ಕನ್ನಡದ ಅಭಿಮಾನ ಪ್ರತಿಯೊಬ್ಬರಲ್ಲೂ ಬೆಳೆಯಲಿ : ಪ.ಪೂ ಘಂಟಿ

ಹಿಡಕಲ್ಲ:18 ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಅಭಿಮತ

ಮುಗಳಖೋಡ: ಕನ್ನಡವೇ ನಮ್ಮ ನಾಡು, ಕನ್ನಡವೇ ನಮ್ಮ ನುಡಿ ಕನ್ನಡವೇ ನಮ್ಮ ಉಸಿರು ಎಂದು ಕನ್ನಡ ಭಾಷಾಭಿಮಾನ ಪ್ರತಿಯೊಬ್ಬರಲ್ಲೂ ಬೆಳೆಸಿಕೊಳ್ಳಿ, ಇಂದಿನ ಜನರಲ್ಲಿ ಇಂಗ್ಲೀಷ ಎಂಬ ರೋಗ ಹೆಚ್ಚಾಗಿದೆ. ಈ ಭ್ರಮೆಯಿಂದ ಹೊರಬಂದು ಕನ್ನಡವನ್ನು ನಾವೇಲ್ಲರೂ ಉಳಿಸಿ ಬೆಳೆಸಬೇಕು. ಕನ್ನಡ ನಮ್ಮ ಉಸಿರಿನಲ್ಲಿ ಇರಬೇಕು, ಕೇವಲ ಆಚರಣೆ ಆಗಬಾರದು. ಮಾತೃ ಭಾಷೆಗೆ ಹೆಚ್ಚಿನ ಮಹತ್ವವನ್ನು ನೀಡಿ, ಪ್ರತಿ ವ್ಯಕ್ತಿಯಲ್ಲಿಯೂ ನಾಡುನುಡಿಯ ಬಗ್ಗೆ ಅಭಿಮಾನವಿರಬೇಕು, ನಮ್ಮ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ನೀಡಿಬೇಕು, ಇದರ ಮೂಲಕ ಸಮಾಜದಲ್ಲಿ ಎನ್ನನ್ನುಬೇಕಾದರೂ ಸಾಧಿಸಬಹುದಾಗಿದೆ ಎಂದು ಹಲವಾರು ನಿದರ್ಶಗಳನ್ನು ನೀಡುವುದರ ಮೂಲಕ ಮಾತೃಭಾಷೆಯನ್ನು ಗೌರವಿಸೋಣ ಎಂದು ಅಭಿನವ ಬುದ್ಧ ಶ್ರೀ ಪ್ರದೀಪ ಘಂಟಿ ಮಹಾರಾಜರು ಆಶಿರ್ವಚನ ನೀಡಿದರು.

        ಅವರು ಸಮೀಪದ ಹಿಡಕಲ್ಲ ಗ್ರಾಮದಲ್ಲಿ ಶುಕ್ರವಾರ ದಿ 16 ರಂದು ಸಾಯಂಕಾಲ 6 ಗಂಟೆಗೆ ಕನ್ನಡ ಸಾಹಿತ್ಯ ಚಿಂತನ ಬಳಗದ ವತಿಯಿಂದ ಆಯೋಜಿಸಿದ "ಕನ್ನಡೋತ್ಸವ" ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಇಂಗ್ಲೀಷಿನ ವ್ಯಾಮೋಹ ಬಿಟ್ಟು ವಿಶಾಲ ಮನೋಭಾವನೆಯಿಂದ ಎಲ್ಲರೂ ಕನ್ನಡವನ್ನು, ನಮ್ಮ ನಾಡು-ನುಡಿಯನ್ನು ಬೆಳೆಸಲೂ ಶ್ರಮಿಸಬೇಕೆಂದು ಹೇಳಿದರು.

    ನಂತರದಲ್ಲಿ ಅಥಿತಿ ಸ್ಥಾನವಹಿಸಿದ ಹಾರೂಗೇರಿ ಕಾಲೇಜಿನ ವಾಣಿಜ್ಯ ಪ್ರಾಧ್ಯಾಪಕರಾದ ಡಾ.ಸಿ.ಆರ್.ಗುಡಸಿ ಮಾತನಾಡಿ ಕನ್ನಡ ಪ್ರೀತಿಯಿಂದರಲಿ, ಪ್ರೇಮದಿಂದರಿಲಿ ಕೇವಲ ಡಂಭಾಚಾರಕ್ಕಾಗಿ ಬೇಡ, ಕನ್ನಡ ಅಭಿಮಾನ ಭಾಷೆಯಿಂದಾದರೆ ಸಾಲದೂ, ಅದು ಅನ್ನದ ಭಾಷೆಯಾಗಬೇಕು, ಇಂದು ಗ್ರಾಮೀಣ ಭಾಗದಲ್ಲಿ ಮಾತ್ರ ಹೆಚ್ಚಾಗಿ ಕನ್ನಡ ಉಳಿದುಕೊಂಡಿದೆ, ನವಂಬರ ಒಂದರ ಕನ್ನಡವಾಗದೇ ಅದು ಪ್ರತಿಯೊಬ್ಬರ ಉಸಿರಾಗಿ ಬೆಳೆಯಬೇಕು, ಹಾಗಾಗಿ ಇಂದು ನಾವೇಲ್ಲರೂ ಉದಾರ ಮನೋಭಾವನೆಯಿಂದ ನಮ್ಮ ನಾಡು-ನುಡು ಭಾಷೆಯನ್ನು ಬೆಳೆಸಲೂ ನಾವೇಲ್ಲರೂ ಕೈಜೋಡಿಸಬೇಕೆಂದು ಹೇಳಿದರು.

   ಕಾರ್ಯಕ್ರಮದಲ್ಲಿ ಶ್ರೀ ವಸಂತರಾವ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಎಸ್.ಬಿ.ಕ್ಯಾಸ್ತಿ, ಆರ್.ಎಸ್.ಬನಹಟ್ಟಿ, ಸಂಗನಬಸವ ಗದಗ, ವಿ.ಎಸ್.ಬನಹಟ್ಟಿ, ಬಿ.ಬಿ.ಬಳಿಗಾರ, ಸಿದ್ದೇಶ್ವರ ಕಾಲೇಜಿನ ಪ್ರಾಚಾರ್ಯ ಟಿ.ಎಸ್.ವಂಟಗೂಡಿ, ಬಿ.ಎಲ್ಘಂಟಿ, ಎಂ.ಪಿ.ಕಂಟಿಕಾರ, ಪಿಡಿಓ ಸಂಗಮೇಶ ನೇಮಗೌಡರ, ಹಾಗೂ ಕನ್ನಡ ಸಾಹಿತ್ಯ ಚಿಂತನ ಬಳಗದ ಅಧ್ಯಕ್ಷರು, ಸರ್ವ ಸದಸ್ಯರು, ಊರಿನ ನಾಗರಿಕರು ಪಾಲ್ಗೊಂಡಿದ್ದರು.