ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್ಶಿಪ್‌-2026: ಬೆಳಗಾವಿ ಜಿಲ್ಲೆಗೆ 22 ಪದಕಗಳ ಸಾಧನೆ

ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್ಶಿಪ್‌-2026: ಬೆಳಗಾವಿ ಜಿಲ್ಲೆಗೆ 22 ಪದಕಗಳ ಸಾಧನೆ Karnataka State Taekwondo Championship 2026: Belagavi District Achieves 22 Medals

ಲೋಕದರ್ಶನ ವರದಿ 

ಬೆಳಗಾವಿ 07: ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್ಶಿಪ್‌-2026ರಲ್ಲಿ ಬೆಳಗಾವಿ ಜಿಲ್ಲಾ ಟೇಕ್ವಾಂಡೋ ತಂಡದ 22 ಪದಕಗಳ ಸಾಧನೆ ಇಂಡಿಯಾ ಟೇಕ್ವಾಂಡೋ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ಟೇಕ್ವಾಂಡೋ ವತಿಯಿಂದ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಜುಲೈ 31ರಿಂದ ಆಗಸ್ಟ್‌ 5ರವರೆಗೆ ನಡೆದ 43ನೇ ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್ಶಿಪ್‌-2026ರಲ್ಲಿ ಬೆಳಗಾವಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಂದು ಚಿನ್ನ, ಒಂಬತ್ತು ಬೆಳ್ಳಿ ಹಾಗೂ ಹನ್ನೆರಡು ಕಂಚು ಸೇರಿದಂತೆ ಒಟ್ಟು 22 ಪದಕಗಳನ್ನು ಗೆದ್ದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಸಬ್ ಜೂನಿಯರ್, ಕ್ಯಾಡೆಟ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಕ್ಯೂರುಗಿ ಮತ್ತು ಪೂಮ್ಸೆ ಸ್ಪರ್ಧೆಗಳು ನಡೆದ ಈ ರಾಜ್ಯಮಟ್ಟದ ಚಾಂಪಿಯನ್ಶಿಪ್ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 3,500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.  

ತೀವ್ರ ಪೈಪೋಟಿಯ ನಡುವೆಯೂ ಬೆಳಗಾವಿ ಜಿಲ್ಲಾ ತಂಡವು ಗಮನಾರ್ಹ ಸಾಧನೆ ಮಾಡುವ ಮೂಲಕ 22 ಪದಕಗಳನ್ನು ತನ್ನದಾಗಿಸಿಕೊಂಡಿತು.ಪೀ-ವಿ (ಅಂಡರ್‌-6 ವರ್ಷ) ವಿಭಾಗದಲ್ಲಿ ಶೌರ್ಯ ಶಾನಭಾಗ್ ಬೆಳ್ಳಿ ಪದಕ ಗೆದ್ದರು.ಸಬ್ ಜೂನಿಯರ್ (ಅಂಡರ್‌-8 ವರ್ಷ) ವಿಭಾಗದಲ್ಲಿ ಸ್ಮಿತ್ ನವಖಂಡ್ಕರ್, ಆರವ್ ಜವಳಿ ಹಾಗೂ ನಿವೇದಿತಾ ಪಾಟೀಲ್ ಬೆಳ್ಳಿ ಪದಕಗಳನ್ನು ಪಡೆದುಕೊಂಡರೆ, ಓಂಕಾರ ಮೇದಾರ, ವಿಹಾನ್ ಕಾಮಟೆ, ತಕ್ಷ್‌ ಗಬಸವಳಗಿ, ತ್ರಿಷಾ ಲೋಕರಿ ಹಾಗೂ ಅನನ್ಯಾ ಲೋಹಾರ್ ಕಂಚಿನ ಪದಕಗಳನ್ನು ಗೆದ್ದರು.ಸಬ್ ಜೂನಿಯರ್ (ಅಂಡರ್‌-10 ವರ್ಷ) ವಿಭಾಗದಲ್ಲಿ ಸಾನ್ವಿ ಪೊತ್ದಾರ್ ಚಿನ್ನದ ಪದಕ ಜಯಿಸಿದರೆ, ಹರ್ಷಿವ್ ಪಟೇಲ್, ಶೌರ್ಯ ಪೊಟೆ ಹಾಗೂ ವಿಶ್ವಜೀತ್ ಪವಾರ್ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.ಕ್ಯಾಡೆಟ್ (ಅಂಡರ್‌-12 ವರ್ಷ) ವಿಭಾಗದಲ್ಲಿ ನಿರ್ವಿ ಗಬಸವಳಗಿ ಬೆಳ್ಳಿ ಪದಕ ಗೆದ್ದರೆ, ಶ್ರೇಯಶ್ ಲಾಡ್, ಶ್ರಾವ್ಯ ಶಾನಭಾಗ್, ಸಾನ್ವಿ ಪಾಟೀಲ್, ಮನಸ್ವಿನಿ ಪ್ರಜಾಪತಿ ಹಾಗೂ ಸಾನ್ವಿ ಅನ್ವೇಕರ್ ಕಂಚಿನ ಪದಕಗಳನ್ನು ಪಡೆದರು.ಜೂನಿಯರ್ (ಅಂಡರ್‌-14 ವರ್ಷ) ವಿಭಾಗದಲ್ಲಿ ಮಾನವಿ ಪಾಟೋಲೆ ಬೆಳ್ಳಿ ಪದಕ ಹಾಗೂ ರಣವೀರ್ ಪಾಟೀಲ್ ಕಂಚಿನ ಪದಕ ಗಳಿಸಿದರು.  

ಇದೇ ರೀತಿ ಅಂಡರ್‌-18 ವರ್ಷ ವಿಭಾಗದಲ್ಲಿ ತನಿಷ್ ರಾವ್ ಕಂಚಿನ ಪದಕ ಜಯಿಸಿದರು.ಬೆಳಗಾವಿ ಜಿಲ್ಲಾ ತಂಡಕ್ಕೆ ರಾಷ್ಟ್ರಮಟ್ಟದ ಕ್ರೀಡಾ ಆಧಾರಿತ ಮಾನವೀಯ ಸಂಸ್ಥೆಯಾದ ಯಕ್ಷಿತ್ ಯುವ ಪ್ರತಿಷ್ಠಾನವು ಅಭೂತಪೂರ್ವ ಬೆಂಬಲ ಮತ್ತು ಕ್ರೀಡಾ ಸಹಕಾರ ನೀಡಿತ್ತು. ಬೆಳಗಾವಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಪ್ರಶಿಕ್ಷಕರಾದ ಟೇಕ್ವಾಂಡೋ ಮಾಸ್ಟರ್ ಶ್ರೀಪಾದ ರವಿ ರಾವ್ ಅವರ ತಾಂತ್ರಿಕ ಮಾರ್ಗದರ್ಶನದಡಿಯಲ್ಲಿ ರಾಷ್ಟ್ರೀಯ ನಿರ್ಣಾಯಕರು ಹಾಗೂ ತರಬೇತುದಾರರಾದ ಸ್ವಪ್ನಿಲ್ ಪಾಟೀಲ್ ಮತ್ತು ವೈಭವ್ ಪಾಟೀಲ್ ಈ ಎಲ್ಲಾ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ತ್ರಿವೇಣಿ ಬಡಕಣ್ಣವರ ಹಾಗೂ ವರ್ಷಿಣಿ ಶಾನಭಾಗ್ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದರು.