ಧಾರವಾಡ 23: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ಆರಂಭಿಸಿರುವ ಜಿಲ್ಲಾಡಳಿತವು ಸಮ್ಮೇಳನ ಜರುಗುವ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿರುವ ಜ್ಯುಬಿಲಿ ಸರ್ಕಲ್ನಿಂದ ಬೈಪಾಸ್ ರಸ್ತೆವರೆಗಿನ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಮುಕ್ತಗೊಳಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಅವರು ಇಂದು ಸದರಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಕಂದಾಯ, ಲೋಕೋಪಯೋಗಿ, ಅರಣ್ಯ, ಮಹಾನಗರ ಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.
ಸಮ್ಮೇಳನಕ್ಕೆ ಪೂರ್ವದಲ್ಲಿ ರಸ್ತೆಯ ಕೆಲಸ ಪೂರ್ಣಗೊಳಿಸಿ, ಜನರಿಗೆ ಸುಗಮವಾಗಿ ಸಂಚರಿಸುವಂತೆ ರಸ್ತೆ ಕಲ್ಪಿಸಬೇಕು. ರಸ್ತೆ ಬದಿಯಲ್ಲಿ ಬಿಟ್ಟಿರುವ ಮರದ ತುಂಡು, ಕೊಂಬೆಗಳನ್ನು ಇನ್ನೇರಡುಮೂರು ದಿನಗಳಲ್ಲಿ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ನಿಮರ್ಿಸುವಾಗ ಮದ್ಯದಲ್ಲಿ ಬಿಟ್ಟಿರುವ (ಗ್ಯಾಪ್) ಜಾಗಗಳನ್ನು ಪೂರ್ಣಗೊಳಿಸಿ, ಪಕ್ಕದ ರಸ್ತೆ ತಗ್ಗುಗಳನ್ನು ಮುಚ್ಚಬೇಕು. ರಸ್ತೆಯ ಮಧ್ಯ ಹಾಗೂ ಇಕ್ಕೆಲುಗಳಲ್ಲಿ, ಅಲ್ಲಲ್ಲಿ ಹಾಕಿರುವ ಮಣ್ಣು, ಕಡಿ ಮುಂತಾದವುಗಳನ್ನು ತೆರವುಗೊಳಿಸಬೇಕು. ಮರ ತೆರವುಗೊಳಿಸಿದ ನಂತರ ಉಳಿದಿರುವ ತಗ್ಗುಗಳನ್ನು ಸರಿಯಾಗಿ ಮುಚ್ಚಬೇಕು. ಒಟ್ಟಾರೆ ಎಲ್ಲ ಅಡೆತಡೆಗಳನ್ನು ನಿವಾರಿಸಿ ರಸ್ತೆಯನ್ನು ಸಮತಟ್ಟುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಆದೇಶಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಎನ್.ಎಂ. ಕುಲಕಣರ್ಿ ಅವರು ಮಾತನಾಡಿ, ಕಾಂಕ್ರೀಟ್ ರಸ್ತೆ ನಿಮರ್ಾಣ ಕಾಮಗಾರಿ ಒಂದು ಕಡೆಯಿಂದ ಸಮ್ಮೇಳನದ ಸ್ಥಳ ಹಾಗೂ ಬೈಪಾಸ್ ರಸ್ತೆಯವರೆಗೆ ಪೂರ್ಣಗೊಂಡಿದೆ. ಅದರ ಪಕ್ಕದ ರಸ್ತೆಯನ್ನು ಸಮತಟ್ಟುಗೊಳಿಸಿ ಸಾರ್ವಜನಿಕರಿಗೆ ಅಡೆತಡೆಯಿಲ್ಲದೆ ಸಂಚರಿಸಲು ಅನುವಾಗುವಂತೆ ಮಾಡುಲಾಗುವುದು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವಿ.ಬಿ. ಯಮಕನಮರಡಿ ಅವರು ಮಾತನಾಡಿ, ಡಿಸೆಂಬರ್ ಮದ್ಯದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪ ಅರಣ್ಯಸಂರಕ್ಷಣಾಧಿಕಾರಿ ಮಹೇಶಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ್ ಸೇರಿದಂತೆ ಕಂದಾಯ, ಅರಣ್ಯ, ಲೋಕೋಪಯೋಗಿ, ಮಹಾನಗರಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.