ಲೋಕದರ್ಶನ ವರದಿ
ಮುಧೋಳ 03: ದಾಸಶ್ರೇಷ್ಠ ಕನಕದಾಸರು ತಮ್ಮ ಮಾನವೀಯ ಮೌಲ್ಯಗಳಿಂದ ಇಡೀ ಮನಕುಲಕ್ಕೇ ದಾರಿದೀಪವಾಗಿದ್ದಾರೆ. ಅವರ ತತ್ವ ಪದಗಳು, ದಾಸವಾಣಿಗಳು, ಕೀರ್ತನೆಗಳು ಇಂದಿಗೂ ಸಾರ್ವಕಾಲಿಕವಾದವುಗಳು ಎಂದು ಸಮಾಜ ಸೇವಕ ಸತೀಶ ಬಂಡಿವಡ್ಡರ ಹೇಳಿದರು.
ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಸಾರ್ವಜನಿಕರು ಹಾಗೂ ಕನಕದಾಸ ಅಭಿಮಾನಿಗಳಿಂದ ಏರ್ಪಡಿಸಿದ್ದ ಭಕ್ತಶ್ರೇಷ್ಠ ಕನಕ ದಾಸರ 531ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ಸಾಕ್ಷಾತ್ ದೇವರನ್ನು ಕಂಡ ಮಹಾನ ಸಂತರಾಗಿ ಜೀವನದುದ್ದಕ್ಕೂ ಮನುಕುಲದ ಉದ್ದಾರಕ್ಕಾಗಿ ಬದುಕಿ ಇಂದಿಗೂ ಮಾರ್ಗದರ್ಶಕರಾಗಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಸಮಾಜ ನಿಮರ್ಿಸಬೇಕು ಎಂದು ಕರೆ ನೀಡಿದರು. ನ್ಯಾಯವಾದಿ ಲಕ್ಕಪ್ಪ ಸುನಗದ, ಲಕ್ಷ್ಮಣ ಕಪರಟ್ಟಿ, ಮಹಾದೇವ ಇಟಕ್ಕನ್ನವರ, ಮಲ್ಲಪ್ಪ ಬಿಸನಕೊಪ್ಪ, ಮಲ್ಲಪ್ಪ ಮಂಟೂರ, ಈರಪ್ಪ ಪಕಾಲಿ, ಶ್ರೀಶೈಲ ಕರೆಪ್ಪಗೋಳ, ನಿಂಗಪ್ಪ ಕಂಬೋಗಿ, ಹಾಜಿಸಾಬ ಸೊನ್ನದ,ಮುಂತಾದರು ಇದ್ದರು.
ಕನಕದಾಸರ ಕುರಿತು ಮಹಾಲಿಂಗಪ್ಪ ಪೋಳ ಉಪನ್ಯಾಸ ನೀಡಿದರು. ಕನಕ ಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮಂಟೂರ ಅಧ್ಯಕ್ಷತೆ ವಹಿಸಿದ್ದರು. ಗುರುಪಾದೇಶ್ವರ ಮಠದ ರಾಮಯ್ಯ ಸ್ವಾಮಿ ಗಳು,ಪ್ರಮಾನಂದ ಗದ್ದುಗೆಯ ಶಿವಾನಂದ ಒಡೆಯರ ಸಾನಿಧ್ಯದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದು ಸಾಧಕರನ್ನು ಇದೆ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು. ಬೆಳಗ್ಗೆ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತಲ್ಲದೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರಥಮವಾಗಿ ಗಂಗಪ್ಪ ಬನಾಜಗೋಳ ಸ್ವಾಗತಿಸಿದರು. ಕಲ್ಮೇಶ ಅಂಬೋಗೋಳ ಕಾರ್ಯಕ್ರಮ ನಿರೂಪಿಸಿದರು. ಕೊನೆಗೆ ಪರಮಾನಂದ ಗಡದಿ ವಂದಿಸಿದರು.