ಕಂಪ್ಲಿ: ಕೊಟ್ಟಾಲ್ ಶ್ರೀರಾಮಚಂದ್ರ ಮಿಷನ್ನಲ್ಲಿ ಉಚಿತ ಧ್ಯಾನ ಶಿಬಿರ

ಲೋಕದರ್ಶನ ವರದಿ

ಕಂಪ್ಲಿ 15: ಪ್ರತಿಯೊಬ್ಬರು ಧ್ಯಾನಾಸಕ್ತಿಯನ್ನು ರೂಢಿಸಿಕೊಂಡಗಾ ಆರೋಗ್ಯ.  ಸ್ಮರಣೆಶಕ್ತಿ, ಏಕಾಗ್ರತೆ ಮತ್ತು ಮಾನಸಿಕ ಕಿರಿಕಿರಿಯನ್ನು ತೊಲಗಿಸಲು ಧ್ಯಾನ ರಾಮಬಾಣವಾಗಿದೆ.  ಎಂದು ಕಂಪ್ಲಿ ಕೊಟ್ಟಾಲ್ನ ಶ್ರೀರಾಮಚಂದ್ರ ಮಿಷನ್ನ ಪ್ರಶಿಕ್ಷಕ ಎಂ.ರಾಮಚಂದ್ರ ಹೇಳಿದರು. 

     ಅವರು ತಾಲೂಕಿನ ಕಂಪ್ಲಿ ಕೊಟ್ಟಾಲ್ ಗ್ರಾಮದಲ್ಲಿನ ಶ್ರೀರಾಮಚಂದ್ರ ಮಿಷನ್ ಆವರಣದಲ್ಲಿ, ಉಚಿತ ಧ್ಯಾನ ತರಬೇತಿ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ, ಧ್ಯಾನಕ್ರಮಬದ್ಧವಾಗಿ ಮಾಡುವುದರಿಂದ  ಆತ್ಮಸ್ಥೈರ್ಯ ಹೆಚ್ಚಳ, ದೈನಂದಿನ ಚಟುವಟಿಕೆಗಳಲ್ಲಿ  ಸರ್ವರೂ ಧ್ಯಾನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. 

    ರಾಮಚಂದ್ರ ಮೀಷನ್ ಆವರಣದಲ್ಲಿ ಮೇ.12ರಿಂದ ಮೇ.30ರತನಕ ಸಂಜೆ 5.30ರಿಂದ 7ಗಂಟೆತನಕ ಉಚಿತ ಧ್ಯಾನ ತರಬೇತಿ ನೀಡಲಾಗುತ್ತಿದೆ. ಧ್ಯಾನ ಕುರಿತ ಹೆಚ್ಚಿನ ಮಾಹಿತಿಗಾಗಿ ರಾಮಚಂದ್ರ ಮೀಷನ್ಗೆ ಧಾವಿಸುವಂತೆ ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಧ್ಯಾನ ಮಿಷನ್ ಸಂಚಾಲಕರಾದ ಕೆ.ನಾಗರಾಜ, ಬಿ.ರಮೇಶ್, ಟಿ.ಗಂಗಾಧರ ಸೇರಿ ಧ್ಯಾನ ಆಸಕ್ತರು ಪಾಲ್ಗೊಂಡಿದ್ದರು.