ಕನ್ನಡಿಗರು ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ : ಕನ್ನಡ ಸಂಸ್ಕೃತಿ ಅರಿವು ಅಗತ್ಯ : ಸಚಿವ ದೇಶಪಾಂಡೆ

ಕಾರವಾರ 01: ಕನ್ನಡಿಗರದು ಸಹೃದಯಿ ಮನಸು. ವಿಶ್ವಕ್ಕೆ ಕನ್ನಡಿಗರು ನೀಡಿದ ಕೊಡುಗೆ ಅಪಾರ ಎಂದು ರಾಜ್ಯದ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ,ಉದ್ಯಮಶೀಲತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ  ಹೇಳಿದರು.
	 ಕಾರವಾರದಲ್ಲಿ ಪೋಲೀಸ್ ಪರೇಡ್ ಮೈದಾನದಲ್ಲಿ ನಡೆದ ರಾಜ್ಯೋತ್ಸವದ ಪ್ರಧಾನ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಕನ್ನಡ ಸಾಹಿತಿಗಳ ಮತ್ತು ಕನ್ನಡ ನಾಡಿನ ಒಗ್ಗಟ್ಟಿಗೆ ದುಡಿದವರ ಇತಿಹಾಸವನ್ನು ಯುವಜನತೆ ನೆನಪಿಸಿಕೊಳ್ಳಬೇಕು ಹಾಗೂ ಸ್ಮರಿಸಬೇಕು ಎಂದರು. ಪರಧರ್ಮ ಸಹಿಷ್ಣುಗಳಾದ ಕನ್ನಡಿಗರು ವಿಶ್ವಕ್ಕೆ ವಿಶ್ವ ಮಾನವ ಸಂದೇಶ ನೀಡಿದವರು. ಇದು ನಮ್ಮ ಕನ್ನಡ ,ಕನರ್ಾಟಕ ಸಂಸ್ಕೃತಿಯ ಹೆಮ್ಮೆಯಾಗಿದೆ ಎಂದರು. ನಂತರ ಅವರು ಸಕರ್ಾರ ರೈತರಿಗೆ ನೀಡಿದ ಮಾತನ್ನು ಉಳಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಕರ್ಾರ ಇದ್ದಾಗ 8 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರು. ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ ಆಗಿತ್ತು. ಈಗಿನ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸಕರ್ಾರ ಸಹ ರೈತರ ಸಾಲ ಮನ್ನಾ ಮಾಡಿದೆ. ಅದು ಅನಷ್ಠಾನದಲ್ಲಿ ಬರುತ್ತಿದೆ. ಸಹಕಾರಿ ಸಂಘಗಳಲ್ಲಿನ 1 ಲಕ್ಷದವರೆಗಿನ ಸಾಲ ಮನ್ನಾ ಆಗುತ್ತಿದೆ.ಇದಕ್ಕೆ 10 ಸಾವಿರ ಕೋಟಿ ನೀಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್ನಲ್ಲಿನ ರೈತರ ಸಾಲ ಮನ್ನಾ ಮಾಡಿದಾಗ ನಾವು ರೈತರಿಗೆ 48 ಸಾವಿರ ಕೋಟಿ ರೂ. ನೀಡಿದಂತಾಗುತ್ತದೆ ಎಂದರು. 
ಪ್ರವಾಸೋದ್ಯಮ:
	ಹೊನ್ನಾವರದ ಕಾಸರಕೋಡಿನ ಇಕೋ-ಬೀಚ್ಗೆ ವಿಶ್ವ ದಜರ್ೆಯ ಮನ್ನಣೆ ನೀಡಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ . ಈಗಾಗಲೇ ಜಿಲ್ಲೆಯ ಪ್ರವಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಚಟುವಟಿಕೆಗಳನ್ನು ನಡೆಸಲಾಗಿದ್ದು ನೀಲಿ ಕಡಲು ಮನ್ನಣೆ ದೊರೆತಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಮೈಲಿಗಲ್ಲಾಗಲಿದೆ  ಎಂದು  ಸಚಿವ ಆರ್.ವಿ.ದೇಶಪಾಂಡೆ  ಹೇಳಿದರು.
	ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರವಾಸೋದ್ಯಮದಿಂದ ಸಣ್ಣ ಮತ್ತು ಗುಡಿ ಕೈಗಾರಿಕೆ ಅಭಿವೃದ್ಧಿ ಹೊಂದಿ ಉದ್ಯೋಗ ಸೃಷ್ಟಿಸಲು ಪೂರಕವಾಗಲಿದೆ ಎಂದರು.  
	  ದಾಂಡೇಲಿ ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ 2000 ಕೋಟಿ ರೂ. ಬಮಡವಾಳದೊಂದಿಗೆ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ  ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದರು. ರಾಜ್ಯಾ`್ಯಂತ ನ. 12 ರಿಂದ 18ರವರೆಗೆ ಕಂದಾಯ ಇಲಾಕೆಗಳಲ್ಲಿ ಹಳೇಯ ಕಡತ ವಿಲೇವಾರಿ ಸಪ್ತಾಹ ನಡೆಸಲು ನಿರ್ಧರಿಸಲಾಗಿದೆ ಎಂದರು.