರಿಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಹಿತ್ಯದಂಪತಿ ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ 05 : ಸತಿ-ಪತಿಗಳು ಒಂದಾದ ಭಕ್ತಿಎಂದರೆ ಸಹಚರ ಭಾವ. ಅದುಜೀವನ ವಿಧಾನ. ದಾಂಪತ್ಯದರಹಸ್ಯತಂದೆ-ತಾಯಿಆಗುವುದರಲ್ಲಿದೆಎಂದು ಸಾಹಿತಿರಂಜಾನದರ್ಗಾ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಲಲಿತಾ ಮತ್ತು ಪ್ರೊ. ಸಿ. ವ್ಹಿ. ಕೆರಿಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಹಿತ್ಯದಂಪತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಗಂಡ ಹೆಂಡಿರ ಜಗಳದಲ್ಲಿ ಪ್ರಜಾಪ್ರಭುತ್ವಅಡಗಿದೆ. ಹೆಣ್ಣುಮಕ್ಕಳನ್ನು ನಾವು ಗೌರವದಿಂದಕಾಣಬೇಕು. ಇಂದು ತಂದೆ-ತಾಯಿಗಳ ಬಗ್ಗೆ ಗೌರವಕ್ಷೀಣಿಸುತ್ತಿದೆಎಂದು ವಿಷಾದ ವ್ಯಕ್ತಪಡಿಸಿದರು.ಬೆಳಗಾವಿಯ ಚಾರಿತ್ರಿಕ ಕಾದಂಬರಿಕಾರಯ. ರು. ಪಾಟೀಲ ‘ಸ್ವಾತಂತ್ರ್ಯ ಚಳುವಳಿ ಮತ್ತು ಕನ್ನಡತಿಯರು’ ವಿಷಯ ಕುರಿತು ಮಾತನಾಡುತ್ತಾ, ಸ್ವಾತಂತ್ರ್ಯ ಚಳುವಳಿಯಲ್ಲಿ ಕನ್ನಡದ ಮಹಿಳೆಯರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಮಹಿಳೆ ಚಳುವಳಿ ಜೊತೆ ಕುಟುಂಬ ನಿರ್ವಹಣೆ ಜೊತೆಗೆ ಸೆರೆಮನೆ ವಾಸ ಅನುಭವಿಸಿದ್ದರೂ ಕೂಡ ಈ ಬಗ್ಗೆ ದಾಖಲೆ ವಿರಳವಾಗಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಮೀರಬಾಯಿ ಕೊಪ್ಪಿಕರ, ಸೀತಾಬಾಯಿ, ಹನುಬರ ಕಾಶವ್ವ, ನಾಗಮ್ಮ, ಮಾಗಡಿಗೌರಮ್ಮ, ಸಿದ್ಧಾಪೂರದ ಮಹಾದೇವಿ, ರಾಮನಗರದ ಯಶೋಧರ ದಾಸಪ್ಪ, ತುಮಕೂರು ಭಾಗಿರಥಮ್ಮ, ಕೊಡಗಿನ ಗೌರಮ್ಮ, ನಾಗಮ್ಮ ಪಾಟೀಲ, ಲೀಲಾಬಾಯಿ, ಬಳ್ಳಾರಿ ಸಿದ್ಧಮ್ಮ, ಅಂಕೋಲಾದ ತಿಪ್ಪಕ್ಕ ತಮ್ಮಣ್ಣ ನಾಯಕ, ಮಹಾಲಕ್ಷ್ಮಿಜಂಬಿ, ಗಂಗಮ್ಮ ಯಂಕನಮರಡಿ, ಸೀತಮ್ಮ ಬಡಿಗೇರ, ಗಂಗೂಬಾಯಿ ಅಂಬಲಿ, ಗೋಕಾಕದ ಪಾರವ್ವ ಸೇರಿದಂತೆ ಅನೇಕ ಕನ್ನಡತಿಯರುದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದನ್ನು ಮರೆಯಲಾಗದುಎಂದರು.
ಸಾಹಿತ್ಯದಂಪತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುನಂದಾಕಡಮೆ, ಪ್ರಸ್ತುತ ದಿನಗಳಲ್ಲಿ ದಾಂಪತ್ಯ ಪರಿಕಲ್ಪನೆ ಬದಲಾಗುತ್ತಿದೆ. ಮದುವೆ ಮತ್ತು ದಾಂಪತ್ಯವು ಒಪ್ಪಂದ, ಹೊಂದಾಣಿಕೆ ಮತ್ತುಜವಾಬ್ದಾರಿಯಾಗಿದೆ.ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಉಸಿರು ಕಟ್ಟುವ ವಾತಾವರಣ ಸೃಷ್ಟಿಯಾಗುತ್ತದೆ. ಅದಕ್ಕೆ ಅವಕಾಶ ಕೊಡದೆ ಅರ್ಥಪೂರ್ಣವಾದ ಜೀವನ ನಡೆಸುವುದೇ ದಾಂಪತ್ಯ. ಮದುವೆ ಚೌಕಟ್ಟಿನ ಹೊರಗ ೆಇಂದು ಹೊಸ ಪೀಳಿಗೆ ಹೋಗುತ್ತಿರುವುದು ಕಾಣುತ್ತಿದ್ದೇವೆಎಂದು, ಸಂಘದ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರಕಾಶ ಕಡಮೆ ದಾಂಪ್ಯದ ಕುರಿತು ಭಾವನಾತ್ಮಕ ಕವಿತೆಯನ್ನುಓದಿದರು.ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸುನಂದಾ ಮತ್ತು ಪ್ರಕಾಶ ಕಡಮೆ ದಂಪತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.ವೇದಿಕೆಯಲ್ಲಿ ಶ್ರೀಮತಿ ಲಲಿತಾ ಕೆರಿಮನಿ ಉಪಸ್ಥಿತರಿದ್ದರು.ದತ್ತಿ ಆಶಯ ಕುರಿತು ದತ್ತಿದಾನಿ ಸಂಪದಾ ಸುಭಾಷಕೆರಿಮನಿ ಮಾತನಾಡಿದರು.
ಮೇಘಾ ಹುಕ್ಕೇರಿ ಹಾಗೂ ಸಾಕ್ಷಿ ಪ್ರಾರ್ಥಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನವ ಧರ್ಮ ಪ್ರತಿಷ್ಠಾನದ ಕಾರ್ಯದರ್ಶಿ ವ್ಹಿ.ಜಿ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.ಕಾರ್ಯಕ್ರಮದಲ್ಲಿ ವೀರಣ್ಣಒಡ್ಡೀನ, ಡಾ. ಲಿಂಗರಾಜಅಂಗಡಿ, ಅರುಣಕುಮಾರ ಹಬ್ಬು, ಎಸ್.ಜಿ. ಪಾಟೀಲ, ಮಲ್ಲಣ್ಣ ಗುಡಿಗೇರಿ, ಸುಲೋಚನಾ ಮಾಲಿಪಾಟೀಲ, ನಿರ್ಮಲಾ ಶೆಟ್ಟರ, ಮುಕ್ತಾ ಸವದಿ, ಗೀತಾ ಕುಂಬಿ, ಎಸ್.ವ್ಹಿ. ಕಮ್ಮಾರ, ವಿಜಯಲಕ್ಷ್ಮಿಕಲ್ಯಾಣಶೆಟ್ಟರ, ಪಾರ್ವತಿ ಹಾಲಭಾವಿ, ಸೋಮಶೇಖರ ಕೆರಿಮನಿ, ಬಸವಾಜ ಹುಕ್ಕೇರಿ, ಸುಮಂಗಲಾ ಅಂಗಡಿ, ಹೇಮಾಕುರ್ಲಿ, ಪ್ರಮೀಳಾ ಜಕ್ಕಣ್ಣವರ, ಮಹಾಂತೇಶ ನರೇಗಲ್ಲ ಸೇರಿದಂತೆ ಕೆರಿಮನಿ ಬಂಧುಗಳು ಉಪಸ್ಥಿತರಿದ್ದರು.