ಮಾರ್ಚ 15 ಕ್ಕೆ ಕನ್ನೂರ ಕೆ.ಇ.ಬಿ ಉದ್ಘಾಟನೆ ಭರವಸೆ
Kannur KEB inauguration promised on March 15th
ವಿಜಯಪುರ 05 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲೆಯ ತಿಡಗುಂದಿ ಕೆ.ಇ.ಬಿ.ಯ ಮುಂದೆ ಜಮಾಯಿಸಿದ ರೈತರು ಗೇಟ್ ಹಸಿರು ಶಾಲು ಕಟ್ಟಿ ಕನ್ನೂರನಲ್ಲಿ ಕಳೆದ ಒಂದು ವರ್ಷದ ಹಿಂದೆ ಉದ್ಘಾಟನೆ ಆಗಬೇಕಿರುವ 110 ಕೆ.ವಿ ಇಲ್ಲಿಯವರೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನೀರ್ಲಕ್ಷ್ಯದಿಂದ ಆಗಿಲ್ಲ, ಎಂದು ಆಗ್ರಹಿಸಿ ಸುಮಾರು 3 ಗಂಟೆಗಳ ಕಾಲ ಹೋರಾಟ ಮಾಡಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಮಾತನಾಡುತ್ತಾ ಗುತ್ತಿಗೆದಾರನ ವಿಳಂಭ ನೀತಿಯಿಂದ 2 ವರ್ಷದ ಹಿಂದೆ ಉದ್ಘಾಟನೆ ಆಗಬೇಕಿರುವ ಕನ್ನೂರಿನ ಹೊಸ ಕೆ.ಇ.ಬಿ ಇಲ್ಲಿಯವರೆಗೆ ಆಗಿಲ್ಲ ಎಂದರೆ ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕೂಡಾ ಪ್ರಮುಖ ಕಾರಣವಾಗಿದೆ, ಅಧಿಕಾರಿಗಳು ಕೂಡಾ ಇದರ ಜವಾಬ್ದಾರಿಯನ್ನು ಹೊರಬೇಕು ಎಂದರು, ಇಂದು ಸಾಯಂಕಾಲದ ಒಳಗಾಗಿ ಉದ್ಗಾಟನೆ ಮಾಡಬೇಕು ಇಲ್ಲವಾದಲ್ಲಿ ಇಲ್ಲಿಯೇ ಟೆಂಟ್ ಹೊಡೆದು ಅಡುಗೆ ಮಾಡಿ ಹೋರಾಟ ಮಾಡಲಾಗುವುದು ಎಂದು ರೈತರೊಂದಿಗೆ ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಾದ ಇ.ಇ. ಸಂತೋಷ ಪಾಟೀಲ, ಎ.ಇ.ಇ ಅನೀಲ ಪೂಜಾರಿ, ಎ.ಇ.ಇ ಗಂಗಾಧರ ಲೋಣಿ. ಎ.ಇ.ಇ ಎಸ್.ಎಸ್ ಸಿದ್ದಾಪುರ ಹಾಗೂ ಸ್ಥಳೀಯ ಶಾಸಕರಾದ ವಿಠ್ಠಲ ಕಟಕದೊಂಡ ಅವರು ಗುತ್ತಿಗೆದಾರನ್ನ ಹಿಗ್ಗಾ ಮುಗ್ಗಾ ಜಾಡಿಸಿ ಶೀಘ್ರದಲ್ಲಿ ಕನ್ನೂರಿನ ಕೆ.ಇ.ಬಿ ಪ್ರಾರಂಭಿಸಬೇಕು ಎಂದರು. ಆಗ ಗುತ್ತಿಗೆದಾರ ಮಾರ್ಚ 15 ರ ಒಳಗಾಗಿ ಮುಗಿಸುವುದಾಗಿ ತಿಳಿಸಿದಾಗ ಅಧಿಕಾರಿಗಳು ಮಾರ್ಚ 22 ರ ವರೆಗೆ ಕಾಲಾವಕಾಶ ಕೊಡಿ ಎಂದು ರೈತರಿಗೆ ಮನವಿ ಮಾಡಿದರು.
ಆಗ ರೈತರು ಮತ್ತು ಅಧಿಕಾರಿಗಳ ಮಧ್ಯ ವಾಗ್ವಾದ ಉಂಟಾಗಿ ಅಧಿಕಾರಿಗಳಿಗೂ ಗೌರವ ಕೊಡಬೇಕು ಎಂಧು ರೈತರೆಲ್ಲರು ಮಾರ್ಚ 15 ಒಳಗಾಗಿ ಎಲ್ಲಾ ಕೆಲಸ ಮುಗಿಸಿ ಶಾಸಕರಿಂದಲೇ ಈ ಕೆ.ಇ.ಬಿ ಉದ್ಗಾಟನೆ ಮಾಡಿಸಬೇಕು, ಇದನ್ನು ಮುಖ್ಯಸ್ಥರು ಅಧಿಕಕೃತವಾಗಿ ಬರೆದುಕೊಡಬೇಕು ಎಂದು ಹೇಳಿದಾಗ ಅಧಿಕಾರಿಗಳು ಒಪ್ಪಿಗೆ ಸೂಚಿಸಿ ಬರೆದು ಕೊಟ್ಟ ನಂತರ ಹೋರಾಟ ಹಿಂಪಡೆಯಲಾಯಿತು
ಈ ವೇಳೆ ಸ್ಥಳೀಯ ಶಾಸಕರಾದ ವಿಠ್ಠಲ ಕಟಕದೊಂಡ ಅವರು ಗುತ್ತಿಗೆದಾರ ಸರಿ ಇಲ್ಲ ಸಾಕಷ್ಟು ಬಾರಿ ನಾನೆ ಪೋನ ಹಚ್ಚಿ ಮತ್ತೆ ಸಭೆಯಲ್ಲಿಯೂ ಕೂಡಾ ಕೆಳಿದಾಗ ಕೇವಲ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎಂದು ಗುತ್ತಿಗೆದಾರ ಬೈದು ತಾಕೀತು ಮಾಡಿ ಮಾರ್ಚ 12 ರ ಒಳಗಾಗಿ ಕೆಲಸ ಮುಗಿಸಬೇಕು ಹಗಲು ರಾತ್ರಿ ಆದರೂ ಪರವಾಗಿಲ್ಲ ಕೂಡಲೇ ಕೆಲಸ ಮುಗಿಸಿ ಎಂದು ಹೇಳಿದರು, ನಂತರ 2 ದಿನ ಅಧಿಕರಿಗಳು ತಜ್ಞರಿಂದ ತಪಾಸಣೆ ಮಾಡಿ ಮಾರ್ಚ ರಂದು ಉದ್ಗಾಟನೆ ಮಾಡೋಣ ಎಂದರು.
ಈ ವೇಳೆ ವಿಜಯಪುರ ತಾಲೂಕಾ ಅಧ್ಯಕ್ಷರಾದ ಅನಮೇಶ ಜಮಖಂಡಿ, ಮುಖಂಡರಾದ ರಾಮಸಿಂಗ ರಜಪೂರ, ಸತೀಶ ದಾಶ್ಯಾಳ, ಗೆನ್ನಪ್ಪ ಬಿರಾದಾರ, ಮಹಾಂತಗೌಡ ಬಿರಾದಾರ, ಗೀರೀಶ ತಾಳಿಕೋಟಿ, ರಾಮನಗೌಡ ಬಿರಾದಾರ, ರಾಮನಗೌಡ ಪಾಟೀಲ, ಮುದಕಣ್ಣ ಬಿರಾದಾರ, ಕಾಶಿರಾಯಗೌಡ ಪಾಟೀಲ, ಕಲ್ಲಪ್ಪ ಹತ್ತಿ, ಶ್ರೀನಾಥ ದಾಶ್ಯಾಳ, ಸಂಗನಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಪ್ರಕಾಶ ಜಾಧವ, ವಿರೇಶ ಮುರಗುಂಡಿ, ದೇವೆಗೌಡ ಬಿರಾದಾರ ಸೇರಿದಂತೆ ಬೊಮ್ಮನಳ್ಳಿ, ಮಿಂಚನಾಳ, ಗುಣಕಿ, ತಿಡಗುಂದಿ, ಗ್ರಾಮದ ರೈತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 