ಬೆಳಗಾವಿ: ಕನ್ನಡದ ಉತ್ಸವ ನಿರಂತರವಾಗಿ ನಡೆಯಬೇಕು: ಹಿರೇಮಗಳೂರು ಕಣ್ಣನ್

ಲೋಕದರ್ಶನ ವರದಿ

ಬೆಳಗಾವಿ 16 :  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ವತಿಯಿಂದ 2019ನೇ ಸಾಲಿನ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಪ್ರಸಾರಾಂಗ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ದಿ14ರಂದು ಮಧ್ಯಾಹ್ನ 3.00 ಘಂಟೆಗೆ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹ, ಬೆಳಗಾವಿಯಲ್ಲಿ ಏರ್ಪಡಿಸಲಾಗಿತ್ತು.

ಖ್ಯಾತ ಚಿಂತಕರು ಹಾಗೂ ಭಾಷಣಕಾರ ಹಿರೇಮಗಳೂರು ಕಣ್ಣನ್ ಇವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 2019ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಿಂದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ಹೂಲಿಶೇಖರ, ಡಾ. ಎಸ್. ಆರ್. ಗುಂಜಾಳ, ಹಾಗೂ ಶಿವಾಜಿ ಕಾಗಣೀಕರ ಅವರನ್ನು ಸನ್ಮಾನಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದಹಿರೇಮಗಳೂರು ಕಣ್ಣನ್ ಅವರು ಕನ್ನಡ ಭಾಷೆ ಭವ್ಯವಾದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೊಂದಿದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಯುವ ಜನಾಂಗದ ಮೇಲಿದೆ. ಕನ್ನಡದ ಉತ್ಸವ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಮಾತನಾಡಿ 'ಕನ್ನಡ ಭಾಷೆ ಅತ್ಯಂತ ಸಂಪತ್ಭರಿತ ಸಾಹಿತ್ಯ ಹಾಗೂ ವೈಚಾರಿಕತೆಯಿಂದ ಕೂಡಿದೆ. ನಮ್ಮ ಮಕ್ಕಳಿಗೆ ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ಕೊಡಬೇಕಾದ ಅವಶ್ಯಕತೆಯಿದೆ.' ಎಂದು ಹೇಳಿದರು.

ವಿತಾವಿ ಕುಲಸಚಿವರಾದ ಡಾ. ಎ. ಎಸ್. ದೇಶಪಾಂಡೆ ಸ್ವಾಗತಿಸಿದರು. ವಿತಾವಿ ಪರೀಕ್ಷಾ ಕುಲಸಚಿವರಾದ ಡಾ.  ಸತೀಶ ಅಣ್ಣೀಗೇರಿ ವಂದನಾರ್ಪಣೆ ಮಾಡಿದರು. ವಿತಾವಿ ಪುಸ್ತಕ ಪ್ರಕಟನಾ ಸಮಿತಿ ಅಧ್ಯಕ್ಷರಾದ ಡಾ. ಸಿ. ಕೆ. ಸುಬ್ಬರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿತಾವಿ ಸಹ ಪ್ರಾಧ್ಯಾಪಕಿ ಡಾ. ಶಾಂತಾ ಪೋರಾಪುರ ಪ್ರಸಾರಾಂಗ ಕಾರ್ಯಕ್ರಮಗಳ ಉದ್ಘಾಟನೆ ನಡೆಸಿಕೊಟ್ಟರು. ನಾಗಶ್ರೀ ತ್ಯಾಗರಾಜ, ವಿತಾವಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.