ಭಕ್ತಿ ಶ್ರದ್ಧೆಯಿಂದ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಪ್ರತಿಷ್ಟಾಪನ ಪೂಜೆಗಳು ಮುತ್ತೈದೆಯರಿಗೆ ಉಡಿಅಕ್ಕಿ ಕಾರ್ಯಕ್ರಮ
ಬಳ್ಳಾರಿ 10: ನಗರದಲ್ಲಿನ ಅತಿ ಪುರಾತನ ದೇವಸ್ಥಾನವಾಗಿರುವ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ 105ನೇ ವರ್ಷದ ಪ್ರತಿಷ್ಠಾಪನ ದಿನವಾದ ಇಂದು ವಿವಿಧ ಪೂಜೆಗಳನ್ನು ಭಕ್ತಿ ಶ್ರದ್ಧೆಯಿಂದ ನೆರವೇರಿಸಿದರೆಂದು ದೇವಸ್ಥಾನದ ಸಮಿತಿಯ ಟ್ರಸ್ಟಿ ಅಧ್ಯಕ್ಷರಾದ ಗಾದೇಂ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ. ಸೋಮವಾರ ಮುಂಜಾನೆ ವಾಸವಿ ಕನ್ನಿಕಾ ಪರಮೇಶ್ವರಿ ದೇವಿಗೆ ಕ್ಷೀರಾಭಿಷೇಕ, ಚಿನ್ನದ ಆಭರಣಗಳ ಅಲಂಕಾರ ಸೇರಿಂದತೆ ಕನ್ನಿಕಾ ಪರಮೇಶ್ವರಿ ದೇವಿಗೆ ಕುಂಕುಮಾರ್ಚನ ಮತ್ತು ವ್ರತ ಪೂಜೆಗಳನ್ನು ನೆರೆವೇರಿಸಲಾಯಿತು. ಈ ಸಂದರ್ಭದಲ್ಲಿ ಒಂದು ವರ್ಷಗಳ ಕಾಲ ಸತತವಾಗಿ ದೇವಿಯ ಪುರಾಣ ಪ್ರವಚನ ಮಾಡಿರುವ ಸುಮಾರು 600 ಜನ ಮತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷರಾದ ಉಮಾ ಸಾಯಿರಾಮ್ ಮಾತನಾಡಿ, ಮಹಿಳಾ ಸಂಘದಲ್ಲಿ ಪ್ರತಿಯೊಬ್ಬರೂ ಸದಸ್ಯರಾಗಿ ಐಕ್ಯತೆಯೊಂದಿಗೆ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಬಹುದು ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು. ಅಷ್ಟೆ ಅಲ್ಲದೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ದೊಡ್ಡಮಟ್ಟದ ಉದ್ಯೋಗ ಮೇಳವನ್ನ ನಡೆಸಿ ನಮ್ಮ ಜನಾಂಗದ ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಒದಗಿಸಲಾಗುವುದು ಎಂದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಟ್ರಸ್ಟ್ ಮುಖ್ಯಸ್ಥರುಗಳಾದ ಗಾದೇಂ ಗೋಪಾಲಕೃಷ್ಣ, ವಿಟ್ಟ ಕೃಷ್ಣಕುಮಾರ್, ಆಶ್ವತ್ಥ್ ನಾರಾಯಣ, ಜಯಂತಿ ಕಿಶೋರ್ ಕುಮಾರ್, ನಾಮ ನಾಗರಾಜ್, ಸೋಂತಾ ಗಿರಿಧರ್, ಜೆ ಶೋಭಾ, ಲಕ್ಷ್ಮಿ, ಕೆ ರೂಪಾ, ನಂಬೂರಿ ರತ್ನ, ಕೆ.ಬಿ ವನಜಾ, ಮಂಗಳಗೌರಿ, ಡಿ ನಾಗವೇಣಿ, ಡಿ ಸವಿತಾ ಶ್ರೀನಿವಾಸ್, ಚೆಲ್ಲೂರು ಕವಿತಾ, ಸಿ ಅನಿತಾ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಈ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು ಎಂದು ಗಾದೆಂ ಗೋಪಾಲಕೃಷ್ಣ ತಿಳಿಸಿದ್ದಾರೆ.