ಕನ್ನಡವೇ ಉಸಿರು ಕನ್ನಡವೇ ಹೆಸರು: ಶಿವಾನಂದ ಮ್ಯಾಗೇರಿ
ಶಿಗ್ಗಾವಿ 10: ಕನ್ನಡ ಸಾಹಿತ್ಯ,ನಮ್ಮ ಬದುಕಿನ ಉಸಿರಿದು ಪ್ರತಿನಿತ್ಯ ಬದುಕಿಗೆ ಹೆಸರದು ದಿನನಿತ್ಯ ಎನ್ನುವಂತೆ ಕನ್ನಡವೇ ಉಸಿರು ಕನ್ನಡವೇ ಹೆಸರು.ಕನ್ನಡ ನಾಡಿನ ನೆಲದಲ್ಲಿದೆ ಭಲ, ಬಲದಲ್ಲಿದೆ ಹೋರಾಟದ ಛಲ, ಕನ್ನಡ ನುಡಿಯಲ್ಲಿದೆ ಅನ್ನದ ಯಡಿ, ಪ್ರತಿಯೊಬ್ಬರ ಅಡಿ, ಕನ್ನಡವೇ ನುಡಿ, ಕನ್ನಡ ನಾಡಿನ ನೀರು ಕುಡಿ, ಕನ್ನಡ ನಾಡಿನ ರಕ್ಷಣೆಗಾಗಿ ಸೊಡ್ಡು ಹೊಡಿ ಎಂದು ಕನ್ನಡ ಭಾಷೆಯಲ್ಲಿ ಸಾಹಿತ್ಯ ಬೆರೆಸಿ ಮಾತು ಮಾತಿನಲ್ಲಿಯೇ ವಿಶೇಷತೆ ವಿಭಿನ್ನತೆ ವಿಶಿಷ್ಟತೆಯ ಕಲೆ ಸಾಹಿತ್ಯ ಸಂಸ್ಕೃತಿಯೊಂದಿಗೆ ವಿಶ್ಲೇಷಿಸುವ ವಿಮರ್ಷಿಸುವ ಬರಹಗಾರರು ಸಾಹಿತಿಗಳು ವಿಮರ್ಶಕರು ಸಾಧಕರು ಕಲಾವಿದರು ಸಂತರು ಶರಣರು ಹೋರಾಟಗಾರರು ಹುಟ್ಟಿ ಬೆಳೆದ ನಾಡು. ಒಮ್ಮೆ ಬಂದು ನೋಡು ಎನ್ನುವಂತಿದೆ.
ಶಿಗ್ಗಾವಿ ಎಂಬ ಊರು.ಸಾಹಿತ್ಯ ನೂರಾರು. ಎಂಬ ಸಾಹಿತ್ಯ ನಾಡಿನಲ್ಲಿ ಕನ್ನಡ ಸಾಹಿತ್ಯ ಸಾಧಕರು ಸಂತ ಶರೀಫರು ಭಕ್ತ ಕನಕದಾಸರು ಕನ್ನಡ ಭಾಷೆಯ ತಾಯಿ ಬೇರು ನೋಡ ಬನ್ನಿ ಭುವನೇಶ್ವರಿಯ ತೇರು. ಎನ್ನುವಂತೆ.. ಶಿಗ್ಗಾವಿ ಅರಿಶಿಣ ಕುಂಕುಮ ಕನ್ನಡ ಬಾವುಟದಿಂದ ರಾರಾಜಿಸುತ್ತದೆ. ಕಪ್ಪು ಕೆಂಪು ಬೂದು ತುಂಬಿದ ಮಣ್ಣು,ಬೆಳಿತೈತಿ ಭತ್ತ ಜೋಳ ಗೋದಿ ಕಬ್ಬು ಗಡ್ಡೆ ಗೆಣಸು ಹಾಲು ಹಣ್ಣು. ಹೊಟ್ಟೆ ತುಂಬಾ ಉಣ್ಣು, ಎಂದು ಹಸಿದವರಿಗೆ ಅನ್ನನೀಡುವ ಶಿಗ್ಗಾವಿ.
ಅರಣ್ಯ ಗುಡ್ಡ ಗದ್ದೆ ಕಣಿವೆ ತಗ್ಗುದಿನ್ನಿ ಹೊಂದಿದ ಪ್ರದೇಶ ಶಿಗ್ಗಾವಿ ಶ್ರೀಗಂಧ ನಂದಿ ತೇಗು ಬೀಟಿ ಸೇರಿದಂತೆ ಹತ್ತು ಹಲವಾರು ಮೂರುತಿ ಹಾಗೂ ಓಷಧಿ ತಯಾರಾಗು ವ ಗಿಡಮರಗಳು ಬೆಳೆಯುವ ನಾಡಿದು..ಗೋಡಂಬಿ ಮಾವು ಬಾಳಿ ಚಿಕ್ಕು ಲಿಂಬೆ ವೀಳ್ಯದೆಲೆ ಅಡಿಕೆ ಸೇರಿ ಫಲ ಪುಷ್ಪ ಸುಗಂಧ ಸೂಸುವ ಹಸಿದವರನ್ನು ಕೈಬೀಸಿ ಕರೆಯುವ ನಾಡು ನಮ್ಮ ಊರಿದು.ಭಾವೈಕ್ಯತೆ ಮೆರೆದು ಧರ್ಮ ಮಾರ್ಗ ಹಿಡಿದು ಬದುಕುವ ದಾರಿ ತೋರಿಸಿ ಜಗತ್ತಿಗೆ ತತ್ವಪದ ದಿಂದ ಪವಾಡ ಮಾಡಿ ಹಾಡಿ ಶಿಗ್ಗಾವಿ ಪರಿಚಯಿಸಿದ ಸಂತ ಶಿಶುನಾಳ ಶರೀಫರು ನಡೆದಾಡಿ ನುಡಿ ಹಾಡಿ ಹೊಗಳಿದ ಊರು ಹಾಗೂ ಭಕ್ತಿಯಲ್ಲಿ ಶಕ್ತಿ ಇದೆ ಶಕ್ತಿಯಲ್ಲಿ ಮುಕ್ತಿ ಇದೆ ಎಂದು ಬದುಕಿ ಸಾಧಿಸಿ ಲೋಕದ ಜನರಿಗೆ ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆ ಏನಾದರೂ ನೀವು ಬಲ್ಲಿರಾ ಎಂಬ ಸಾಹಿತ್ಯ ವಚನೊಂದಿಗೆ ಬದುಕಿನಲ್ಲಿ ಬೆಳಕಿದೆ ಎಂದು ವಚನದ ಮುಖೇನ ಬದುಕಿನ ದಾರಿ ತೋರಿಸಿದ ಭಕ್ತ ಕನಕದಾಸರ ನೆಲೆ ನಾಡಿನಲ್ಲಿ ಹುಟ್ಟಿ ಬೆಳೆದು ನಾಡಿಗೆ ಹೆಸರು ತಂದ ಬರಹಗಾರ್ತಿ ತಾಯಿ ಸುಧಾ ಮೂರ್ತಿ ಸಮಾಜಕ್ಕೆ ಸ್ಪೂರ್ತಿ ಎನ್ನುವಂತಹ ಅಮ್ಮನವರು. ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆ ಮಾಡಿದ ಅರಟಾಳ ರುದ್ರಗೌಡರು.ಬರಹಗಾರರಾದ ಸಮಾಜ ಜ್ಞಾನಿ ವಿಜ್ಞಾನಿ ತತ್ವಜ್ಞಾನಿ ಯಾದ ಹಿರೇಮಲ್ಲೂರು ಈಶ್ವರ ರಂತಹ ಮೇಧಾವಿಗಳು ಹುಟ್ಟಿ ಬೆಳೆದ ನೆಲವಿದು . ಎಸ್ ನಿಜಲಿಂಗಪ್ಪ ಹಾಗೂ ಬಸವರಾಜ ಬೊಮ್ಮಾಯಿ ಎಂಬ ಮುತ್ಸದ್ದಿ ಮುಖ್ಯಮಂತ್ರಿಗಳನ್ನು ಕೊಟ್ಟ ನೆಲವಿದು.
ಅನೇಕ ಸಾಹಿತಿಗಳು ಸಾಧಕರು ಕಲಾವಿದರು ಸಂಗೀತಗಾರರು ಗಾಯಕರು ಲೇಖಕರು ಶಿಲ್ಪಿಗಳು ಹೋರಾಟಗಾರರು ಹುಟ್ಟಿ ಬೆಳೆದು ರಾಜ್ಯ ರಾಷ್ಟ್ರ ಅಂತರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದ ಸಾಧಕರ ಊರಿದು.ಬೆಣ್ಣೆ ನದಿ ಉಗಮ ಸ್ಥಾನವಿದು ವರದಾ ನೀರು ಕೆರೆ ತುಂಬಿದ ಬೀಡಿದು, ಏಕೈಕ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ತಾಣವಿದು. ಬಂಕಾಪುರದಲ್ಲಿ ನವಿಲು ಧಾಮ ಪುರಾತನ ನಗರೇಶ್ವರ ದೇವಾಲಯ, ಬನ್ನಿಕೊಪ್ಪದಲ್ಲಿ ಪಾಂಡವರ ದೇವಾಲಯ, ಅರಟಾಳದಲ್ಲಿ ಸುಬ್ರಹ್ಮಣ್ಯ ದೇವಾಲಯ, ಸೇರಿ ಹತ್ತಾರು ಧಾರ್ಮಿಕ ಜಾಗೃತಿಯ ದೇವಾಲಯ ತಾಣ ಹೊಂದಿದ ನಾಡಿದು ಶಿಗ್ಗಾವಿ.ಸಮತೋಲನದ ಪರಿಸರವುಳ್ಳ ಪ್ರಕೃತಿಯ ಸೊಬಗು ಗಾಳಿ ಮಳೆ ಬಿಸಲು ಸೇರಿ ಆರೋಗ್ಯಕರ ಪರಿಸರ ನೀಡುವ ಆನಂದ ಹಾಡುವ ಸಿಕ್ಕಾವಿ ಊರಿದು, ಇಂತಹ ಸಾಹಿತ್ಯ ಸಾಧನೆ ಆರಾಧನೆ ಸೌಹಾರ್ದತೆ ಭಾವೈಕ್ಯತೆ ಉಳ್ಳ ನಾಡು ಶಿಗ್ಗಾವಿಯಲ್ಲಿ ಇಂದು ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿರುವುದು ನಮಗೆಲ್ಲ ಬಹಳ ಸಂತೋಷ ತಂದಿದೆ ಬನ್ನಿ ಓಡೋಣ ಬನ್ನಿ ನೋಡೋಣ ಬನ್ನಿ ಹಾಡೋಣಜೈ ಕನ್ನಡಾಂಬೆ ಜೈ ಭುವನೇಶ್ವರಿಶಿವಾನಂದ ಚನ್ನವೀರ್ಪ ಮ್ಯಾಗೇರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಬೆಂಡಿಗೇರಿ, ಶಿಗ್ಗಾವಿ