ರಾಮದುರ್ಗ 06: ಮಾರ್ಚ-7 ರಂದು ತಾಲೂಕಿನ ಕಟಕೋಳ ಗ್ರಾಮದಲ್ಲಿ ತಾಲೂಕಾ 7 ನೇ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನೆರವೇರಲಿದೆ ಎಂದು ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಹೇಳಿದರು.
ಕಟಕೋಳದ ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲಾ ಆವರಣದ ಸಾಹಿತಿ ಬಿ.ಸಿ ದೇಸಾಯಿ ಹಾಗೂ ಹುಲಕುಂದದ ಭೀಮಕವಿ ಮುಖ್ಯ ವೇದಿಕೆಗಳಲ್ಲಿ ಸಮ್ಮೇಳನದ ಗೋಷ್ಠಿ ಹಾಗೂ ಉದ್ಘಾಟನಾ ಸಮಾರಂಭಗಗಳು ನಡೆಯಲಿವೆ. ಸಮ್ಮೇಳನದ ಪ್ರಯುಕ್ತ ಮಾರ್ಚ-7 ರಂದು ಮುಂಜಾನೆ 8 ಗಂಟೆಗೆ ನಿವೃತ್ತ ಶಿಕ್ಷಕ ಕಲ್ಲಯ್ಯ ಬ. ಕೊಪ್ಪದಮಠ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಪರಿಷತ್ ಧ್ವಜಾರೋಹಣ, ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಜಟಗನ್ನವರ ನಾಡಧ್ವಜಾರೋಹಣ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಮೆರವಣಿಗೆಃ ಸ್ಥಳೀಯ ಕರವೀರಮ್ಮ ದೇವಸ್ಥಾನದ ಆವರಣದಿಂದ ಸಮ್ಮೇಳನ ನಡೆಯುವ ಮುಖ್ಯ ವೇದಿಕೆಯ ವರೆಗೆ ಸಮ್ಮೇಳನಾಧ್ಯಕ್ಷೆ ಡಾ. ಕಲ್ಯಾಣಮ್ಮ ಲಂಗೋಟಿ, ನಾಡತಾಯಿ ಭುವನೇಶ್ವರಿ ದೇವಿಯ ಆಳೆತ್ತರದ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಗುವುದು. ಭುವನೇಶ್ವರಿ ದೇವಿಗೆ ಕಟಕೋಳ ಗ್ರಾ.ಪಂ ಉಪಾಧ್ಯಕ್ಷ ಬಾಪುಸಾಹೇಬ ದೇಸಾಯಿ ಪೂಜೆ ಸಲ್ಲಿಸುವರು. ಗ್ರಾ.ಪಂ ಅಧ್ಯಕ್ಷೆ ಮಹಾದೇವಿ ಹಲಗಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭಃ ಕಟಕೋಳ ಎಂ.ಚಂದರಗಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕಟಕೋಳ ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮಿಗಳ ಸಾನಿಧ್ಯ. ವೇ.ಮೂ ರಾಮು ಅಜ್ಜನವರ ನೇತೃತ್ವ. ಸಮ್ಮೇಳನದ ಸವರ್ಾಧ್ಯಕ್ಷೆ ಡಾ. ಕಲ್ಯಾಣಮ್ಮ ಲಂಗೋಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಮಹಾದೇವಪ್ಪ ಯಾದವಾಡ ಉದ್ಘಾಟಿಸಲಿದ್ದಾರೆ. ನಿಕಟಪೂವಾ ಸಮ್ಮೇಳನಾಧ್ಯಕ್ಷ ಆರ್.ಬಿ. ಚಿಲುಮಿ, ಅತಿಥಿಗಳಾಗಿ ಧಾರವಾಡ ಆಕಾಶವಾಣಿ ಕೇಂದ್ರದ ಡಾ. ಬಸು ಬೇವಿನಗಿಡದ ಸೇರಿದಂತೆ ಇತರರು ಪಾಲ್ಗೊಳ್ಳಿದ್ದಾರೆ. ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಜಟಗನ್ನವರ ಸ್ವಾಗತಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿ ವ್ಯಕ್ತಪಡಿಸಲಿದ್ದಾರೆ.
ಮಧ್ಯಾಹ್ನ ವಿವಿಧ ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ-5-30 ಗಂಟೆಗೆ ಕಿಲ್ಲಾ ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯರ, ಕಟಕೋಳ ಚೌಕಿಮಠದ ನಾಗಭೂಷನ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಅಶೋಕ ಪಟ್ಟಣ ವಹಿಸಲಿದ್ದಾರೆ ಎಂದು ಪಾಂಡುರಂಗ ಜಟಗನ್ನವರ ತಿಳಿಸಿದರು.
ಕಸಾಪ ತಾಲೂಕಾ ಘಟಕದ ಕಾರ್ಯದಶರ್ಿ ಐ. ಬಿ. ಬುಡ್ಡಾಗೋಳ, ಕೋಶಾಧ್ಯಕ್ಷ ಚನ್ನಪ್ಪ ಮಾದರ ಪ್ರೊ. ಎಸ್.ಎಂ ಸಕ್ರಿ, ಪ್ರೊ. ಪಿ. ಬಿ. ತೆಗ್ಗಿಹಳ್ಳಿ ಸೇರಿದಂತೆ ಇತರರಿದ್ದರು.