ಧಾರವಾಡ, 28: 531ನೇ ಕನಕ ಜಯಂತಿ ಅಂಗವಾಗಿ ಮನಸೂರ ರೇವಣಸಿದ್ಧೇಶ್ವರ ಮಹಾಮಠ ವಿದ್ಯಾಪೀಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜರುಗಿದ ಕನಕ ಪ್ರಶಸ್ತಿ ಪ್ರದಾನ ಹಾಗೂ ಐದು ದಿನಗಳ ಕಾಲ ನಡೆದ ಕಾರ್ಯಕ್ರಮ ಸಮಾರೋಪ ಸಮಾರಂಭ ಸಂಪನ್ನವಾಯಿತು. ಕನಕ ಜ್ಯೋತಿ ಹೊತ್ತಿಸಿ ಡೊಳ್ಳು ಬಾರಿಸಿ ಚಾಲನೆ ನೀಡಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಸುಭಾಸಗೌಡ ಮಾತನಾಡಿ ಕನಕರು ಈ ನಾಡಿನ ಬಹು ದೊಡ್ಡ ದಾರ್ಶನಿಕ ಸಂತರು. ಅವರ ವಿಚಾರ ಧಾರೆಗಳು ನಮಗೆಲ್ಲರಿಗೂ ಸ್ಫೂತರ್ಿಯಾಗಿವೆ. ಹತ್ತಾರು ವರ್ಷಗಳಿಂದ ಮನಸೂರ ರೇವಣಸಿದ್ಧೇಶ್ವರ ಮಹಾಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಯೋಗದೊಂದಿಗೆ ಅತ್ಯಂತ ಉತ್ತಮವಾಗಿ ಇದೆ. ನಾಡಿಗೆ ಮಾದರಿಯಾಗುವಂತೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಬಸವರಾಜ ದೇವರು ಶ್ರೀಗಳವರ ಅವಿರತ ಶ್ರಮದಿಂದಾಗಿ ಕನಕರ ತತ್ವಗಳು ನಾಡಿನಾದ್ಯಂತ ಬೆಳಗುತ್ತಿವೆ ಎಂದರು.
ಕನಕ ಪ್ರಶಸ್ತಿಯ ಪರಿವರ್ತನಾ ಕ್ಷೇತ್ರದಲ್ಲಿ ಹೊಳೆ ಆಲೂರ ಜ್ಞಾನ ಸಿಂಧೂ ಅಂಧ ಮಕ್ಕಳ ವಸತಿ ಶಾಲೆ ಹಿರಿಯ ರಂಗಕಮರ್ಿ ಪ್ರಸನ್ನ ಹಾಗೂ ಚರಕದ ಮಹಿಳೆಯರಿಗೆ ಸಮರ್ಪಣೆ ಸಾಹಿತ್ಯ ಕ್ಷೇತ್ರದಲ್ಲಿ ಡಾ. ವಾಯ್ ಎಮ್ ಯಾಕೊಳ್ಳಿ ಮೋಹನ ನಾಗಮ್ಮನವರ ಡಾ. ಕೆ.ಜಿ ಪರಶುರಾಂ ಶಿಕ್ಷಣ ಕ್ಷೇತ್ರದಲ್ಲಿ ಬದಾಮಿಯ ಕಾಳಿದಾಸ ಶಿಕ್ಷಣ ಸಂಸ್ಥೆ ಆಡಳಿತ ಕ್ಷೇತ್ರದಲ್ಲಿ ಬಸವರಾಜು ಕಂಬಳಿ ನೇಕಾರಿಕ ಕ್ಷೇತ್ರದಲ್ಲಿ ಚಿಕ್ಕನರಗುಂದದ ರೇವಣಸಿದ್ಧೇಶ್ವರ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಕುರುಬ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕನರ್ಾಟಕ ಅಹಲ್ಯಾಬಾಯಿ ಹೆಳ್ಳರ ಸಂಘ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 111 ಸಾಧಕರಿಗೆ ಕನಕಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗಣ್ಯರಾದ ಹಜರತ್ ಮೌಲಾನಾ ಆಸಿಪ್ ಸಿಖ್ ಧರ್ಮಗುರು ಗ್ಯಾನಜಿ ಪಬೃಜೇರವೀತಿಪಾಲಿ ವಿಜ್ಞಾಮುನಿಯೋ - ಬುದ್ಧ ಎಸ್.ಎ ರಂಗನ್ನವರ ಉಪಸ್ಥಿತರಿದ್ದರು.
ಕಲಾ ತಂಡಗಳ ಪ್ರದರ್ಶನ: ಸಾಂಸ್ಕೃತಿಕ ಭವ್ಯ ಅನಾವರಣ ಕನಕ ಚಿಲಿಪಿಲಿ ಕೋಲಾಟ ಭಕ್ತ ಕನಕದಾಸ ನಾಟಕ ಜಾನಪದ ಗೀತೆಗಳು ಭರತನಾಟ್ಯ ಡೊಳ್ಳಿನ ಹಾಡು ಕುಣಿತ ಹಾಸ್ಯ ಸುಗಮ ಸಂಗೀತ ಜಾನಪದ ವೈವಿದ್ಯ ಕನಕರೂಪಕ ಇಡೀ ಕಾರ್ಯಕ್ರಮ ಆಕರ್ಷದ ಕೇಂದ್ರ ಬಿಂದುವಾಗಿ ಸಾಂಸ್ಕೃತಿಕ ಲೋಕವೇ ಭುವಿಗ ಇಳಿದಿದೆಯೋ ಎಂಬಂತೆ ವಾತಾವರಣ ಸೃಷ್ಟಿಯಾಗಿದ್ದು ಕಾರ್ಯಕ್ರಮಕ್ಕೆ ಪ್ರಭು ಹಂಚಿನಾಳ ಸ್ವಾಗತಿಸಿದರು. ಐದು ದಿನಗಳ ಕಾಲ ನಡೆದ ಸಾಂಸ್ಕೃತಿಕ ಉತ್ಸವ ಸಂಪನ್ನವಾಯಿತು.