ಲೋಕದರ್ಶನ ವರದಿ
ಕೊಪ್ಪಳ 25: ಕನಕಗಿರಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಟ್ಕಾ ಜೂಜ ಆಟ ಹೆಚ್ಚಾಗಿದ್ದು ತಡೆಯುವಂತೆ ಆಗ್ರಹಿಸಿ ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಕನಕಗಿರಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಟ್ಕಾ ಹಾವಳಿ ಜೋರಾಗಿದ್ದು, ಇದರ ಬಗ್ಗೆ ಈ ಹಿಂದೆಯು ದೂರು ನೀಡಿದ್ದರೂ ಸಹ ಇದುವರೆಗೂ ಕ್ರಮ ಕೈಗೊಂಡಿಲ್ಲ ಆದ್ದರಿಂದ ಮಟ್ಕಾ ಹಾವಳಿಯಿಂದ ಬಡ ಕುಟುಂಬಗಳು ಇನ್ನಷ್ಟು ತೀವೃ ಬಡತನ ಬರುವಂತೆ ಆಗಿದೆ.
ಕನಕಗಿರಿ ಪ್ರದೇಶವೂ ಒಣ ಬೇಸಾಯ ಭೂಮಿಯಾಗಿರುವುದರಿಂದ ದುಡ್ಡಿನ ಆಸೆಗೆ ಬಿದ್ದ ಜನ ಸಾಲ ಮಾಡಿ ಹಾಗೂ ಮನೆಯಲ್ಲಿದ್ದಂತಹ ವಸ್ತುಗಳನ್ನು ಅಡವಿಟ್ಟು ಮಟ್ಕ ಆಟವನ್ನು ಆಡುತ್ತಿದ್ದಾರೆ. ಇದರಿಂದ ಕುಟುಂಭಸ್ತರ ಕಣ್ಣಿರಲ್ಲಿ ಕೈ ತೊಳೆಯುವಂತೆ ಆಗಿದೆ.
ಈ ನಿಟ್ಟಿನಲ್ಲಿ ಕನಕಗಿರಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಮಟ್ಕಾ ಆಡುವುದುನ್ನು ನಿಲ್ಲಿಸಿ ಮಟ್ಕಾ ಏಜೆಂಟರನ್ನು ಕೂಡಲೇ ಬಂಧಿಸಿಸಬೇಕು ಜೊತೆಗೆ. ಕನಕಾಚಲ ಪತಿ ದೇವಸ್ಥಾನದ ಆವರಣದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಾಂಸದ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಜೇಶ ಚಿನ್ನೂರ, ಶಿವಣ್ಣ ಕರಡಿ, ನಾಗರಾಜ ಕಲೇರಿ, ಮಲ್ಲಪ್ಪ ಪುಂಡಗೌಡ್ರು, ಮಂಜುನಾಥ ಬಿಲ್ಪತ್ತಾರ, ಖಾದರಸಾಬ ಗುತ್ತೇದಾರ, ಯಮನೂರ, ಅನೀಲ ಕುಮಾರ ಬೀಜಾಳ, ಮಾಬಲೇಶ ಕಲಕೇರಿ, ಸಂಜೇಯ ಕಟವಟೆ ಸೇರಿದಂತೆ ಇತರರು ಇದ್ದರು.