ಕಾವ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅಪಾರ: ಬಸವರಾಜ ದೇವರು

ಧಾರವಾಡ 27: ಕಾವ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಪರಂಪರೆ ಎಂದೂ ಮರೆಯದ ಮಾಣಿಕ್ಯವಾಗಿದ್ದಾರೆ. ಕವಿಗಳು, ಬರಹಗಾಗರು, ಚಿಂತಕರು ಈ ದೇಶದ ಆಸ್ತಿ. ಕನ್ನಡ ನಾಡಿನ ಇತಿಹಾಸ ಸಂಸ್ಕೃತಿ ಸಾಹಿತ್ಯ ಇಷ್ಟೊಂದು ವೈಭವ ಪೂರಕವಾಗಿದೆ ಎಂದರೆ ಇದಕ್ಕೆ ಕಾರಣ ಪುರುಷರಾಗಿದ್ದಾರೆ. ಇಂದಿನ ಕಲುಷಿತ ಸಾಮಾಜಿಕ, ರಾಜಕೀಯ, ಆಥರ್ಿಕ ವಾತಾವರಣವನ್ನು ಸರಿದಾರಿಗೆ ತರಲು ಕನಕದಾಸರ ತತ್ವಗಳು ಆದರ್ಶ ನೀತಿಗಳು ಬಹಳ ಅವಶ್ಯವಾಗಿವೆ, ಎಲ್ಲರೂ ಕನಕದಾಸರ ನೀತಿ ತತ್ವಗಳನ್ನು ಪಾಲಿಸಿ ಸುಖ ಸಂತೋಷದಿಂದ ಬಾಳೋಣವೆಂದು ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ನುಡಿದರು.

ದಿ. 26ರಂದು 531 ನೇ ಕನಕ ಜಯಂತಿ ಅಂಗವಾಗಿ ರೇವಣಸಿದ್ದೇಶ್ವರ ಮಹಾಮಠ ಹುನಸೂರ  ಉತ್ಸವ ಸಮಿತಿಯವರು ಕಲಾಭವನ ಆವರಣದಲ್ಲಿ ಸಂಘಟಿಸಿದ ಕವಿಗೋಷ್ಠಿಯ ಸಾನಿದ್ಯವಹಿಸಿ ಅವರು ಮಾತನಾಡುತ್ತಿದ್ದರು.

ಜನಾರ್ಧನನಾಯಕ ಕವನ ವಾಚನಮಾಡಿ ಉತ್ತಮ ಆಡಳಿತಗಾರನಾಗಿ ವೀರ ಸೇನಾನಿಯಾಗಿ ದೈವ ಬಲದಿಂದ ನಿಧಿ ದೊರಕಿ ಭೋಗಭಾಗ್ಯಾಧಿಗಳನ್ನು ಅನುಭವಿಸುತ್ತಿದ್ದ ಒಬ್ಬ ಸುಖಪುರುಷ ವೈರಾಗ್ಯದತ್ತವಾಗಿ, ದೈವಭಕ್ತನಾಗಿ ಸಕಲ ಸಂಗಪರಿತ್ಯಾಗಿಯಾಗಿ ದಾಸಪರಂಪರೆಯನ್ನು ಸ್ವೀಕರಿಸಿ ಶ್ರೇಷ್ಠ ಹರಿಭಕ್ತನಾಗಿ ಹೊರ ಹೊಮ್ಮಿದ ವ್ಯಕ್ತಿದಾಸ ಶ್ರೇಷ್ಠ ಕನಕದಾಸರೆಂದು ಪ್ರಖ್ಯಾತರಾದರು ಎಂದು ನುಡಿದರು.

ಎಂ.ಸುದರ್ಶನರಾಜ ಸಾಹಿತಿಗಳು ಮಾತನಾಡುತ್ತ ಹರಿಕಿರ್ತನೆಗಳನ್ನು ರಚಿಸಿ ಹಳ್ಳಿ ಹಳ್ಳಿಗಳಿಗೂ ಪ್ರವಾಸ ಗೈಯುತ್ತ ಸಾಮಾಜಿಕ ಮೌಢ್ಯಗಳ ಬಗ್ಗೆ ಮೇಲು ಕೀಳುಗಳ ಬಗ್ಗೆ ಸಾಮಾಜಿಕ ಅನಿಷ್ಠಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಅಗ್ರಗಣ್ಯ ದಾಸರಾದ ಕನಕದಾಸರು ಸಮಾನತೆ ಮಾನವಿಯತೆ ಸ್ತ್ರೀ ಬಲೀಕರಣ ಮುಂತಾದ ನೀತಿ ತತ್ವಗಳನ್ನು ಜನರಲ್ಲಿ ಮೂಡಿಸಿದರು ಎಂದು ನುಡಿದರು. ಇಂದು ನಡೆದ ಕವಿಗೋಷ್ಠಿಯಲ್ಲಿ ಕವಿಯತ್ರಿಯಾದ ಮಧುಮತಿ ಈ. ಸಣಕಲ್ಲ, ಗಂಗಾಧರ್ ಗಾಡದ, ಎಸ್ ಎಸ್ ಜೋಶಿ, ಬಸವರಾಜ ಜೋಳೆನಹಳ್ಳಿ, ಈಶ್ವರ ಮುಲ್ಕಿ ಪಾಟೀಲ, ಶಿವಮಲ್ಲು ದೇವರ ಮನಿ, ಶಿವಾಜಿ ಜಾಧವ, ಶಿವರಾಜ ಈ ಸಣಕಲ ಭಾರತಿ ಬಡಿಗೇರ, ಶಾಂತಾ ಕೆ ಹೊಂಬಳ, ಪ್ರೇಮಾ ಕಮ್ಮಾರ ಮುಂತಾದ 30 ಕವಿಗಳು ಕವನವಾಚನ ಮಾಡಿದರು.

ವಿಶೇಷ ಅತಿಥಿಗಳಾಗಿ ಬಿ.ಕೆ.ಹೊಂಗಲ, ಸಿದ್ದೇಶ್ವರ್ ಹಿರೇಮಠ, ಸೀತಾ ಛಪ್ಪರ, ಲೀಲಾವತಿ ಕಳಸಪ್ಪನವರ, ಬಸವಂತಪ್ಪ ಗುಡದೇರಿ, ಶಿವಪ್ಪ ಲಾಯಲಗುಂದಿ ಆಗಮಿಸಿ ಕವನವಾಚನ ಮಾಡಿದರು. ಎನ್.ಎಚ್.ಮಾಯಕೊಂಡ ನಿವೃತ್ತ ಪ್ರಾಚಾರ್ಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಸತತ ಪರಿಶ್ರಮ ಅನುಭವ ಅಧ್ಯಯನಗಳಿಂದ ಬಂದ ಕವನಗಳು ಪರಿಪಕ್ವವಾಗಿರುತ್ತವೆ. ಕವನಗಳು ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವಂತಿರಬೇಕು. ಚಟಾಕಿಯಿಂದ ಹೊಡೆದು ಸರಿದಾರಿಗೆ ತರುವಂತೆ ತೀಕ್ಷ್ಣವಾಗಿರಬೇಕು ಎಂದು ಉದಯೋನ್ಮುಖ ಕವಿಗಳಿಗೆ ನಿದರ್ೇಶಿಸಿದರು. ಕನಕದಾಸರು ಮೇರು ವ್ಯಕ್ತಿತ್ವದಬಗ್ಗೆ ಮಾತನಾಡುತ್ತ ತಮ್ಮ ಬರಹದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ದಾಸವರಣ್ಯರೆಂದು ನುಡಿದರು.

ಗಣ್ಯ ನಾಗರೀಕರಾದ ಜಗನ್ನಾಥ ಗಡದೇ, ರಾಬರ್ಟ.ಎಸ್.ಲೋಬೋ, ಪುಂಡಲೀಕ ದಂಡಿನ, ಶಿವಾನಂದ ಅಮರಶೆಟ್ಟಿ, ಲಾಲಭಿಹುಲ ಕೋಟಿ, ಆದಿಲಅಹ್ಮದ ಶೇಖ, ಸಾದಿಕ್ ಮಂಗಳಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಿದ್ದೇಶ್ವರ ಹಿರೇಮಠ ಪ್ರಾಥರ್ಿಸಿದರು. ಮಧುಮತಿ ಸಣಕಲ ನಿರೂಪಿಸಿದರು. ಲಾರೇನ್ಸ ಕೆ ಝಳಕಿ ಸ್ವಾಗತಿಸಿದರು. ರಾಬರ್ಟ ಎಸ್ ಲಬೋ ಮಾಲಾರ್ಪಣೆ ಮಾಡಿದರು. ಹೇಮಂತ ಎಸ್ ಬಡಿಗೇರ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮ ಪೂರ್ವದಲ್ಲಿ ದಿವಂಗತ ಅಂಬರೀಶ ಖ್ಯಾತ ನಟರಾಜ ಕರಣಿ ಕೊಡುಗೈ ದೊರೆ ಇವರ ಹಾಗೂ ಹಿರಿಯ ರಾಜಕಾರಣಿ ಕೇಂದ್ರ ಮಾಜಿಸಚಿವ ಇಸ್ಲಾಂ ಸಮುದಾಯದ ಪ್ರಭಾವಿ ಮುಖಂಡ ದಿ. ಸಿ.ಕೆ.ಜಾಫರ ಶರೀಫರ ಮರಣದ ನಿಮಿತ್ತ ಶ್ರದ್ಧಾಂಜಲಿ ಅಪರ್ಿಸಿ ಮೌನಾಚರಣೆ ಮಾಡಲಾಯಿತು.