ಲೋಕದರ್ಶನ ವರದಿ
ಕಂಪ್ಲಿ 03: ಇಲ್ಲಿನ ಕಂಪ್ಲಿ.ಕೊಟೆಯ ತುಂಗಭದ್ರಾ ನದಿ ಸೇತುವೆಯ ಎರಡು ಬದಿಯಲ್ಲಿ ರಕ್ಷಣಾ ಕಂಬಿಗಳು ಕಳಪೆ ಕಾಮಗಾರಿಯಾಗಿದ್ದರಿಂದ ಅಳವಡಿಸುವ ರಕ್ಷಣಾ ಕಂಬಿಗಳ ಹೊತ್ತ ಸ್ತಂಭಜೋತೆಗೆ ಗಬ್ಬಿಣ ಕಿತ್ತಿ ಬಂದಿದೆ, ಮುರಿದಿವೆ.
ಸೇತುವೆ ನಿರ್ವಹಣೆಯ 46ಲಕ್ಷ ರೂ.ಗಳ ವೆಚ್ಚದಲ್ಲಿ, 600ಮೀ. ಉದ್ದದ ಸೇತುವೆಯ ಎರಡು ಬದಿಯ ರಕ್ಷಣಾತ್ಮಕ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ನಿಮರ್ಿಸುವ ಕಾಮಗಾರಿ ಡಿಸ್ಸೆಂಬರ್ ತಿಂಗಳಲ್ಲಿ ಆರಂಭಗೊಂಡಿತ್ತು. ಸೇತುವೆಯ ಮೇಲೆ ಹೊಸದಾಗಿ ಮೂರಡಿಯ ಕಂಬಗಳನ್ನು ಅಳವಡಿಸಲು ಅರ್ಧ ಅಡಿಯಷ್ಟು ತೆಗೆದು ರಾಡ್ಗಳನ್ನು ಸರಿಯಾಗಿ ಕಾಲಂಗಳಲ್ಲಿ ಜೋಡಿಸಿಲ್ಲದಕಾರಣ 2ಇಂಚಿನ ಪೈಪುಗಳನ್ನು ಅಳವಡಿಸುವ ಮೂಲಕ ರಕ್ಷಣಾ ಕಂಬಿಗಳನ್ನು ರೂಪಿಸಲಾಗುವ ಕಾಮಗಾರಿ ತರತುರಿ ಮುಗಿದಿತ್ತು.
ಯಾವುದೊಂದು ವಾಹನ ಸೇತುವೆ ಮೇಲೆ ಚಲಿಸುವಾಗ ಕಂಬಿಗೆ ಡಿಕ್ಕಿ ಹೊಡೆದ ಪರಿಣಾಮವೋ, ಕಿಡಿಗೇಡಿಗಳ ಕುತಂತ್ರವೋ ಅಡ್ಡಲಾಗಿ ಹಾಕಿದ ರಕ್ಷಣಾತ್ಮಕ ಕಂಬಿ ಮುರಿದಿತ್ತು. ಇದನ್ನು ವೆಲ್ಡಿಂಗ್ ಮಾಡಿ ಜಾಯಿಂಟ್ ಮಾಡಲಾಗಿದೆ. ಆದರೆ, ಕಂಬಿಗಳ ಕಾಲಂನ ಸ್ತಂಬವೊಂದು ಕಿತ್ತು ಬಂದು ವಾಲಿದೆ.
ಸುಮಾರು 6ದಶಕಗಳ ಸೇತುವೆಯಾಗಿದ್ದು ಶಿಥಿಲಗೊಂಡಿದ್ದು, ಹೊಸ ಸೇತುವೆ ನಿಮರ್ಿಸುವಂತೆ ಜನಪ್ರತಿನಿಧಿಗಳನ್ನು, ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ ಹಿನ್ನಲೆಯಲ್ಲಿ ಈಗಿರುವ ಸೇತುವೆಯನ್ನು ಬಲವಧರ್ಿಸಿ ಸಮಾಧಾನಪಡಿಸಲಾಗಿತ್ತು. ಆದರೆ, ಸೇತುವೆಗೆ ಅಳವಡಿಸಿದ ರಕ್ಷಣಾತ್ಮಕ ಕಂಬಿಗಳು ಎಷ್ಟರ ಮಟ್ಟಿಗೆ ರಕ್ಷಣೆ ನೀಡುತ್ತವೆ ಎನ್ನುವುದನ್ನು ಕಾದು ನೋಡಬೇಕು
ಪಾದಚಾರಿಗಳಿಗಾಗಿ ಸೇತುವೆ ಎರಡು ಪಕ್ಕದಲ್ಲಿ ಕಬ್ಬಿಣದ ಪಾದಚಾರಿ ರಸ್ತೆ ನಿಮರ್ಿಸಿ. ಸೇತುವೆ ಮೇಲೆ ನೀರು ಬಂದರೆ ಕಳಪೆ ಕಾಮಗಾರಿಯಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.