ಧಾರವಾಡ, ಸ.22 : ಮಾನವನ ದೇಹದ ಆರೋಗ್ಯ ಸಂರಕ್ಷಣೆಗೆ ಪೂರಕವಾಗಿ ಸಮಸ್ತ ರೈತ ಬಾಂಧವರು ಎಲ್ಲೆಡೆ ಸಾವಯವ ಕೃಷಿ ಜಾಗೃತಿಗೆ ಶ್ರಮಿಸಬೇಕೆಂದು ನಿವೃತ್ತ ಕೃಷಿ ಅಧಿಕಾರಿ ಆರ್.ವ್ಹಿ. ಕರವೀರಮಠ ಕರೆ ನೀಡಿದರು.
ಅವರು ಇಲ್ಲಿಗೆ ಸಮೀಪದ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ಮುಖಂಡರು ತಮ್ಮ ಸೇವಾ ನಿವೃತ್ತಿಯ ಸಂದರ್ಭದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಸಾವಯವ ಕೃಷಿ ಉತ್ಪನ್ನಗಳಲ್ಲಿ ರಸಾಯನಿಕಗಳು ಇಲ್ಲದೇ ಇರುವುದರಿಂದ ಸ್ವಾಭಾವಿಕವಾಗಿ ಮಾನವನ ದೈಹಿಕ ಆರೋಗ್ಯದ ರಕ್ಷಣೆಯು ಸಾಧ್ಯವಾಗುತ್ತದೆ ಎಂದರು.
ಭಾರತೀಯ ಕೃಷಿ ಪದ್ಧತಿಯ ಮೂಲ ಬೇರಾಗಿರುವ ಸಾವಯವ ಕೃಷಿಯ ಉತ್ಪನ್ನಗಳಿಗೆ ಈಗ ಎಲ್ಲೆಡೆ ಬೇಡಿಕೆ ಅಧಿಕಗೊಂಡಿದ್ದು, ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸದೇ ತಮ್ಮ ಜಮೀನುಗಳಲ್ಲಿ ಸಾವಯವ ಕೃಷಿ ಕೈಕೊಳ್ಳಲು ರೈತರು ಸಂಕಲ್ಪ ಮಾಡಿದರೆ ಹೆಚ್ಚು ಹಣ ಸಂಪಾದಿಸಬಹುದಾಗಿದೆ ಎಂದೂ ಕರವೀರಮಠ ಹೇಳಿದರು.
ಹಾರೋಬೆಳವಡಿ ರೈತ ಬಾಂಧವರ ಪರವಾಗಿ ಕೃಷಿ ಅಧಿಕಾರಿ ಆರ್.ವ್ಹಿ. ಕರವೀರಮಠ ಅವರನ್ನು ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಗೌರವಿಸಲಾಯಿತು. ಅಮ್ಮಿನಬಾವಿ ಮಂಡಳ ಪಂಚಾಯತಿ ಮಾಜಿ ಸದಸ್ಯ ವಿರೂಪಾಕ್ಷಪ್ಪ ಜಕ್ಕಣ್ಣವರ, ಕಿತ್ತೂರರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನ ಇನಾಂಹೊಂಗಲ ಶಾಖೆಯ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ, ರೈತ ಮುಖಂಡರಾದ ಈರನಗೌಡ ಪಾಟೀಲ, ಈರಪ್ಪ ಏಣಗಿ, ಶಿವನಗೌಡ ಪಾಟೀಲ ಮುಂತಾದವರು ಇದ್ದರು
04