ಲೋಕದರ್ಶನ ವರದಿ
ಕಂಪ್ಲಿ 27: ತಾಯಂದಿರು ಮಕ್ಕಳಿಗೆ ಶಿಕ್ಷಣ ಕೊಡಿಸಿ. ಭಗೀರಥ ಸಮಾಜದವರು ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮೆಟ್ರಿ ಜಿಪಂ ಸದಸ್ಯೆ ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯೆ ಎಂ.ವೆಂಕಟನಾರಮ್ಮ ಹೇಳಿದರು.
ತಾಲೂಕಿನ ಹಂಪಾದೇವನಹಳ್ಳಿ ಗ್ರಾಮದಲ್ಲಿ ಭಗೀರಥ ಉಪ್ಪಾರು ಸಂಘದವರು ಹಮ್ಮಿಕೊಂಡ ಮೊದಲ ವರ್ಷದ ಭಗೀರಥ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಯುವಜನತೆ ಉನ್ನತ ಶಿಕ್ಷಣ ಪಡೆಯುವಲ್ಲಿ ಮುಂದಾಗಬೇಕು. ಸೂಕ್ತ ತರಬೇತಿ ಪಡೆದು ಸ್ವ ಉದ್ಯೋಗ ಪಡೆದು ಕೊಳ್ಳಬೇಕೆಂದರು
ಭಗೀರಥ ಉಪ್ಪಾರ ಸಂಘದ ಕಂಪ್ಲಿ ತಾಲೂಕು ಘಟಕ ಅಧ್ಯಕ್ಷ ಉಪ್ಪಾರ ದೊಡ್ಡ ಬಸಪ್ಪ ಮಾತನಾಡಿ, ಉಪ್ಪಾರ ಸಮುದಾಯದವರು ನಾನಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು ಶಿಕ್ಷಣ, ರಾಜಕೀಯ ಪ್ರಾತಿನಿಧ್ಯತೆಗಳಿಸುವ ಮೂಲಕ ಸವರ್ಾಂಗೀಣ ಪ್ರಗತಿಸಾಧಿಸಬೇಕು. ಎಂದರು.
ಹಂಪಾದೇವನಹಳ್ಳಿ ಗ್ರಾಮದ ಎಲ್ಎಲ್ಸಿ ಕಾಲುವೆಯಿಂದ ಗ್ರಾಮದ ಆಂಜನೇಯ ದೇವಸ್ಥಾನದತನಕ ಭಗೀರಥ ಮಹಷರ್ಿ ಭಾವಚಿತ್ರ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಮಂಗಳವಾಧ್ಯ, ತಾಷಾರಾಂಡೋಲ್, ಕಳಸಧಾರತಿ, ಡೊಳ್ಳು ಕುಣಿತ ಸೇರಿ ಜನಪದ ವಾದ್ಯಗಳು ಪಾಲ್ಗೊಂಡಿದ್ದವು.
ಭಗೀರಥ ಉಪ್ಪಾರ ಸಮಾಜದ ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಅಶ್ವತ್ಥಪ್ಪ, ಗ್ರಾಪಂ ಅಧ್ಯಕ್ಷ ಆರ್.ಶಿವನಗೌಡರೆಡ್ಡಿ, ಸದಸ್ಯರಾದ ಪಕ್ಕೀರಪ್ಪ, ರತ್ನಮ್ಮ, ಮುಖಂಡರಾದ ಜೆ.ರಾಮಣ್ಣ, ಇಟಗಿ ಬಸಪ್ಪ, ಎ.ಹುಲುಗಪ್ಪ, ಲಿಂಗನಗೌಡ್ರು, ಅಂಜಿನಪ್ಪ, ಎಸ್.ವೆಂಕಟೇಶ್, ಮಂಜುನಾಥ, ಗ್ರಾಲೆ ಮಹ್ಮದ್ ಶರೀಫ್ ಸೇರಿ ಗ್ರಾಮಸ್ಥರು, ಭಗೀರಥ ಉಪ್ಪಾರ ಸಮುದಾಯದವರು ಸಡಗರ ಸಂಭ್ರಮಗಳಿಂದ ಪಾಲ್ಗೊಂಡಿದ್ದರು.