ಕಂಚಕರವಾಡಿ: ನೀರಿನ ಶುದ್ಧೀಕರಣ ಘಟಕ ಉದ್ಘಾಟನೆ

Kanchakarwadi: Inauguration of Water Purification Plant

ಕಂಚಕರವಾಡಿ: ನೀರಿನ ಶುದ್ಧೀಕರಣ ಘಟಕ ಉದ್ಘಾಟನೆ  

ರಾಯಬಾಗ 19: ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಂಚಕರವಾಡಿ, ದಿಗ್ಗೆವಾಡಿ, ಭಿರಡಿ ಮತ್ತು ಜಲಾಲಪುರ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಡಿ.ಎಮ್‌.ಐಹೊಳೆಯವರು ಹೇಳಿದರು.  ಬುಧವಾರ ತಾಲೂಕಿನ ಕಂಚಕರವಾಡಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮಂಜೂರಾದ 2 ಕೋಟಿ 78 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ನೀರಿನ ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಬಹಳ ವರ್ಷಗಳ ಹಿಂದೆ ನಿರ್ಮಿಸಿದ್ದ ನೀರಿನ ಶುದ್ಧೀಕರಣ ಘಟಕ ಮತ್ತು ಪೈಪ್ ಲೈನ್ ಗಳು ಹಾಳಾಗಿದ್ದರಿಂದ ಇಲ್ಲಿಂದ್ದ ಈ ನಾಲ್ಕು ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡಲು ಸಾಧ್ಯವಾಗದೇ ಇರುವುದರಿಂದ ಈ ಭಾಗದ ಜನರ ಒತ್ತಾಯದ ಮೇರೆಗೆ ಮರು ರಿಪೇರಿ ಕಾಮಗಾರಿ ಮೂಲಕ ಹೊಸ 1.50 ಲಕ್ಷ ಸಾಮರ್ಥ್ಯದ ಮೇಲ್ಪಟ್ಟ ಜಲಸಂಗ್ರಹ, ಶುದ್ಧ ನೀರಿನ ಘಟಕ, ಹೊಸ ಪಂಪ್ ಸೆಟ್ ಸೇರಿದಂತೆ ರಿಪೇರಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.  ಎಇಇ ಸುಭಾಷ ಭಜಂತ್ರಿ, ಜೆ.ಇ ಲೋಹಿತ ಕಾಂಬಳೆ, ಸದಾಶಿವ ಘೋರೆ​‍್ಡ, ಕಲ್ಲಪ್ಪ ಸನದಿ, ಅಣ್ಣಾಸಾಬ ಬೆಳ್ಳೆಸಿ, ಅಜೀತ ಕಳ್ಳಿ, ಬಸವಲಿಂಗ ನಾಯಿಕ ಸೇರಿ ಅನೇಕರು ಇದ್ದರು.