ಕಂಪ್ಲಿ: ಕೆರೆ ಅಭಿವೃದ್ದಿ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ

ಲೋಕದರ್ಶನ ವರದಿ

ಕಂಪ್ಲಿ 22: ಐತಿಹಾಸಿಕ ಸೋಮಪ್ಪ ಕೆರೆಯನ್ನು 8.ಕೋಟಿ ರೂ. ಗಳಲ್ಲಿ ಕೆರೆ ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ವಿಕ್ಷೀಸಿದರು. ನಂತರ ಅತಿಥಿಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ. ಸರ್ಕಾರಿ  ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡ  94ಸಿಸಿ ಮತ್ತು 94ಸಿ ಅರ್ಜಿಗಳ  ಸ್ಥಿತಿಗತಿಯನ್ನು, ಕಂದಾಯ ಇಲಾಖೆಗಳ ಕಡತಗಳ ಪರಿಶೀಲಿಸಲು  ತಾಲೂಕಿನ ಎಲ್ಲಾ ಕಛೇರಿಗಳಿಗಾಗಿ ಕಂದಾಯ ಇಲಾಖೆಯಿಂದ ನಿವೇಶನ ನೀಡಲಾಗುವುದು. ಹುದ್ದೆಗಳ ನೇಮಕಕ್ಕೆ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದುಎಂದರು

   ಸೋಮಪ್ಪ ಕೆರೆ ವೀಕ್ಷಿಸುವಲ್ಲಿ ಪುರಸಭೆ ಅಧ್ಯಕ್ಷ ಎಂ.ಸುಧೀರ್, ಪುರಸಭೆ ಸದಸ್ಯ ಸಿ.ಆರ್.ಹನುಮಂತ, ತಾಪಂ ಸದಸ್ಯ ಒಬಳೇಶ್, ತಹಶೀಲ್ದಾರ ಎಂ.ರೇಣುಕಾ, ಉಪ ತಹಶೀಲ್ದಾರ ಬಿ.ರವೀಂದ್ರಕುಮಾರ್, ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ, ಜೆ.ಇ.ಗೋಪಾಲ್, ಲೆಕ್ಕಿಗ ರಮೇಶ್ ಬೆಳಂಕರ್ ಆಹಾರ ನಿರೀಕ್ಷಕ ರವಿ ರಾಥೋಡ್, ಶಿರಸ್ತೆದಾರ ಎಸ್.ಶ್ರೀಧರ, ಕಂದಾಯ ಅಧಿಕಾರಿ ಎಸ್.ಎಸ್.ತಂಗಡಗಿ, ಸೇರಿ ಕಂದಾಯ, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.