ಧಾರವಾಡ, 02: ಸುಮಾರು 2 ಸಾವಿರ ವರುಷಗಳ ಲಿಪಿಕ ಇತಿಹಾಸವನ್ನು ಹೊಂದಿರುವ ತನ್ನದೇ ಆದ ವಿಶಿಷ್ಟ ವ್ಯಾಕರಣ ಹಾಗೂ ಲಿಪಿಯನ್ನು ಹೊಂದಿರುವ ಕನ್ನಡವು ಸ್ವಂತ ಅಸ್ತ್ತಿತ್ವದ ವಿಶ್ವದ ಉತ್ಕೃಷ್ಟ ಭಾಷೆ ಎಂಬುದನ್ನು ನಾಡಿನ ಸಮಸ್ತ ಕನ್ನಡಿಗರು ಎಂದಿಗೂ ಮರೆಯಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕನರ್ಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಪ್ರತಿಪಾದಿಸಿದರು.
ಅವರು ಇಲ್ಲಿಯ ಡಯಟ್ ಆವರಣದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 63ನೆಯ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ವದ 7 ಸಾವಿರ ಭಾಷೆಗಳ ಪೈಕಿ ಕನ್ನಡ ಭಾಷೆಯ ಸೊಗಡು-ಶ್ರೀಮಂತಿಕೆ ಅಪ್ರತಿಮವಾದದ್ದು. ಪೂರ್ವದ ಹಳಗನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ನವ್ಯ, ನವ್ಯೋತ್ತರದ ಕನ್ನಡ ಪರಂಪರೆಯಲ್ಲಿ ಚಂಪೂ, ಗದ್ಯ, ರಗಳೆ, ವಚನ ಸಾಹಿತ್ಯ, ಕತೆ, ಕಾದಂಬರಿ, ಕಾವ್ಯ, ಮಕ್ಕಳ ಸಾಹಿತ್ಯ, ಆತ್ಮಕಥನ, ಪ್ರವಾಸಕಥನ ಸೇರಿದಂತೆ ಕನ್ನಡ ವಾಙ್ಮಯ ಲೋಕ ವ್ಯಾಪಕವಾಗಿ ಬಹು ಎತ್ತರಕ್ಕೆ ಬೆಳೆದಿದೆ. ವಿದೇಶಗಳಿಂದ ಬಂದಂತಹ ಹಲವಾರು ಪ್ರವಾಸಿಗರು ಕನ್ನಡ ನಾಡು-ನುಡಿಯ ಎಲ್ಲ ನೆಲೆಗಳ ಗತವೈಭವವನ್ನು ಹಾಡಿ ಹೊಗಳಿರುವುದು ಎಲ್ಲ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದರು.
ಜನಭಾಷೆ ಕನ್ನಡ : ಇತ್ತೀಚಿನ 3 ದಶಕಗಳಲ್ಲಿ ಕನರ್ಾಟಕದಲ್ಲಿಯ 6 ಕೋಟಿಗೂ ಅಧಿಕ ಕನ್ನಡಿಗರಲ್ಲಿ ಸುಮಾರು 3.60 ಕೋಟಿ ಕನ್ನಡಿಗರು ಮಾತ್ರ ಕನ್ನಡವನ್ನು ಸಂಪೂರ್ಣ ಬಳಕೆ ಮಾಡುತ್ತಿದ್ದು, ಉಳಿದಂತೆ ಇತರರೆಲ್ಲರೂ ಅನ್ಯ ಭಾಷೆಗಳನ್ನು ಬಳಕೆ ಮಾಡುತ್ತಿದ್ದಾರೆ. ಜನಭಾಷೆಯಾಗಿ ಕನ್ನಡವೇ ಎಲ್ಲೆಡೆ ಜನಮನದ ವಿದ್ಯಮಾನಗಳಲ್ಲಿ ವಿಜೃಂಭಿಸುವಂತಾದಾಗ ಸಮಗ್ರ ಕನರ್ಾಟಕಕ್ಕಾಗಿ ಕನ್ನಡ ಏಕೀಕರಣ ಚಳುವಳಿಯ ಎಲ್ಲ ಕನ್ನಡ ಹೋರಾಟಗಾರರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಭಾರತೀಯ ಇತರೇ ಭಾಷೆಗಳಿಗೆ ಹೋಲಿಸಿದರೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆಯ ಸಾಹಿತ್ಯದ ಹಿರಿಮೆ ಎದ್ದು ಕಾಣುತ್ತದೆ. ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಕನ್ನಡಿಗರೆಲ್ಲರೂ ನಾಡಿಗಾಗಿ, ನುಡಿಗಾಗಿ, ಮಾನವತೆಗಾಗಿ, ರಾಷ್ಟ್ರಕ್ಕಾಗಿ ಸಮರ್ಪಣಾ ಮನೋಭಾವದಿಂದ ಶ್ರಮಿಸಿ, ಭಾವನಾತ್ಮಕವಾಗಿ ನಿತ್ಯವೂ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದಾಗ ಮಾತ್ರ ನಮ್ಮ ನೆಲದಲ್ಲಿ ಕನ್ನಡದ ಅಸ್ಮಿತೆ ಉಳಿಯಲು ಸಾಧ್ಯವಾಗುತ್ತದೆ ಎಂದು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಇಲಾಖೆಯ ಜಂಟಿ ನಿದರ್ೆಶಕ ಡಾ.ಬಿ.ಕೆ.ಎಸ್.ವರ್ಧನ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಉಪನಿದರ್ೆಶಕ ಮೃತ್ಯುಂಜಯ ಕುಂದಗೋಳ, ಸಾರ್ವಜನಿಕ ಸಂಪರ್ಕ ಅಧಿಕಾರಿ ಉಮೇಶ ಬಮ್ಮಕ್ಕನವರ, ಹಿರಿಯ ಸಹಾಯಕ ನಿದರ್ೆಶಕ ಅಜರ್ುನ ಕಂಬೋಗಿ, ಕಿರಿಯ ಸಂಶೋಧನಾ ಅಧಿಕಾರಿ ಮಹಾದೇವಿ ಮಾಡಲಗೇರಿ, ಇ-ಆಡಳಿತ ಕಾರ್ಯಕ್ರಮ ಅಧಿಕಾರಿ ಶಾಂತಾ ಮೀಸಿ, ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪುಂಡಲೀಕ ಬಾರಕೇರ, ಸಹಾಯಕ ನಿದರ್ೆಶಕರು, ಅಧೀಕ್ಷಕರು ಹಾಗೂ ಇತರೇ ಸಿಬ್ಬಂದಿ ಇದ್ದರು.
ಫೋಟೋ : ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಉದ್ಘಾಟಿಸಿದರು. ಉಮೇಶ ಬಮ್ಮಕ್ಕನವರ, ಅಜರ್ುನ ಕಂಬೋಗಿ, ಡಾ.ಬಿ.ಕೆ.ಎಸ್.ವರ್ಧನ್ ಹಾಗೂ ಪುಂಡಲೀಕ ಬಾರಕೇರ ಚಿತ್ರದಲ್ಲಿದ್ದಾರೆ.