ಕಂಪ್ಲಿ : ನಿವೇಶನದೊಂದಿಗೆ ಪಟ್ಟಾ ನೀಡುವ ಭರವಸೆ ಶಾಸಕ ಗಣೇಶ್

ಲೋಕದರ್ಶನ ವರದಿ

ಕಂಪ್ಲಿ 07: ಕಳೆದ 10ವರ್ಷಗಳಿಂದ ಕಂಪ್ಲಿ ಕ್ಷೇತ್ರ ಅಭಿವೃದ್ದಿ ಶೂನ್ಯ. . ಮೂಲಭೂತ ಸೌಲಭ್ಯಗಳಿಲ್ಲ   ನನ್ನ ರಾಜಿನಾಮೆ ಕುರಿತು ಮಾಧ್ಯಮಗಳಲ್ಲಿ ಬರೋ ಸುದ್ದಿಗಳು ಸುಳ್ಳು. ನನ್ನ ಕ್ಷೇತ್ರದ ಅಭಿವೃದ್ದಿ ಮತ್ತು ಸಂಚಾರ ಬಿಟ್ಟು ಬೇರೆ ಆಲೋಚನೆ ಇಲ್ಲ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು

ವಾಡರ್್ ಸಂಚಾರದ ಸಮಯದಲ್ಲಿ ಮಾತನಾಡಿ,  ಶನಿವಾರ ಬೆಳಿಗ್ಗೆಯಿಂದಲೇ ಶಾಸಕರು 5, 8, 9, 12 ಮತ್ತು 20ನೇ ವಾಡರ್್ಗಳಲ್ಲಿ ಸಂಚರಿಸಿ ಜನರ ಕುಂದು ಕೂರತೆಗಳನ್ನು ಆಲಿಸಿದರು 9ನೇವಾಡರ್್ನಲ್ಲಿ ಕಾಕರ ಓಣಿಯಚರಂಡಿ ನಿರ್ಮಿಸಿ  ಡೆಕ್ಸ್ಲಾಬ್ ನಿರ್ಮಾಣ, ಬಿಡಿಸಿಸಿ ಬ್ಯಾಂಕ್ ಹಿಂದಿನ ಹ್ಯಾಂಡ್ಬೋರ್ ತೆಗೆದು ಸಿಸ್ಟನ್ ಟ್ಯಾಂಕ್ ಅಳವಡಿಸುವುದು, ಕೆಇಬಿ ಬಳಿಯಲ್ಲಿ ಹೊಸ ಬೋರ್ವೆಲ್ ಹಾಕಿಸುವುದು, ಗುಲ್ಬಗರ್ಾ ಓಣಿಯ ವಾಸಿತ ಜನರಿಗೆ ಪಟ್ಟಾ ಕೊಡುವಂತೆ ಪುರಸಭೆ ಸದಸ್ಯ ಎಂ.ಮರೆಣ್ಣ ಶಾಸಕರ ಗಮನಕ್ಕೆ ತಂದರು.

    20ನೇ ವಾರ್ಡ ಶಿಬರದಿನ್ನಿಯ ಎಡಭಾಗದಲ್ಲಿ ಕಳೆದ 30ವರ್ಷಗಳಿಂದ ವಾಸ ಮಾಡುತ್ತಿದ್ದು 94ಸಿಸಿ ಕಾಯ್ದೆಯಡಿಯಲ್ಲಿ ಅಕ್ರಮವಾಗಿ ಮನೆಗಳನ್ನು ನಿಮರ್ಿಸಿಕೊಂಡಿದ್ದು ಸಕ್ರಮಗೊಳಿಸುವಂತೆ ಕೆ.ಭೀಮಪ್ಪ ಸೇರಿ ಅನೇಕರು ಶಾಸಕರನ್ನು ಒತ್ತಾಯಿಸಿದರು ಈ ಸಂದರ್ಭದಲ್ಲಿ ಶಾಸಕರು ಸ್ಪಂದಿಸಿ, ಪುರಸಭೆಗೊಳಪಟ್ಟ ಸ್ಥಳವನ್ನು ಸಮೀಕ್ಷೆ ಮಾಡಿಸಿ, ನಿವೇಶನಗಳನ್ನು ಮರುವಿನ್ಯಾಸಗೊಳಿಸಿ ಸಮೀಕ್ಷೆ ಪ್ರಕಾರ ವಾಸವಿರುವ ಫಲಾನುಭವಿಗಳಿಗೆ ನಿವೇಶನದೊಂದಿಗೆ ಪಟ್ಟಾ ನೀಡಲಾಗುವುದು ಎಂದು ಭರವಸೆ ನೀಡಿದರು. 

      ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, 8ಮತ್ತು 5ನೇ ವಾರ್ಡಗಳಲ್ಲಿ  ರಸ್ತೆ, ಚರಂಡಿ ನಿಮರ್ಿಸಲು ಶಾಸಕರು ಅಂದಾಜುಪಟ್ಟಿ ತಯಾರಿಸುವಂತೆ, 8ನೇವಾಡರ್್ನಲ್ಲಿ ಬೋರ್ ರೀಪೇರಿಗೊಳಿಸುವಂತೆ, 3ಮತ್ತು 4ನೇ ವಾರ್ಡಗಳಲ್ಲಿ  ಅಕ್ರಮಸಕ್ರಮದಲ್ಲಿ 150ಫಲಾನುಭವಿಗಳಿಗೆ ಪಟ್ಟಾನೀಡಿದ್ದು ಖಾತೆನೋಂದಣಿ ಮಾಡಿಕೊಡುವಂತೆ ಶಾಸಕರು ಸೂಚಿಸಿದ್ದಾರೆ. ಅಲ್ಲದೆ, 3 ಮತ್ತು 4ನೇವಾಡರ್್ಗಳಲ್ಲಿ ಅಕ್ರಮ ಸಕ್ರಮದಲ್ಲಿ 94ಸಿಸಿಯಲ್ಲಿ ಪಟ್ಟಾ ನೀಡುವಂತೆ ತಾಲೂಕುಆಡಳಿತಕ್ಕೆ ಶಾಸಕರು ನಿರ್ದೇಶನ ನೀಡಿದ್ದಾರೆ ಎಂದರು. 

    ವಾಡರ್್ಸಂಚಾರದಲ್ಲಿ ಶಾಸಕರೊಂದಿಗೆ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಇಟ್ಗಿ ಬಸವರಾಜಗೌಡ, ಬಿ.ಜಾಫರ್, ವೈ.ಅಬ್ದುಲ್ ಮುನಾಫ್, ಇಸ್ಮಾಯಿಲ್ ಬೇಗ್, ಕಾಕರ್ಲ ಸುಧಾಕರ, ಕೆ.ಮನೋಹರ, ಎಸ್.ಆರ್.ವಲಿಭಾಷ, ಶೆಕ್ಷಾವಲಿ, ಅಕ್ಕಿಜಿಲಾನ್, ಸದಸ್ಯ ಎಸ್.ಸುರೇಶ್, ಕರಿಬಸವನಗೌಡ, ಯು.ರಾಮದಾಸ್, ಮುರಾರಿಲಕ್ಷ್ಮಿ ಜೆ.ಇ.ಗೋಪಾಲ್, ಗ್ರಾಲೆ ಗಿರೀಶ್ಬಾಬು, ಜೆಸ್ಕಾಂ ಜೆ.ಇ.ಶ್ರೀನಿವಾಸರಾಜ್, ಎ.ಕೆ.ರಾಧಿಕಾ, ವೆಂಕೋಬಾ ಸೇರಿ ಅನೇಕರು ಪಾಲ್ಗೊಂಡಿದ್ದರು.