ಹೆಣ್ಣು ಮಕ್ಕಳ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮ

Kannada Sahitya Parishad charity program in girls' school

ಹೆಣ್ಣು ಮಕ್ಕಳ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮ  

ಬ್ಯಾಡಗಿ  15: ನಾಗರಿಕತೆ ಬೆಳೆದಂತೆ ವೈಚಾರಿಕತೆಯು ಬೆಳೆದು ಬಂದಿದೆ. ವೈಚಾರಿಕ ಕ್ರಾಂತಿಗೆ ಬಸವಣ್ಣನವರ ಬಹು ದೊಡ್ಡ ಕೊಡಿಗೆ ನೀಡಿದ್ದಾರೆ. ಅಂತರಂಗ ಮತ್ತು ಬಹಿರಂಗ ಶುದ್ಧಿ ಮಾಡಿಕೊಂಡು ಸಪ್ತಶೀಲಗಳನ್ನು ಮೈಗೂಡಿಸಿಕೊಳ್ಳುವುದೇ ವೈಚಾರಿಕ ಕ್ರಾಂತಿಯ ಫಲವಾಗಿದೆ ಎಂದು ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಹೇಳಿದರು. ಪಟ್ಟಣದ ಎಸ್‌.ಎಸ್‌.ಪಿ.ಎನ್ ಹೆಣ್ಣು ಮಕ್ಕಳ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ಯಾಡಗಿ  ಆಶ್ರಯದಲ್ಲಿ  ಲಿಂ.ಶ್ರೀ ಮಾಗನೂರು ಬಸಪ್ಪ ಮತ್ತು ಸರ್ವಮಂಗಳಯ್ಯ ಹಾಗೂ ಶಿವನಾಗ​‍​‍್.ಕೊಟ್ರ​‍್ಪ .ಮೇಲ್ಮುರಿ ಇವರ  ಸ್ಮರಣಾರ್ಥ ದತ್ತಿ ಉಪನಾಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗಿಡಕ್ಕೆ ನೀರು ಉಣಿಸುವ  ಮೂಲಕ ಉದ್ಘಾಟಿಸಿ ಮಾತನಾಡಿದರು ಈ ವೇಳೆ ಶ್ರೀ ಮಾಗನೂರ ಬಸಪ್ಪನವರ ಜೀವನ ಸಾಧನೆ.ವಚನಕಾರರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಹಾಗೂ ವಚನ ಗಾಯನ ಬಗ್ಗೆ ಎಂ. ಬಿ. ಸಂಗಮೇಶ ಗೌಡ್ರು ದಾವಣಗೆರೆ ಇವರು ಉಪನ್ಯಾಸ ನೀಡಿದರು.ಜಿಲ್ಲಾ ಕ ಸಾ ಪ ಅಧ್ಯಕ್ಷರಾದ ಲಿಂಗಯ್ಯ ಹೀರೆಮಠ ಮಾತನಾಡಿ ಭಾಷಾಭಿಮಾನ ಮೂಲಕ ಕುಟುಂಬದ ಹಿರಿಯರ ಹೆಸರಿನಲ್ಲಿ ಠೇವಣಿ ಇಟ್ಟರೆ ಕನ್ನಡ ಸಾಹಿತ್ಯ ಪರಿಷತನಿಂದ ಪ್ರತಿ ವರ್ಷ ದತ್ತಿ ಉಪನ್ಯಾಸ ಆಯೋಜಿಸಲಾಗುವುದು.ಕಸಾಪ ನಾಡು ನುಡಿ ಜಲದ ಸಂರಕ್ಷಣೆ.ಕಲೆ.ಸಾಹಿತ್ಯ.ಸಂಗಿತ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಿ ನಮ್ಮ ಮಣ್ಣಿನ ಸೊಗಡನ್ನು ಶ್ರೀಮಂತ ಗೊಳಿಸುತ್ತಿದೆ ಎಂದರು.ಈ ವೇಳೆ ಶಿವನಾಗಪ್ಪ ಕೊಟ್ರ​‍್ಪ ಮೇಲ್ಮುರಿ ಇವರ ಸ್ಮರಣಾರ್ಥ ವಾಗಿ 12 ನೇ ಶತಮಾನದ ಬಸವಾದಿ ಶರಣರ ಕುರಿತು ಮಕ್ಕಳಿಗೆ ಪ್ರಭಂದ ಸ್ಪರ್ಧೆ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಮುರಿಗೆಪ್ಪ ಶೆಟ್ಟರ.ಬಸವರಾಜ ಶಿವನಾಗಪ್ಪ ಮೇಲ್ಮುರಿ.ಉಪ ಪ್ರಾಚಾರ್ಯರಾದ ಎಸ್‌.ಸಿ.ಎಲಿ.ವಿಶ್ರಾಂತ ಉಪನಿರ್ದೇಶಕರು ಪ್ರಕಾಶ ಮನ್ನಂಗಿ.ಕಸಾಪ ಸದಸ್ಯರು ಗಂಗಮ್ಮ ಪಾಟೀಲ.ಬಿ.ಎಂ.ಜಗಾಪುರ.ಗೀರಿಶ ಇಂಡಿಮಠ.ಎಸ್‌.ಬಿ.ಇಮ್ಮಡಿ.ರಾಜಶೇಖರ ಹೊಸಳ್ಳಿ.ವಿರೇಂದ್ರ ಶೆಟ್ಟರ.ಬಿ.ಸುಭಾಷ.ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.