ಸಕರ್ಾರಿ ಕಚೇರಿಯಲ್ಲಿ ಕನ್ನಡ ಭಾಷೆ ಬಳಕೆ,ಸಂವಹನಕ್ಕೆ ಆದ್ಯತೆ ನೀಡಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ


ಲೋಕದರ್ಶನ ವರದಿ

ಬಳ್ಳಾರಿ23: ಸಕರ್ಾರಿ, ಪಾಲಿಕೆ ಹಾಗೂ ಇತರೆ ಸಂಘ-ಸಂಸ್ಥೆಗಳಲ್ಲಿ   ಕನ್ನಡ ಭಾಷೆಯಲ್ಲಿ ಮೊದಲ ಆದ್ಯತೆ ನೀಡಿ, ಕನ್ನಡ ಭಾಷೆಯಲ್ಲಿ ಸಂವಹನ ನಡೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಹೇಳಿದರು.  

ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಅಂಗಡಿ ಮಾಲೀಕರು ತಮ್ಮ ಅಂಗಡಿಯ ನಾಮ ಫಲಕಗಳನ್ನು ಕನ್ನಡ ಭಾಷೆ ಇರುವಂತೆ ನೋಡಿಕೊಳ್ಳಬೇಕು. ತಪ್ಪಿದಲ್ಲಿ 10 ಸಾವಿರ ರೂ.ಗಳು ದಂಡ ಹಾಕಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ, ಶಾಲಾ ಬಸ್ಗಳ ಮೇಲೆ ಹಾಗೂ ಶಾಲಾ-ಕಾಲೇಜಿನ ಮಂಗಟ್ಟುಗಳ ಭಾಗದಲ್ಲಿ ಕನ್ನಡ ಭಾಷೆಯನ್ನು ದೊಡ್ಡ ಅಕ್ಷರದಲ್ಲಿ ಇರಬೇಕು. ನಗರದ ರಸ್ತೆ, ವೃತ್ತ, ಉದ್ಯಾನವನಕ್ಕೆ ಸಮಾಜ ಸೇವೆ ಮಾಡಿದ, ಸಾಹಿತಿಗಳ ಹೆಸರನ್ನು ಇಡುವಂತೆ ಸೂಚಿಸಿದರು.  

ಬೀದಿ ವ್ಯಾಪಾರಿಗಳ ಗುರುತಿನ ಚೀಟಿಯಲ್ಲಿ ಸಹ ಕನ್ನಡದ ಅಕ್ಷರ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ ಅವರು  ಪ್ರಕಟಣೆ, ಜಾಹೀರಾತುಗಳನ್ನು ಕನ್ನಡ ಭಾಷೆಯಲ್ಲಿ ಇರಬೇಕು. ಗುತ್ತಿಗೆದಾರರು  ನಾಮಫಲಕದಲ್ಲಿ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಬರೆದಲ್ಲಿ ಗುತ್ತಿಗೆದಾರರನ್ನು ರದ್ದು ಮಾಡುವ ಹಕ್ಕು ಇದೆ ಎಂದು ಹೇಳಿದ ಅವರು ಇನ್ನೂ 30 ದಿನ ದೊಳಗಾಗಿ ಎಲ್ಲಾ ಅಂಗಡಿ ಮಂಗಟ್ಟುಗಳ ಫಲಕಗಳು ಸಕರ್ಾರದ ಆದೇಶದಂತೆ ನೋಡಿಕೊಳ್ಳಬೇಕು ಎಂದರು. 

  ರಾಜ್ಯದ ಘನತೆ, ಗೌರವ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಮಾತನಾಡಿ, ಬೆಳಸಬೇಕು ಎಂದರು. 

 ಮಹಾನಗರ ಪಾಲಿಕೆಯ ಆಯುಕ್ತ ಹೆಚ್.ನಾರಾಯಣಪ್ಪ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗೌರವ ಕಾರ್ಯದಶರ್ಿ, ಸದಸ್ಯ ಹಾಗೂ ಪಾಲಿಕೆಯ ಸದಸ್ಯರು, ಮಾಜಿ ಮೇಯರ್ ಹಾಗೂ ಅಧಿಕಾರಿಗಳು ಇದ್ದರು.