ಲೋಕದರ್ಶನ ವರದಿ
ಯರಗಟ್ಟಿ 26: ಸಮೀಪದ ಯರಝರ್ವಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮೇ. 30 ಹಾಗೂ 31ರಂದು ಸವದತ್ತಿ ತಾಲೂಕಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಮೇ. 30ರಂದು ಮುಂಜಾನೆ 9ಕ್ಕೆ ನಿವೃತ್ತ ಮುಖ್ಯೋಪಾದ್ಯ ರಾಮಲಿಂಗಪ್ಪ ಹೂಗಾರ ಅವರಿಂದ ರಾಷ್ಟ್ರ ಧ್ವಜಾರೋಹನ ನೆರವೇರುವುದು, ಜಿಲ್ಲಾ ಕ.ಸಾ.ಪಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ನಾಡ ಧ್ವಜಾರೋಹಣ ನೆರವೇರುಸುವರು, ಸವದತ್ತಿ ತಾಲೂಕಾ ಕ.ಸಾ.ಪಾ. ಅಧ್ಯಕ್ಷ ಸಿ.ಬಿ.ದೊಡಗೌಡರ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.
ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಶ್ರೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು, ಶಾಸಕ ಆನಂದ ಮಾಮನಿ ಕಾರ್ಯಕ್ರಮ ಉದ್ಘಾಟಿಸುವರು, ಡಾ.ಆ.ನೇ.ಉಪಾಧ್ಯೆ ವಿಸ್ತರಣಾ ಕೇಂದ್ರ ಬೆಳಗಾವಿ, ಕನ್ನಡ ವಿಶ್ವ ವಿದ್ಯಾಲಯ ಹಂಪಿ ಮುಖ್ಯಸ್ಥ ಎಸ್.ಎಸ್.ಅಂಗಡಿ ಸಮ್ಮೇಳನಾದ್ಯಕ್ಷತೆ ವಹಿಸುವರು, ಜಿ.ಪಂ.ಸದಸ್ಯೆ ವಿದ್ಯಾರಾಣಿ ಸೊನ್ನದ ಪುಸ್ತಕ ಬಿಡುಗಡೆಗೊಳಿಸುವರು, ಗ್ರಾ.ಪಂ.ಅಧ್ಯಕ್ಷೆ ಶಾಂತವ್ವ ಜಕಬಾಳ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಯ.ರು.ಪಾಟೀಲ, ತಾ.ಪಂ.ಅಧ್ಯಕ್ಷ ವಿನಯಕುಮಾರ ದೇಸಾಯಿ, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ತಾ.ಪಂ.ಸದಸ್ಯ ಬಸವರಾಜ ಮುತ್ತೇನ್ನವರ, ಪ್ರಕಾಶ ದೇಮಪ್ಪಲಿಂಗರಡ್ಡಿ ಮುಂತಾದವರು ಭಾಗವಹಿಸುವರು,
ಮೇ. 31ರಂದು ಕವಿ ಗೋಷ್ಠಿ ನಡೆಯುವುದು ಈ ಕಾರ್ಯಕ್ರಮದಲ್ಲಿ ಕವಿ ನಿಂಗಣ್ಣ ಕುಂಟಿ ಅದ್ಯಕ್ಷತೆ ವಹಿಸಿದರು, ಸಾಹಿತಿ ಶಿವಪ್ರಸಾದ ಹುಲ್ಲೆಪ್ಪನವರಮಠ ಆಶಯ ನುಡಿ ನುಡಿಯವರು. ತಾಲೂಕಿನ ವಿವಿಧ ಕವಿಗಳು ಭಾಗವಹಿಸುವರು ಎಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ ಹೇಳಿದರು. ಈ ಸಂಧರ್ಭದಲ್ಲಿ ಯರಗಟ್ಟಿ ತಾಲೂಕಾ ಕಸಾಪಾ ಅದ್ಯಕ್ಷ ರಾಜೇಂದ್ರ ವಾಲಿ, ಸವದತ್ತಿ ತಾಲೂಕಾ ಕಸಾಪಾ ಅಧ್ಯಕ್ಷ ಸಿ.ಬಿ.ದೊಡಗೌಡರ, ರಾಮಲಿಂಗಪ್ಪ ಹೂಗಾರ, ಮಲ್ಲಿಕಾರ್ಜುನ್ ಇಂಚಲ, ಜಿ.ವೈ.ಕರಮಲ್ಲಪ್ಪನವರ, ಬಾಳೇಶ ಚಿನಗುಡಿ, ಬಿ.ಎನ್.ಹೊಸೂರ, ತಮ್ಮನ್ನ ಕಾಮನ್ನವರ, ಮೋಹನ ಹಾದಿಮನಿ, ಯಲ್ಲಪ್ಪಗೌಡ ಪಾಟೀಲ, ಮಂಜುನಾಥ ತಡಸಲೂರ, ಶಿವಾನಂದ ಕರ್ಜಗಿಮಠ, ಈರಣ್ಣ ಚಳಕೊಪ್ಪ, ಡಿ.ಎಸ್.ಕೊಡಳ್ಳಿ, ಎಸ್.ಎಫ್.ಮಾಳಗಿ, ಡಾ.ಎ.ಎಮ್.ಶಂಕರಲಿಂಗಪ್ಪ ಮುಂತಾದವರಿದ್ದರು.