ತೊಗರಿ ಬೆಳೆ ಪರಿಹಾರಕ್ಕಾಗಿ ಹೆದ್ದಾರಿ ತಡೆದು ಕರವೇ ಪ್ರತಿಭಟನೆ
ಇಂಡಿ 09: ತಾಂಬಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ರೈತರು ಸೇರಿ ಈ ಬಾಗದ ಮುಖ್ಯ ಬೆಳೆಯಾದ ತೊಗರಿ ಬೆಳೆ ಹವಾಮಾನ ವೈಪರೀತ್ಯದಿಂದ ತೋಗರಿ ಬೆಳೆ ಇಳುವರಿ ಬಾರದ ಕಾರಣ ರೈತರಿಗೆ ಪ್ರಧಾನ ಮಂತ್ರಿ ಭೀಮಾ ಫಸಲು ಯೋಜನೆ ಅಡಿಯಲ್ಲಿ ವಿಮೆ ಕಟ್ಟಿದ ರೈತರಿಗೆ ನ್ಯಾಯಯುತವಾಗಿ ವಿಮೆ ನೀಡಬೇಕು, ಕಟ್ಟದ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಂಬಾ ಗ್ರಾಮದಲ್ಲಿ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ನೇತೃತ್ವದಲ್ಲಿ ಇಂಡಿ ದೇವರಹಿಪ್ಪರಿಗಿ ರಾಜ್ಯ ಹೆದ್ದಾರಿ ತಡೆದು ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಯಿತು.
ಮಾತನಾಡಿದ ಶಿವರಾಜ್ ಕೆಂಗನಾಳ ಈ ಬಾರಿ ತೊಗರಿ ಬೆಳೆ ಬೆಳೆದ ರೈತರಿಗೆ ಈ ವರ್ಷ ಕಳಪೆ ಬೀಜ ವಿತರಣೆ ಮಾಡಿದ್ದರಿಂದ ಇಳುವರಿ ಕುಂಠಿತವಾಗಿದೆ ಹಾಗಾಗಿ ಅಂತಹ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಭಾಗದ ಮುಖ್ಯ ಕಾಲುವೆ ಗುತ್ತಿ ಬಸವಣ್ಣ ಏತ ನೀರಾವರಿ, ಈ ಕಾಲುವೆಗೆ ಇನ್ನೊಂದು ಬಾರಿ ನೀರು ಹರಿಸಿ ಜನ ಜಾನುವಾರ ಹಾಗೂ ಹಳ್ಳಕೊಳ್ಳ ತುಂಬಿಸಬೇಕು ಎಂದು ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ತಹಸಿಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಮಾತನಾಡಿದರು.
ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರು ರಾಯಗೊಂಡ ಪೂಜಾರಿ ಮಾತನಾಡಿ ವಿಮಾ ಕಂಪನಿಯವರು ನಮ್ಮ ರೈತರ ಕಡೆಯಿಂದ ವಿಮಾ ಕಟ್ಟಿಸಿಕೊಂಡು ನಂತರ ಬೇರೆ ಬೇರೆ ಕಾರಣ ಹೇಳಿ ನಮ್ಮ ರೈತರಿಗೆ ತೊಗರಿ ಇಳುವರಿ ಬರದಿದ್ದರೂ ಸರಿಯಾಗಿ ವಿಮಾ ಪರಿಹಾರ ನೀಡುತ್ತಿಲ್ಲ, ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕರವೇ ವಕ್ತಾರ ಮಾಸಿಮ್ ವಾಲಿಕರ್ ಮಾತನಾಡಿ ಈ ನಮ್ಮ ಬೇಡಿಕೆಗಳನ್ನು ಕೂಡಲೇ ಸ್ಪಂದನೆ ಮಾಡಿ ಪರಿಹಾರ ವಿತರಸಬೇಕು ಇಲ್ಲದಿದ್ದರೆ ನಾವು ಇಂಡಿ ದೇವರ- ಹಿಪ್ಪರಗಿ ರಾಜ್ಯ ಹೆದ್ದಾರಿಯನ್ನು ತಡೆದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸುದ್ದಿ ತಿಳಿದ ಇಂಡಿ ಉಪ ಆರ್ ಬಿ ಮೋಗಿ, ಇಂಡಿ ಕಂದಾಯ ನೀರೀಕ್ಷಕರಾದ ಎಚ್ ಎಚ್ ಗುನ್ನಾಪೂರ,ತಾಂಬಾ ಗ್ರಾಮ ಆಡಳಿತ ಅಧಿಕಾರಿ ಸಿದ್ದು ಪೂಜಾರಿ ಅವರು ಪ್ರತಿಭಟನೇಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ತಾಂಬಾ ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ್ ಚಿಕ್ಕಗಸಿ ಉಪಾಧ್ಯಕ್ಷ ರಾಮಚಂದ್ರ ದೊಡ್ಡಮನಿ ಹಾಗೂ ರವೀಂದ್ರ ನಡಗಡ್ಡಿ, ಮಾಜಿ ತಾಲೂಕ ಪಂಚಾಯತ ಸದಸ್ಯ ಪ್ರಕಾಶ ಮುಂಜಿ, ರೈತ ಮುಖಂಡರಾದ ಬೀರ್ಪ ವಗ್ಗಿ, ವಿಠ್ಠಲ ಹೊರ್ತಿ, ಮಲ್ಲಿಕಾರ್ಜುನ ದಿವಟಗಿ, ಪ್ರಶಾಂತ ದೇಗಿನಾಳ, ರಾಕೇಶ ಬಾಗಲಕೋಟಿ, ಶರಣು ಕಲ್ಲೂರ್, ಶಂಕರ ಗಬಸಾವಳಗಿ, ರಮೇಶ ಚಾಂದಕವಟೆ, ಭೀಮಣ್ಣ ಕನ್ನೂರ ಹಾಗೂ ತಾಂಬಾ ಗ್ರಾಮದ ಸಮಸ್ತ ರೈತ ಬಾಂಧವರು ಸಾರ್ವಜನಿಕರು ಭಾಗವಹಿಸಿದ್ದರು.