ಗ್ರಾಮಾಂತರ ಪ್ರದೇಶದ ವ್ಯಕ್ತಿಗಳಿಂದಲೇ ಕನ್ನಡ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ : ಕಾಶೀನಾಥ ಮಹಾಸ್ವಾಮಿಗಳು
Kannada literature has grown to its current glory thanks to individuals from rural areas: Kashinath
ಗ್ರಾಮಾಂತರ ಪ್ರದೇಶದ ವ್ಯಕ್ತಿಗಳಿಂದಲೇ ಕನ್ನಡ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ : ಕಾಶೀನಾಥ ಮಹಾಸ್ವಾಮಿಗಳು
ದೇವರಹಿಪ್ಪರಗಿ 29: ಕನ್ನಡ ಸಾಹಿತ್ಯವೆಂಬುದು ಒಂದು ಶ್ರೀಮಂತ ಸಾಹಿತ್ಯವಾಗಿದ್ದು, ಅದಕ್ಕೆ ನಗರ, ಗ್ರಾಮೀಣವೆಂಬ ಭೇದಭಾವವಿಲ್ಲ. ಗ್ರಾಮಾಂತರ ಪ್ರದೇಶದ ವ್ಯಕ್ತಿಗಳಿಂದಲೇ ಕನ್ನಡ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಯಾಳವಾರದ ಪಂಚವಟಿ ಆಶ್ರಮದ ಕಾಶೀನಾಥ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಭೈರವಾಡಗಿ ಗ್ರಾಮದ ಗುರುದೇವಾಶ್ರಮದಲ್ಲಿ ಭೈರವಾಡಗಿಯ ಮುತ್ಸದ್ದಿ ಸಾಹಿತಿ ಸಂಗಮೇಶ ಕೆರೆಪ್ಪಗೋಳ ಅವರ ಹತ್ತನೇ ಕೃತಿಯಾದ ಯೋಗಿಗೆ ಕಾವ್ಯ ಕಲರವ ಕೃತಿಯನ್ನು ಲೋಕಾರೆ್ಣಗೊಳಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಗುರುದೇವಾಶ್ರಮದ ಗುರುಪ್ರಸಾದ ಶ್ರೀಗಳು ಮಾತನಾಡುತ್ತಾ ಸ್ವಲ್ಪವೂ ಕೂಡಾ ಹೊಲವಿಲ್ಲದೇ ಕೂಲಿ ಕೆಲಸವನ್ನು ಮಾಡುತ್ತಾ ಇಳಿ ವಯಸ್ಸಿನಲ್ಲಿಯೂ ಕೂಡಾ ಅತ್ಯಂತ ಕ್ರಿಯಾಶೀಲತೆಯಿಂದ ಸಾಹಿತ್ಯ ಕೃಷಿಯನ್ನು ಮಾಡುತ್ತಿರುವ ಸಂಗಮೇಶ ಕೆರೆಪ್ಪಗೋಳ ಅವರ ರೀತಿಯಲ್ಲಿ ಇಂದಿನ ಯುವಜನಾಂಗವು ಸಾಹಿತ್ಯ ರಂಗದಲ್ಲಿ ಮುಂದಡಿ ಇಡಬೇಕಾಗಿದೆ ಎಂದರು.
ಮಾತೋಶ್ರೀ ಜಾನಮ್ಮ ತಾಯಿಯವರು ದೇವರಹಿಪ್ಪರಗಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿಯನ್ನು ಮನದುಂಬಿ ಹಾರೈಸಿದರು.ಯೋಗಿಗೆ ಕಾವ್ಯ ಕಲರವ ಕೃತಿಯನ್ನು ಮುದ್ರಿಸಲು ಆರ್ಥಿಕವಾಗಿ ಸಹಾಯ ಹಸ್ತವನ್ನು ಒದಗಿಸಿದ ವಿಶ್ರಾಂತ ಶಿಕ್ಷಕರಾದ ನಿಂಗಣ್ಣ.ಎಮ್.ಜಗತಿ ಯರಗಲ್ಲ ಅವರನ್ನು ಅತ್ಯಂತ ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು.ಸಾಹಿತಿ ಸಂಗಮೇಶ ಕೆರೆಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಆಯ್.ಎಲ್. ಶಾಬಾದಿ ನಿರೂಪಿಸಿದರು. ಭಕ್ತಾದಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 