ಕನಕದಾಸರ ಸಂದೇಶಗಳು ಮನುಕುಲಕ್ಕೆ ಸಂಜೀವಿನಿಯಾಗಿವೆ

ಕನಕದಾಸರ ಸಂದೇಶಗಳು ಮನುಕುಲಕ್ಕೆ ಸಂಜೀವಿನಿಯಾಗಿವೆ 

ಮಾಂಜರಿ 18: ಕನಕದಾಸರು ದಾಸ ಸಾಹಿತ್ಯ ಸುವರ್ಣ ಯುಗದ ಪ್ರತಿಪಾದಕರಾಗಿದ್ದರು. ಅವರ ಸಂದೇಶಗಳು ಸರ್ವಕಾಲಿಕ ಸತ್ಯವಾಗಿದ್ದು ಮನುಕುಲಕ್ಕೆ ಸಂಜೀವಿನಿಯಾಗಿವೆ ಎಂದು ಮಾಂಜರಿ   ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿರುಪಾಕ್ಷ ಪೂತದಾರ್ ಹೇಳಿದರು. 

ಅವರು ಇಂದು ಮಂಜರಿ  ಗ್ರಾಮದ ಕನಕದಾಸ ಯುವಕ ಮಂಡಲ ಹಾಗೂ ಗ್ರಾಮ ಪಂಚಾಯತ್ ಇವರ ಸಯುಕ್ತಶ್ರಯದಲ್ಲಿ  ಆಯೋಜಿಸಲಾದ  ಕನಕದಾಸರ ಜಯಂತಿ ನಿಮಿತ್ಯ  ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರುಜಾತಿ, ಮತ, ಭಾಷೆ, ಪ್ರದೇಶಕ್ಕೆ ಸಿಮಿತವಾಗದೇ ವಿಶ್ವಮಾನವ ಪರಿಕಲ್ಪನೆಯನ್ನು ಹೊಂದಿದ್ದರು. ಗುಣಕ್ಕಿಂತ ಕುಲವೇ ಶ್ರೇಷ್ಠ ಎನ್ನುವಕಾಲಘಟ್ಟದಲ್ಲಿ ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು, ಕಂದಾಚಾರಗಳನ್ನು ತಿದ್ದಿ, ಸರ್ವಸಮಾನತೆ, ಸೌಹಾರ್ಧತೆ ಬೆಳೆಸಿದ ದಾಸ ಶ್ರೇಷ್ಠರಾಗಿದ್ದರು. 

ನೈತಿಕತೆಯೇ ಮನುಷ್ಯನ ಬದುಕಿನ ಜೀವಾಳ ಎಂದು ಸಾರಿದಕನಕದಾಸರು ನೀತಿಯಿಲ್ಲದ ನಾಯಕರಿಗೆತಮ್ಮ ಕೀರ್ತನೆಗಳ ಮೂಲಕ ನೈತಿಕ ಮೂಡಿಸಿದರು.ಕನಕದಾಸರು ಪ್ರಜ್ಞೆಯನ್ನು ಹಾಗೂ ಪುರಂದರದಾಸರು ಕೀರ್ತನಾ ಸಂಗೀತ ಅಶ್ವಿನಿ ದೇವತೆಗಳೆಂದು ಕರೆಯಲ್ಪಟ್ಟಿದ್ದಾರೆಎಂದು ಹೇಳಿದರು. ಈ ವೇಳೆ ಮಂಜರಿ  ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಸಂಜಯ್ ನೆರವಾಡೆ  ಸದಸ್ಯರಾದ  ಚಿದಾನಂದ ಪೂಜಾರಿ ರವೀಂದ್ರ ಪೂಜಾರಿ ಪ್ರವೀಣ್ ಜಗದಾಳೆ ಬಾಬಾ ಸಾಹೇಬ್ ಪೂಜಾರಿ ಸಂಜಯ್ ಪೂಜಾರಿ ರಾಜು ಪೂಜಾರಿ ಮಾರುತಿ ವಗ್ಗೆ ಬಬ್ರುವಾಹನ ಸಾರಾಪುರೆ  ಹಾಗೂ ಕನಕದಾಸ ಯುವಕ ಮಂಡಲದ ಕಾರ್ಯಕರ್ತರು ಹಾಜರಿದ್ದರು