ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ

ಧಾರವಾಡ 28: ಕನರ್ಾಟಕ ವಿದ್ಯಾವರ್ಧಕ ಸಂಘದಲ್ಲಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ವಿದ್ಯಾಪೀಠ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಆಶ್ರಯದಲ್ಲಿ 531ನೇ ಕನಕ ಜಯಂತಿ ಅಂಗವಾಗಿ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವದಲ್ಲಿ ಜನಪದ ಗೀತೆಗಳು ಮನಸೂರೆಗೊಂಡವು.

ಬಂಡ್ಲ ಹಳ್ಳಿ ವಿಜಯಕುಮಾರ, ಡಾ. ವಿ.ಸಿ. ಐರಸಂಗ ಮುಂತಾದವರ ರಚನೆಗಳನ್ನು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಯುವ ಗಾಯಕಿ ಅನಿತಾ ಆರ್. 'ಮನೆಯೊಳಗೆ ಮನೆಯೊಡೆಯ', 'ಬಿದಿರು ನಾನಾರಿಗಲ್ಲದವಳು', 'ಮಾಮರದ ತಂಪಿಗೆ', 'ಮಾತನಾಡಣ್ಣಯ್ಯ ಮಾತನಾಡು', 'ಎಲ್ಲಿಗೆ ಹೋದವೋ ಕಣ್ಣಿಗೆ ಕಾಣದಾದವೋ', 'ಸಾಗಲಿಲ್ಲ ಹೂವ ಮಾಲೆ', 'ಸೋಜುಗದ ಸೂಜುಮಲ್ಲಿಗೆ'  ಹೀಗೆ ಮುಂತಾದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಅನಿತಾ ಆರ್ ಮನ ರಂಜಿಸಿದಳು.

ಕ್ಯಾಶಿಯೋದಲ್ಲಿ ಮಂಜುನಾಥ ಕನ್ನೂರ, ತಬಲಾದಲ್ಲಿ ಯುವ ತಬಲಾ ಕಲಾವಿದ ಯಮನಪ್ಪ ಜಾಲಗಾರ ತಬಲಾದಿಂದ ಕೇಳುಗರನ್ನು ರಂಜಿಸಿದರು.  ಅದೇ ರೀತಿ ಹಿನ್ನೆಲೆ ಸಂಗೀತದಲ್ಲಿ ಶಿವಕುಮಾರ ಮಂಗಳೂರು ಹಾಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.