ಕರ್ನಾಟಕ ಬ್ಯಾಂಕ್ನ 984ನೇ ಶಾಖೆ ಉದ್ಘಾಟನೆ: ಶಾಸಕ ವಿಶ್ವಾಸ ವೈದ್ಯ
Karnataka Bank's 984th branch inaugurated: MLA Vishwas Vaidya
ಸವದತ್ತಿ 31: ನಗರದ ಜನತೆಗೆ ಸುಸಜ್ಜಿತ ಹಾಗೂ ಆಧುನಿಕ ಬ್ಯಾಂಕಿಂಗ್ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾಂಕ್ ತನ್ನ ಹೆಜ್ಜೆಯನ್ನು ಸವದತ್ತಿಯಲ್ಲಿಯೂ ಇರಿಸಿದೆ. ನಗರದ ಎಸ್.ಎಲ್.ಎ.ಓ. ಕ್ರಾಸ್ ಹತ್ತಿರದ ಹಂಪಣ್ಣವರ ಕಾಂಪ್ಲೆಕ್ಸ್ನಲ್ಲಿ ಕರ್ನಾಟಕ ಬ್ಯಾಂಕ್ನ 984ನೇ ಶಾಖೆ ಹಾಗೂ ಮಿನಿ ಇ-ಲಾಬಿಯನ್ನು ಶಾಸಕ ವಿಶ್ವಾಸ ವೈದ್ಯ ಅವರು ಜ್ಯೋತಿ ಬೆಳಗಿಸುವ ಮೂಲಕ ಮಂಗಳವಾರ ರಂದು ಉದ್ಘಾಟಿಸಿದರು.ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸವದತ್ತಿ ನಗರಕ್ಕೆ ಕರ್ನಾಟಕ ಬ್ಯಾಂಕ್ನಂತಹ ಪ್ರತಿಷ್ಠಿತ ಸಂಸ್ಥೆಯ ಆಗಮನವಾಗಿರುವುದು ಹರ್ಷದಾಯಕ ವಿಷಯವಾಗಿದೆ. ಬ್ಯಾಂಕಿಂಗ್ ಕ್ಷೇತ್ರವು ಡಿಜಿಟಲ್ ರೂಪದಲ್ಲಿ ಕ್ರಾಂತಿ ಮಾಡುತ್ತಿದ್ದು, ಇಲ್ಲಿನ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಹಾಗೂ ವಿಶೇಷವಾಗಿ ರೈತರಿಗೆ ಈ ನೂತನ ಶಾಖೆಯು ಸುಧಾರಿತ ತಂತ್ರಜ್ಞಾನದೊಂದಿಗೆ ಉತ್ತಮ ಆರ್ಥಿಕ ಸೇವೆಗಳನ್ನು ನೀಡಲಿ,ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯ ಪರಮ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಬ್ಯಾಂಕುಗಳು ಕೇವಲ ವ್ಯವಹಾರ ಕೇಂದ್ರಗಳಾಗದೆ ಜನರ ಆರ್ಥಿಕ ಅಭಿವೃದ್ಧಿಯ ಶಕ್ತಿಯಾಗಲಿ ಎಂದು ಶುಭ ಹಾರೈಸಿದರು.ಕರ್ನಾಟಕ ಬ್ಯಾಂಕಿನ ಎ.ಜಿ.ಎಮ್. ಈರಣ್ಣ ನಾಗರಾಳ ಅವರು ಬ್ಯಾಂಕಿನ ಸೌಲಭ್ಯಗಳ ಕುರಿತು ಮಾಹಿತಿ ಹಂಚಿಕೊಂಡರು. ಸವದತ್ತಿಯ ಶಾಖೆಯು ಬ್ಯಾಂಕಿನ ಒಟ್ಟು ಜಾಲದ 984ನೇ ಮೈಲಿಗಲ್ಲಾಗಿದ್ದು, ಮಿನಿ ಇ - ಲಾಬಿಯ ಸೌಲಭ್ಯವನ್ನೂ ಒಳಗೊಂಡಿದೆ ಹೇಳಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ನಗರಸಭೆ ಪೌರಾಯುಕ್ತ ಸಂಗನಬಸಯ್ಯ,ರಾಜೇಂದ್ರ ಹಂಪಣ್ಣವರ,ಬಸವರಾಜ ಕಾರದಗಿ, ಸ್ಥಳೀಯ ಗಣ್ಯರು, ಬ್ಯಾಂಕಿನ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 